ಇಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಯಿತು ಆ ಪಟ್ಟಿಯಲ್ಲಿ ಆ ಕರಾಳ ರಾತ್ರಿ’ ಚಿತ್ರ 2018ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ‘ರಾಮನ ಸವಾರಿ’ ಹಾಗೂ ‘ಒಂದಲ್ಲಾ ಎರಡಲಾ’್ಲ ಸಿನಿಮಾಗಳು ಕ್ರಮವಾಗಿ 2ನೇ ಹಾಗೂ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿವೆ.
ರಿಷಭ್ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ. ‘ಸಂತಕವಿ ಕನಕದಾಸ ರಾಮಧ್ಯಾನ ‘ಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿಗೆ, ‘ಹೂ ಬಳ್ಳಿ’ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಆಯ್ಕೆಯಾಗಿದೆ.
ಅತ್ಯುತ್ತಮ ನಟನಾಗಿ ರಾಘವೇಂದ್ರ ರಾಜಕುಮಾರ್, ಅತ್ಯುತ್ತಮ ನಟಿಯಾಗಿ ಮೇಘನಾ ರಾಜ್, ಅತ್ಯುತ್ತಮ ಪೋಷಕ ನಟ ಬಾಲಾಜಿ ಮನೋಹರ್ ಹಾಗೂ ಅತ್ಯುತ್ತಮ ಪೋಷಕ ನಟಿ ವೀಣಾ ಸುಂದರ್ ಆಯ್ಕೆಯಾಗಿದ್ದಾರೆ.