ಮನಸನ್ನು ಬದಲಾಯಿಸುವ ಬಣ್ಣಗಳು..!

0
323
OLYMPUS DIGITAL CAMERA

ನೀವು ಪೇಂಟರ್ ಆಗೇ ಇರಬಹುದು ಅಥವಾ ಫ್ಯಾಷನ್ ಡಿಸೈನರ್ ಆಗೇ ಇರಬಹುದು. ನಿಮಗೆ ಬಣ್ಣದ ಮಹತ್ವ ಹಾಗೂ ಅದರಿಂದ ಮನಸಿಗೆ ಆಗುವ ಪ್ರಭಾವದ ಬಗ್ಗೆ ಚೆನ್ನಾಗಿ ಅರಿವಿರುತ್ತದೆ.
ಬಣ್ಣಗಳು ಹಾಗೂ ಅವುಗಳ ವರ್ಣನೆ:
ನೀಲಿ
ಪ್ರಶಾಂತತೆ
ಬುದ್ಧಿವಂತಿಕೆ
ಸುರಕ್ಷತೆ
ಧನಾತ್ಮಕ ಅಂಶಗಳು
ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೀಲಿಯನ್ನು ಒಡ್ಡಲ್ಪಟ್ಟಾಗ ಅವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿರುವುದನ್ನು ಸಂಶೋಧನೆಯಿಂದ ದೃಢಪಟ್ಟಿದೆ.
ಋಣಾತ್ಮಕ ಅಂಶಗಳು
ಅತಿಯಾದ ನೀಲಿ ಬಣ್ಣಕ್ಕೆ ಜನರು ಒಗ್ಗಿಕೊಂಡಾಗ ಕೆಲವೊಮ್ಮೆ ಅವರು ಶೀತದಿಂದ ಬಳಲುವುದಲ್ಲದೇ, ಕಿರಿಕಿರಿಗೆ ಓಳಗಾಗುವ ಸಂಭವವಿದೆ. ಹೀಗಾಗಿ ತೆಳುಬಣ್ಣಗಳಿಂದ ಸಮತೋಲನ ಕಾಪಾಡಿಕೊಳ್ಳಿ.

ಬೆಡ್‍ರೂಂ ಹಾಗೂ ಕಚೇರಿಗಳಿಗೆ ನೀಲಿ ಬಣ್ಣ ಉಪಯೋಗಿಸುವುದು ಸೂಕ್ತ.

ಹಸಿರು
ಪ್ರಕೃತಿ
ಸಮತೋಲನ
ಸಂಪತ್ತು/ಐಶ್ವರ್ಯ
ಧನಾತ್ಮಕ ಅಂಶಗಳು
ಹೆಚ್ಚಾಗಿ ಈ ಬಣ್ಣವನ್ನು ಬೆಡ್‍ರೂಂಗಳಲ್ಲಿ ಕಾಣಬಹುದು. ನೈಸರ್ಗಿಕವಾಗಿ ನಮ್ಮ ಮನಸನ್ನು ಶಾಂತಗೊಳಿಸುವ ಪ್ರಭಾವ ಇದಕ್ಕಿದೆ. ಇದಲ್ಲದೇ ಹಸಿರು ಬಣ್ಣವು ಕೆಟ್ಟ ಕನಸುಗಳನ್ನು ತಡೆಯುತ್ತದೆ.
ಋಣಾತ್ಮಕ ಅಂಶಗಳು
ಈ ಬಣ್ಣದಿಂದ ಹೆಚ್ಚು ಪ್ರಭಾವಿತಗೊಳಗಾಗಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಣ್ಣವನ್ನು ಸತತವಾಗಿ ಒಗ್ಗಿಕೊಂಡಾಗ ಮನುಷ್ಯನಿಗೆ ಅಸೂಹೆ ಹಾಗೂ ಹೊಟ್ಟೆಕಿಚ್ಚಿನ ಭಾವನೆಗಳು ಕಾಣಿಸಿಕೊಳ್ಳುವುದು ಎಂದು ಸಂಶೋಧನೆ ತಿಳಿಸಿದೆ.

