ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ,ಮಲೆಯಾಳಂ ನಟಿ, ಕಣ್ಸನ್ಹೆ ಸುಂದರಿ ಪ್ರಿಯಾ ವಾರಿಯರ್ಗೆ ಇನ್ಸ್ಟಾಗ್ರಾಮಲ್ಲಿ ವಿಡಿಯೋವೊಂದನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಚಾಪಕ್ ಸಿನೆಮಾದ ಪ್ರೋಡೆಕ್ಷನ್ ವಿಡಿಯೋಗಳನ್ನು ಇನ್ಸ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುವ ದೀಪಿಕಾ ಪಡುಕೋಣೆ ಕಣ್ಣು ಮಿಟಿಕಿಸುವ ವಿಡಿಯೋ ಹಾಕಿ ಪ್ರಿಯಾ ಪ್ರಕಾಶ್ ವಾರಿಯರಿಗೆ ಟ್ಯಾಗ್ ಮಾಡಿದ್ದಾರೆ ಅದಕ್ಕೆ ಅಭಿಮಾನಿಗಳು ನಾನಾ ರೀತಿಯ ಪಾಸಿಟೀವ್ ಕಾಮೆಂಟ್ ಮಾಡಿದ್ದಾರೆ. ಚಾಪಕ್ ನಿರ್ದೇಶಕಿ ಮೇಘನಾ ಗುಲ್ಜಾರ್ ಜೊತೆ ಮಾತನಾಡುತ್ತಾ ಕ್ಯಾಮೆರಾದ ಕಡೆಗೆ ಮುಖ ಮಾಡಿ ಕಣ್ಣು ಹೊಡೆದಿರುವ ವಿಡಿಯೋ ಅದಾಗಿದ್ದು, ಆ ವಿಡಿಯೋದ ಕೊನೆಯಲ್ಲಿ ಟೇಕ್ ದಾಟ್ ಪ್ರಿಯಾ ವಾರಿಯಾರ್ ಎಂದು ಬರೆದಿರುವ ಸಾಲಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಭಾವನಾತ್ಮಕ, ರಿಪ್ಲೆಗಳನ್ನು ನೀಡುತ್ತಿದ್ದಾರೆ.