ಕಪಾಲಬೆಟ್ಟದ ಏಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ ಇದು ಅವರು ಕನಕಪುರವನ್ನು ಒಡೆಯುವ ಮನಸ್ಥಿತಿ ಇಂದ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಗಾರಿದ್ದಾರೆ. ಕನಕಪುರದ ಮಹಾಜನತೆ ಅದೆಷ್ಟು ಪ್ರಬುದ್ಧರು, ಇಲ್ಲಿ ನೂರಾರು ವರ್ಷಗಳಿಂದ ಎಲ್ಲ ಕೋಮು ಮತ್ತು ಧರ್ಮದ ಜನರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ.
ಹೀಗಾಗಿ ಕನಕಪುರ ಚಲೋ ಹೆಸರಿನಲ್ಲಿ ಮತೀಯ ಶಕ್ತಿಗಳು ನೀಡುವ ಯಾವುದೇ ಪ್ರಚೋದನೆಗೆ ಕನಕಪುರದ ಮಹಾಜನತೆ ಒಳಗಾಗಬೇಡಿ. ಅವರು ಎಷ್ಟೇ ಕೆರಳಿಸಿದರೂ ಸಹನೆ ಕಳೆದುಕೊಳ್ಳಬೇಡಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.