ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ ಆದರೆ ಇದನ್ನು ರಾಜಕೀಯವಾಗಿ ಕಾಂಗ್ರೆಸ್ ನವರು ಬಿಂಬಿಸುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಅವರು ಹೇಳುತ್ತಿದ್ದಾರೆ ಪೌರತ್ವ ತಿದ್ದುಪಡಿ ಮಸೂದೆ ಸರಿಯೆಂದು ಹೇಳುತ್ತಿರುವವರು ಒಂದು ಕಡೆಯಾದರೆ ವಿರೋಧಿಗಳು ಕೂಡ ಅಷ್ಟೇ ಆಗಿದ್ದಾರೆ ಇದಕ್ಕೆ ನಾಗರಿಕತೆಯಿಂದ ವಂಚಿತರಾದವರಿಗೆ ನಾವು ಪೌರತ್ವ ನೀಡುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆಯೂ ಬೇರೆ ದೇಶಗಳಿಂದ ಬಂದವರಿಗೆ ಪೌರತ್ವ ನೀಡಲಾಗಿದೆ. ಕಾಂಗ್ರೆಶ್ ಹತಾಶೆಗೊಂಡು ಜನರಲ್ಲಿ ತಪ್ಪು ಭಾವನೆ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ರಾಹುಲ್ ಗಾಂಧಿ ಎಂದೂ ಕೂಡ ಸಾವರ್ಕರ್ ಆಗಲು ಸಾಧ್ಯವಿಲ್ಲ. ಬದಲಾಗಿ ಉದ್ಧವ್ ಠಾಕ್ರೆ ಆಗಲು ಸಾಧ್ಯ. ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಅವರ ನಕಲಿ ಗಾಂಧಿಗಿರಿ ಎಲ್ಲರಿಗೂ ಗೊತ್ತು ಪೌರತ್ವ ಮಸೂದೆಯನ್ನು ಮುಂದಿಟ್ಟುಕೊಂಡು ಇಲ್ಲದ ಸಲ್ಲದ ಹೇಳಿಕೆ ಕೊಟ್ಟುಕೊಂಡು ಓಡಾಡುತ್ತಿರುವ ರಾಹುಲ್ ಗಾಂಧಿ ಮೊದಲು ಅದೇನು ಎಂದು ತಿಳಿದುಕೊಳ್ಳಬೇಕು ಎಂದು ಪ್ರಹ್ಲಾದ ಜೋಶಿಯವರು ಹೇಳಿದ್ದಾರೆ .