ದೇಶದಲ್ಲಿ ಕೈಗಾರಿಕೆಗಳು ಬಂದ್ ಆಗುತ್ತಿವೆ ಎನ್ನುವ ಮೂಲಕ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿರುವುದನ್ನು ಒಪ್ಪಿಕೊಂಡ ಅವರು, ಇದಕ್ಕೆ ಕಾರಣ ಕಾರ್ಮಿಕ ಸಂಘಟನೆಗಳೇ ಆಗಿವೆ ಎಂದು ನೀಡಿದರು.
ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ನಷ್ಟ ಮಾಡುವುದು, ಕಾರ್ಮಿಕರಿಗೆ, ಸಾರ್ವಜನಿಕರಿಗೆ, ಕೈಗಾರಿಕೆಗಳ ಮಾಲಕರಿಗೆ ತೊಂದರೆ ಮಾಡುವುದು ಕಾರ್ಮಿಕ ಸಂಘಟನೆಗಳ ಕಾಯಕವಾಗಿದೆ. ಈ ಸಂಘಟನೆಗಳಿಗೆ ಬೆಂಬಲ ನೀಡುವ ಸಿಪಿಐ, ಸಿಪಿಎಂ ಪಕ್ಷಗಳಿಗೆ ದೇಶದ ಯಾವ ರಾಜ್ಯಗಳಲ್ಲೂ ಅಸ್ತಿತ್ವವಿಲ್ಲ. ಕಳೆದ ಚುನಾವಣೆಯಲ್ಲಿ ಒಂದೇ ಒಂದು ಲೋಕಸಭೆ ಸ್ಥಾನವನ್ನೂ ಆ ಪಕ್ಷಗಳಿಗೆ ಗೆಲ್ಲಲು ಸಾಧ್ಯವಾಗದಿರುವುದೂ ಇದೇ ಕಾರಣಕ್ಕೆ ಎಂದ ಅವರು, ಪಶ್ಚಿಮಬಂಗಾಳದಲ್ಲಿ 25 ವರ್ಷಗಳ ಕಾಲ ಓರ್ವ ಮುಖ್ಯಮಂತ್ರಿ ಅಧಿಕಾರದಲ್ಲಿದ್ದರು. ಆದರೆ ಅಲ್ಲೂ ಕಮ್ಯೂನಿಷ್ಟರಿಗೆ ಅಸ್ತಿತ್ವವಿಲ್ಲ. ಕಮ್ಯೂನಿಷ್ಟರ ಈ ಸ್ಥಿತಿಗೆ ಅವರು ಕಾರ್ಮಿಕರಿಗೆ ಮಾಡಿದ ಅನ್ಯಾಯವೇ ಕಾರಣ. ಕಾರ್ಮಿಕರಿಗೆ ಕಮ್ಯುನಿಷ್ಟರಷ್ಟು ಅನ್ಯಾಯವನ್ನು ಬೇರೆ ಯಾರೂ ಮಾಡಿಲ್ಲ ಎಂದು ಶೋಭಾ ಹೇಳಿದರು.