ಪೌರತ್ವದ ಕಿಚ್ಚು ಮಂಗಳೂರಿನಲ್ಲಿ ಹೆಚ್ಚಾಗಿತ್ತು ಪೋಲಿಸರಿಂದ ಗೋಲಿಬಾರ್ ಕೂಡ ನೆಡೆಸಬೇಕಾದ ಪರಿಸ್ಥಿತ ಎದುರಾಗಿತ್ತು ಇದನ್ನೆಲ್ಲಾ ಗಮನಿಸಿ ಪರಿಸ್ಥಿತಿಯ ಬಗ್ಗೆ ತಿಳಿಯಲು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಭೇಟಿಯನ್ನು ತಡೆ ಹಿಡಿಯಲಾಗಿದೆ. ಈ ನಡೆ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನನ್ನ ಆರೋಗ್ಯ ಸರಿ ಇಲ್ಲದಿದ್ದರು ನಿನ್ನೆ ಮಂಗಳೂರಿಗೆ ಹೊರಟಿದ್ದೆ. ನಿನ್ನೆಯೂ ನಮ್ಮ ಫ್ಲೈಟ್ ಗೆ ಅವಕಾಶ ಕೊಡಲಿಲ್ಲ. ಇವತ್ತು ನಾನು ಮಂಗಳೂರಿಗೆ ಹೊರಟಿದ್ದೆ. ಇವತ್ತು ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಹಾಗೂ 22 ರವರೆಗೆ ಮಂಗಳೂರಿಗೆ ಬರದಂತೆ ಸೂಚಿಸಿದ್ದಾರೆ. ನಾನೊಬ್ಬ ಪ್ರತಿಪಕ್ಷ ನಾಯಕ. ನಾನು ನೊಂದವರಿಗೆ ಸಾಂತ್ವನ ಹೇಳೋಕೆ ಅವಕಾಶ ಇಲ್ವಾ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.