ಬೆಡ್‍ರೂಂಗಳಿಗೆ ಈ ಬಣ್ಣ ಸೂಕ್ತ

ಹಳದಿ
ಶಕ್ತಿ
ಸಂತೋಷ
ಗಮನ/ಲಕ್ಷ್ಯ
ಧನಾತ್ಮಕ ಅಂಶಗಳು
ನಮ್ಮನ್ನು ಉತ್ಸಾಹಭರಿತವನ್ನಾಗಿ ಇಡಲು ಹಳದಿ ಬಣ್ಣ ಬಲು ಸಹಾಯಕಾರಿ. ಇದಲ್ಲದೇ ನಮಗೆ ಹೆಚ್ಚಿನ ವಿಶ್ವಾಸ ಮತ್ತು ಆಶಾವಾದ ನೀಡುತ್ತದೆ.
ಋಣಾತ್ಮಕ ಅಂಶಗಳು
ಈ ಬಣ್ಣಕ್ಕೆ ಅತೀ ಹೆಚ್ಚಾಗಿ ಒಗ್ಗಿಕೊಂಡಾಗ ನಾವು ಸಂಕಟ/ಯಾತನೆ/ಬೇಗುದಿಯಿಂದ ಬಳಲುತ್ತೇವೆ. ಆದ್ದರಿಂದಲೇ ಈ ಬಣ್ಣವನ್ನು ಬೆಡ್‍ರೂಂಗಳಲ್ಲಿ ಬಳಸುವುದಿಲ್ಲ. ಹಳದಿ ಬಣ್ಣವುಳ್ಳ ಕೋಣೆಗಳಲ್ಲಿ ಮಕ್ಕಳು ಹೆಚ್ಚಾಗಿ ಅಳುವುದು ವೈಜ್ಞಾನಿಕವಾಗಿ ಧೃಡಪಟ್ಟಿದೆ.

ಈ ಬಣ್ಣ ಅಡುಗೆ ಮನೆ ಹಾಗೂ ಬಾತ್‍ರೂಂಗಳಲ್ಲಿ ಬಳಸಲು ಸೂಕ್ತ.
ಕೇಸರಿ
ಸಾಮಾಜಿಕ
ಧೈರ್ಯ/ ಅಥವಾ ಭರವಸೆ
ಬೆಚ್ಚಗಿನ ವಾತಾವರಣ ಕಲ್ಪಿಸಿಕೊಡುತ್ತದೆ.
ಧನಾತ್ಮಕ ಅಂಶಗಳು
ಈ ಬಣ್ಣ ನಮಗೆ ಹೆಚ್ಚು ಪ್ರೇರಣೆ ನೀಡುತ್ತದೆ. ಜಡತನವನ್ನು ಹೋಗಲಾಡಿಸುತ್ತದೆ. ಹೀಗಾಗಿ ಹೆಚ್ಚಾಗಿ ಈ ಬಣ್ಣವನ್ನು ವ್ಯಾಯಾಮ ಶಾಲೆಗಳಲ್ಲಿ(ಜಿಮ್) ಅಥವಾ ಸತತವಾಗಿ ಬಳಸುವ ಸಾಧನಗಳಲ್ಲಿ (ಕನ್ನಡಕ.. ಇತ್ಯಾದಿ)ಉಪಯೋಗಿಸಲಾಗುತ್ತದೆ.
ಋಣಾತ್ಮಕ ಅಂಶಗಳು
ಅಮೆರಿಕದಲ್ಲಿ ಈ ಬಣ್ಣವನ್ನು ಋಣಾತ್ಮಕ ಬಣ್ಣ ಎಂದು ಪರಿಗಣಿಸಲಾಗಿದೆ ಹಾಗೂ ಇದನ್ನು ಸೆರೆಮನೆಯಲ್ಲಿನ ಕೈದಿಗಳ ಸಮವಸ್ತ್ರವನ್ನಾಗಿ ಬಳಸಲಾಗುತ್ತಿದೆ. ಹ್ಯಾಲೋವಿನ್‍ಗೆ ಈ ಬಣ್ಣ ನಿಕಟವಾದ ಸಂಬಂಧವಿದೆ.

