ಉಪಚುನಾವಣೆ ಮುಗಿದ ನಂತರ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ ಉಪ ಚುನಾವಣೆಯ ಮೊದಲು ಹೇಳಿಕೆಗಳನ್ನು ಕೊಡುತ್ತಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಈಗ ಬೇರೆ ರೀತಿಯ ಕಾರಣಗಳನ್ನು ಕೊಡುತ್ತಿದ್ದಾರೆ ಇನ್ನು ಯಡಿಯೂರಪ್ಪ ಸರಕಾರವನ್ನು ಕೆಡವಲು ಸಾಧ್ಯವಿಲ್ಲ ಎಂದುಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಅವರಲ್ಲಿ ಕೆಲವೊಂದು ಮನವಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ನಿನ್ನೆ ಕುಮಾರಸ್ವಾಮಿ ಅವರು ತಮ್ಮ ಯೋಜನೆಯ ಕುರಿತು ಮಾತನಾಡುವಾಗ

‘ಯಡಿಯೂರಪ್ಪನವರೇ, ರಾಮನಗರ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು 2018ರ ಅವಧಿಯಲ್ಲಿ ಮಂಜೂರು ಮಾಡಿದ್ದೆ. ಆದರೆ ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ರಾಮನಗರದ ಅನುದಾನ ತಡೆ ಹಿಡಿಯಬೇಡಿ ಅದು ಸರಿಯಲ್ಲ ‘ ಎಂದು ಆಕ್ಷೇಪಿಸಿದ್ದಾರೆ. ಎಂದು ಕುಮಾರಸ್ವಾಮಿಯವರು ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ ಆದರೆ ಇದು ಮನವಿಯೇ ಅಥವಾ ಬೇರೆ ಯಾವ ಉದ್ದೇಶವೂ ಇನ್ನೂ ತಿಳಿದು ಬಂದಿಲ್ಲ ಇದಕ್ಕೆ ಇನ್ನೂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿಲ್ಲ .






