ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಾನಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಸಾಕಷ್ಟ ಬಾರಿ ಚರ್ಚಿಸಿ, ಆಲೋಚಿಸಿ ಈ ದೇಶದಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಾದಿಯಾಗಿ ಯಾವುದೇ ಹಿಂದು, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕಷ್ಟೇ ಕಾಯ್ದೆಯನ್ನು ಜಾರಿ ಮಾಡಿದೆ ಹಾಗು ಮಂಗಳೂರಿನ ಗೊಲಿಬಾರ್ ಬಗ್ಗೆ ಮಾತನಾಡಿದ ಶೋಭ ಕರಂದ್ಲಾಜೆ ಅವರು ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮಂಗಳರನ್ನು ಮತ್ತೊಂದು ಕಾಶ್ಮೀರ ಮಾಡಲು ಹೊರಟಿದ್ದರು.
ಆದರೆ ಕಮೀಶನರ್ ಹರ್ಷ ಅವರು ಗೋಲಿಬಾರ್ ಮಾಡುವ ಮೂಲಕ ಸರಿಯಾದ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸಿಎಎ, ಎನ್‍ಆರ್‍ಸಿ ವಿರೋಧಿಸುವವರು ದೇಶದ್ರೋಹಿಗಳಾಗಿದ್ದಾರೆ. ಕಾಯ್ದೆ ಸಂಬಂಧ ಸಂಸತ್‍ನಲ್ಲಿ ಕೇಂದ್ರ ಸರಕಾರ ವಿರೋಧ ಪಕ್ಷಗಳನ್ನು ಚರ್ಚೆಗೆ ಆಹ್ವಾನಿದಾಗ ಅಲ್ಲಿ ಚರ್ಚೆ ಮಾಡದೇ ಕಾಯ್ದೆ ಜಾರಿ ಬಳಿಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.