ಜೀವನದಲ್ಲಿ ಪ್ರೀತಿ-ಗೀತಿ, ಬ್ರೇಕಪ್ – ಪ್ಯಾಚಪ್ ಕಾಮನ್. ಲವ್ ಅಂದ್ಮೇಲೆ ನೋವು ಇದ್ದುದ್ದೇ. ಎಲ್ಲರ ಜೀವನದಲ್ಲೂ ಬ್ರೇಕಪ್ ಒಂಥರಾ ಮಾಮೂಲು ಆಗಿದೆ.
ಆದರೆ, ಬ್ರೇಕಪ್ ಆದಾಗ, ಅದರಿಂದಾದ ನೋವನ್ನು ತಡೆದುಕೊಳ್ಳಲಾಗದೆ ಜನ ತಪ್ಪುಗಳನ್ನು ಮಾಡ್ತೀವಿ. ದುಡುಕಿನಿಂದ ಇಂಥಾ ಕೆಲವು ತಪ್ಪುಗಳನ್ನು ಎಂದೂ ಮಾಡಬಾರದು.
1) ಬ್ರೇಕಪ್ ಆದ ಕೂಡಲೇ ಅದನ್ನು ನೀವು ಜಗಜ್ಜಾಹಿರ ಗೊಳಿಸುವ ಅಗತ್ಯವಿಲ್ಲ. ನೀವು ನಿಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಅದನ್ನು ಹಾಕಿ ಅಳಲು ತೋಡಿ ಕೊಳ್ಳುವುದರಲ್ಲಿ ಅರ್ಥವಿಲ್ಲ. ಜೊತೆಗೆ ನೀವು ಫೇಸ್ ಬುಕ್ ನಲ್ಲಿ ನಿಮ್ಮ ಸ್ಟೇಟಸ್ ಅನ್ನು ಬದಲಾಯಿಸುವುದು ತಪ್ಪು. ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್ ಗೆ ಗೊತ್ತಾಗಿರುತ್ತೆ..ಇರೋ ಬರೋರಿಗೆ ಗೊತ್ತಾಗಿ ಏನು ಮಾಡಬೇಕು.
2) ನಿಮ್ಮನ್ನು ಬಿಟ್ಟು ಹೋದವರಿಗೆ ನೋವು ಕೊಡಬೇಕು ಎಂದು ನೀವು ಆನ್ ಲೈನ್ ಡೇಟಿಂಗ್ ,ಚಾಟಿಂಗ್ ಅಂತ ಹೋದರೆ ನೋವು ಯೂಸ್.
3) ನೀವು ನಿಮ್ಮನ್ನು ಬಿಟ್ಟು ಹೋದವರ ಸ್ಟೇಟಸ್ ಅನ್ನು ಪದೇ ಪದೇ ಚೆಕ್ ಮಾಡುವುದು. ಅವರ ಟೈಮ್ ಲೈನ್ ಚೆಕ್ ಮಾಡಿ.. ನಿಮ್ಮ ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ.
4)ನೀವು ಹೊಸ ಸಂಗಾತಿಯ ಜೊತೆ ಫೋಟೋ ಶೇರ್ ಮಾಡುವುದು…ಹಳೆ ಸಂಗಾತಿಗೆ ತಿವಿಯಲೆಂದು ಸ್ಟೇಟಸ್ ಹಾಕಿ ಉರಿಸುವ ಕೆಲಸ ಮಾಡಬೇಡಿ.
5) ಮುಖ್ಯವಾಗಿ ದೂರ ಆದವರ ಬಗ್ಗೆ ಎಂದೂ ಕೂಡ ಪದೇ ಪದೇ ಟೀಕೆ ಮಾಡಬೇಡಿ. ಬೇರೆ ಅವರ ಬಳಿ ಕೆಟ್ಟದಾಗಿ ಹೇಳಬೇಡಿ. ಪ್ರೀತಿಸಿ ರವರನ್ನು ಪೂಜಿಸಿ
ಬ್ರೇಕಪ್ ಆದವರು ಇವುಗಳನ್ನು ಪಾಲಿಸಿ…ಹೊಸ ಜೀವನ ಆರಂಭಿಸಿ.