ಮಂಗಳೂರಿನಲ್ಲಿ ನಡೆದ ಗಲಭೆಯ ಸತ್ಯಾಂಶ ಹೊರಬರಲು ಸದನ ಸಮಿತಿ ರಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಹಾಗೂ ಛಾಯಾಚಿತ್ರಗಳನ್ನೊಳಗೊಂಡ ಸಿಡಿ ಬಿಡುಗಡೆ ಮಾಡಿದರು. ನಂತರ ರಾಜ್ಯದ ಎಲ್ಲಡೆ ಇದಕ್ಕೆ ಬಾರಿ ಚರ್ಚೆ ಅಗಿದೆ ಇದು ಅಸಲಿ ಎಂದು ಕೆಲವರು ಹೇಳಿದರೆ ಇದನ್ನು ಬೇಕೆಂದೆ ಮಾಡಿಸಿದ್ದಾರೆ ಎಂದು ಹೇಳುವವರು ಇದ್ದರು ಇದನ್ನು ಬಿಡುಗಡೆ ಮಾಡಿದ ಮೂಲ ಉದ್ದೇಶ ತಪ್ಪೆ ಮಾಡದ ಅಮಾಯಕರ ಮೇಲೆ ಪೋಲಿಸರು ದೌರ್ಜನ್ಯ ಮಾಡಿದ್ದಾರೆ ಅಂತವರಿಗೆ ಶಿಕ್ಷೆ ಆಗಬೇಕು ಇದರ ಬಗ್ಗೆ ತನಿಖೆ ಮಾಡಿಲ್ಲ ಎಂದು ಕುಮಾರಸ್ವಾಮಿ ಅವರು ರಾಜ್ಯದ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ನಡೆದ ಗಲಭೆಯ ಸಿಡಿ ಬಿಡುಗಡೆ ಮಾಡಿದ ಉದ್ದೇಶವೇನು !?
Date: