ಮೋದಿ ಪರ್ವ ಎಂಬಂತೆ ಮೋದಿ ಅವರು ಮಾಡಿದ ರೈತ ಸ್ನೇಹಿ ನೀತಿಗಳಿಂದ ಪ್ರಭಾವಿತರಾದ ತಮಿಳುನಾಡಿನ ರೈತ ತಮ್ಮ ಭೂಮಿಯಲ್ಲಿ ಪ್ರಧಾನಿ ಮೋದಿಯವರ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದಲ್ಲಿ ಪ್ರತಿ ನಿತ್ಯ ಆರತಿ ನಡೆಯುತ್ತದೆ.
ತಿರುಚಿರಾಪಳ್ಳಿಯಿಂದ 63 ಕಿ.ಮೀ ದೂರದಲ್ಲಿರುವ ಇರಾಕುಡಿ ಗ್ರಾಮದ ನಿವಾಸಿ 50 ವರ್ಷದ ರೈತ ಪಿ.ಶಂಕರ್ ದೇವಾಲಯ ನಿರ್ಮಿಸಿದ್ದಾರೆ. 8 ಚದರ ಅಡಿ ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಸುಮಾರು 1.2 ಲಕ್ಷ ರೂಪಾಯಿ ವೆಚ್ಚವಾಗಿದೆ. ಪ್ರತಿಮೆಯನ್ನು ಮೋದಿ ಸ್ಟೈಲ್ ನಲ್ಲಿಯೇ ನಿರ್ಮಿಸಲಾಗಿದೆ.