ಕರ್ನಾಟಕದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊದಿದ್ದ ವಿಷ್ಣುವರ್ಧನ್ ಅವರು ನಮ್ಮನೆಲ್ಲಾ ಬಿಟ್ಟು ದೈವಾದಿನರಾದ ಬಳಿಕ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಮಾಡುವಂತೆ ಸರ್ಕಾರಕ್ಕೆ ಮನವಿಮಾಡಿದ್ದರು ಅದರ ಅದಕ್ಕೆ ಯಾವುದೇ ರೀತಿಯ ಕಾರ್ಯ ಮುಂದುವರಿದಿರಲಿಲ್ಲ ಆದರೆ ಇದೀಗ ಮತ್ತೆ ಆ ವಿಚಾರ ಕೇಳಿಬರುತ್ತಿದೆ ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿಮಾನಿಗಳ ಒತ್ತಾಸೆಯಂತೆ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಅಡಿಗಲ್ಲು ಹಾಕಬೇಕೆಂದು ಮನವಿ ಮಾಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ ಸ್ಮಾರಕ ನಿರ್ಮಾಣ ಸಂಬಂಧ ಎದುರಾಗಿರುವ ಕಾನೂನು ತೊಡಕುಗಳು, ಜಮೀನು ಹಸ್ತಾಂತರ, ಹಣಕಾಸಿನ ನೆರವು ಸೇರಿದಂತೆ ಸ್ಮಾರಕಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಭಿಮಾನಿಗಳು ವಿಷ್ಣುದಾದ ಎಂದು ಪ್ರೀತಿ ಇಂದ ವಿಷ್ಣುವರ್ಧನ್ ಅವರನ್ನು ಕರೆದು ಅವರನ್ನು ಆರಾಧಿಸುವ ಅಭಿಮಾನಿಗಳು ಲಕ್ಷಾಂತರ ಜನ ಇದ್ದಾರೆ ಸಾಹಸ ಸಿಂಹ ತಮ್ಮ ಜೀವನದಲ್ಲಿ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಾ ಚಿತ್ರ ರಂಗದಲ್ಲಿ ಮುಂದುವರೆದವರು ರಾಜ್ಯದಲ್ಲಿ ಅವರ ಅಭಿಮಾನಿಗಳ ಆಸೆಯಂತೆ ಆದಷ್ಟು ಬೇಗ ಸ್ಮಾರಕ ಸಿದ್ದವಾಗಲಿ ಎಂದು ಎಲ್ಲರ ಆಶಯ.