ಲಿವಿಂಗ್/ಡೈನಿಂಗ್ ರೂಂಗಳಿಗೆ ಈ ಬಣ್ಣ ಬಳಸುವುದು ಸೂಕ್ತ
ಕೆಂಪು
ಉತ್ಸಾಹ
ಆಶಾವಾದ
ಸಾಹಸ
ಧನಾತ್ಮಕ ಅಂಶಗಳು
ಈ ಬಣ್ಣ ಉತ್ಸಾಹಭರಿತವನ್ನಾಗಿ ಇಡುತ್ತದೆ. ಜತೆಗೆ ರೋಮಾಂಚನಗೊಳಿಸಲು ಸಹಾಯಕಾರಿ. ಆದರೆ ನೆನಪಿಡಿ, ಈ ಬಣ್ಣ ಅಪಾಯದ ಸೂಚಕವಾಗಿರುವುದೆ ಹಾಗೂ ಕೆಲವೊಮ್ಮೆ ತದ್ವಿರುದ್ಧ ಪರಿಣಾಮಗಳನ್ನು ಬೀರಬಹುದು.
ಋಣಾತ್ಮಕ ಅಂಶಗಳು
ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದ ಪ್ರಕಾರ, ಕೆಂಪು ಬಣ್ಣದ ಕಾರ್ ಹೊಂದಿರುವ ಚಾಲಕರು ವಾಹನ ಚಲಾಯಿಸುತ್ತಿರುವ ಸಂದರ್ಭಗಳಲ್ಲಿ ಕೆಲವೊಮ್ಮೆ ಸಾಕಷ್ಟು ಆಕ್ರಮಣಕಾರಿಯಾಗಿದ್ದರು ಎಂದು ಹೇಳಿಕೊಂಡಿದ್ದಾರೆ.
ಈ ಬಣ್ಣವನ್ನು ಸಾಕಷ್ಟು ಪಾನೀಯ ಮತ್ತು ಆಹಾರ ಪದಾರ್ಥಗಳ ಬ್ರ್ಯಾಂಡಿಂಗ್‍ಗೆ ಈ ಬಣ್ಣವನ್ನು ಬಳಸಲಾಗುತ್ತದೆ. ಈ ಬಣ್ಣ ಹಸಿವನ್ನು ಉತ್ತೇಜಿಸುವುದಕ್ಕೆ ಪ್ರಖ್ಯಾತವಾಗಿದೆ. ನೀವು ಒಮ್ಮೆ ಪ್ರಖ್ಯಾತ ಕೆಎಫ್‍ಸಿ ಮತ್ತು ಕೋಕೋ ಕೋಲಾ ಬ್ರ್ಯಾಂಡಿಂಗ್ ಅನ್ನು ಜ್ಞಾಪಿಸಿಕೊಳ್ಳಿ.
ಈ ಬಣ್ಣ ಬೆಡ್‍ರೂಂ ಹಾಗೂ ಡೈನಿಂಗ್ ರೂಂಗಳಲ್ಲಿ ಬಳಸಲು ಸೂಕ್ತ.
ಗುಲಾಬಿ
ಶಾಂತ
ಸಿಹಿ
ಪ್ರೀತಿ
ಧನಾತ್ಮಕ ಅಂಶಗಳು
ಸಿಟ್ಟು ಮತ್ತು ಹಿಂಸೆಯನ್ನು ಈ ಬಣ್ಣ ಪ್ರತಿರೋಧಿಸುತ್ತದೆ. ಅಮೆರಿಕದಲ್ಲಿನ ಸೆರೆಮನೆ ಖೈದಿಗಳಿಗೆ ಈ ಬಣ್ಣವನ್ನು ಒಗ್ಗಿಸಿದಾಗ ಅವರು ಶಾಂತಯುತವಾಗಿ ಇರುವುದನ್ನು ಧೃಡಪಟ್ಟಿದೆ.
ಋಣಾತ್ಮಕ ಅಂಶಗಳು
ಸಮಾಜದಲ್ಲಿ ಈ ಬಣ್ಣ ಅಪ್ರಭುದ್ಧತೆ, ಸಂಯಮ ಮತ್ತು ಸ್ವಪ್ರತಿಷ್ಠತೆಯ ಕೊರತೆಗೆ ಹೋಲಿಸಲಾಗಿದೆ.
ಬೆಡ್‍ರೂಂಗಳಲ್ಲಿ ಬಳಸುವುದಕ್ಕೆ ಸೂಕ್ತ

 

LEAVE A REPLY

Please enter your comment!
Please enter your name here