ನ್ಯಾಯಕ್ಕಾಗಿ ಹೋರಾಡುತ್ತಿರುವ ಎಲ್ಲರ ಒಂದು ಅಪೇಕ್ಷೆ ನ್ಯಾಯಮೂರ್ತಿಗಳಿಂದ ನಮಗೆ ನ್ಯಾಯ ಸಿಗುತ್ತೆ ಅಂತ ಆದರೆ ಇದೀಗ ನ್ಯಾಯಮೂರ್ತಿಗಳು ಕೂಡ ಲಂಚವನ್ನು ತೆಗೆದುಕೊಳ್ತಾರೆ ಅಂದ್ರೆ ಇನ್ನೆಲ್ಲಿ ನ್ಯಾಯ ಅಲಹಾಬಾದ್ ಹೈಕೋರ್ಟಿನ ಹಾಲಿ ನ್ಯಾಯಾಧೀಶ ನಾರಾಯಣ ಶುಕ್ಲಾ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಸೆಪ್ಟಂಬರ್ 2017ರಲ್ಲಿ ಬಂಧಿತರಾಗಿದ್ದ ಒಡಿಶಾ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಐ ಎಂ ಖುದ್ದುಸಿ ಹಾಗೂ ಭಾವನಾ ಪಾಂಡೆ, ಭಗವಾನ್ ಪ್ರಸಾದ್ ಸಹಿತ ನಾಲ್ಕು ಮಂದಿ ಇತರ ದಲ್ಲಾಳಿಗಳು ಇತರ ಆರೋಪಿಗಳಾಗಿದ್ದಾರೆ.
ಗುಣಮಟ್ಟದ ಸೌಲಭ್ಯಗಳ ಕೊರತೆ ಹಾಗೂ ಇತರ ಮಾನದಂಡಗಳನ್ನು ಪಾಲಿಸದ ಪ್ರಸಾದ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಾರದು ಎಂದು ಕೇಂದ್ರ ಸರಕಾರ ಮೇ 2017ರಲ್ಲಿಯೇ ಸೂಚಿಸಿದ್ದರೂ ಜಸ್ಟಿಸ್ ಶುಕ್ಲಾ ಅವರಿಗೆ ಲಂಚ ನೀಡಿ ಅನುಕೂಲಕರ ತೀರ್ಪು ಪಡೆದಿದೆ ಎಂಬ ಆರೋಪ ಅವರ ಮೇಲಿರುವುದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ .