ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಐಎನ್‌ಎಕ್ಸ್ ಮೀಡಿಯಾ ಕಂಪೆನಿಗೆ ವಿದೇಶಿ ಬಂಡವಾಳ ಹೂಡಿಕೆಗೆ ಅಕ್ರಮವಾಗಿ ಸಹಕರಿಸಿದ್ದ ಆರೋಪದಡಿ ಇಡಿ ವಿಚಾರಣೆ ನೆಡೆಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು ಆದರೆ ಅವರು ಮಧ್ಯದಲ್ಲಿ ಜಾಮೀನಿಗೆ ಕೂಡ ಪ್ರಯತ್ನಿಸಿದರು ಆದರೆ ಯಾವುದೇ ಜಮೀನುಗಳು ಸಿಕ್ಕಿರಲಿಲ್ಲ ಇದೀಗ ಚಿದಂಬರಂ ಅವರು ಬಿಡುಗಡೆಯಾಗಿ ಹೊರಬಂದಿದ್ದಾರೆ ಅವರು ಹೊರಬಂದ ಕೂಡಲೇ ಮೊದಲು ಫೋನ್ ಕರೆ ಮಾಡಿದ್ದು ಯಾರಿಗೆ ಎನ್ನುವುದು ಕೌತುಕದ ಸಂಗತಿಯಾಗಿತ್ತು.
ಕಾಂಗ್ರೆಸ್ ಪಕ್ಷದ ನಾಯಕರೂ ವಕೀಲಿ ವೃತ್ತಿಯ ಸಹಪಾಠಿಗಳೂ ಆಗಿದ್ದು ಈ ಪ್ರಕರಣದಲ್ಲಿ ಜೈಲಿನಿಂದ ಹೊರಬರಲು ಶ್ರಮಿಸಿದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರಿಗೆ ಚಿದಂಬರಂ ಮೊದಲು ಕರೆ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.