ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಭಾಯಿ ಭಾಯಿ ಅಂತಿದ್ದ ದೋಸ್ತಿಗಳು ದರ್ಶನ್ ಮತ್ತು ಸುದೀಪ್ ದೂರಾಗಿದ್ದಾರೆ. ಈಗ ಒಬ್ಬರಿಗೊಬ್ಬರು ಜಗಳ ಮಾಡ್ಕೊಂಡಿದ್ದಾರೆ. ಇವರಿಬ್ಬರು ಇನ್ಯಾವತ್ತು ಒಂದಾಗೊಲ್ಲ. ಇಬ್ಬರ ನಡುವಿನ ಸ್ನೇಹ ಸಂಬಂಧ ಹಳಸಿದೆ ಅನ್ನೋ ಅಂತೆ ಕಂತೆಗಳು ಕೇಳಿ ಬರ್ತಿತ್ತು. ಈ ವಿಚಾರಕ್ಕೆ ದರ್ಶನ್ ಆಗ್ಲೀ ಸುದೀಪ್ ಆಗ್ಲೀ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದೇ ಮೌನ ವಹಿಸಿದ್ದರು ಮಾತ್ರವಲ್ಲ ಇತ್ತೀಚೆಗೆ ಇವ್ರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ ಕೂಡ.
ಕೊನೆಗೂ ಮೌನ ಮುರಿದಿರೋ ಸುದೀಪ್ ನನ್ನ ಹಾಗೂ ದರ್ಶನ್ ಅವರ ನಡುವೆ ಅವಿನಾಭಾವ ಸಂಬಂಧವಿದೆ. ಇಬ್ಬರು ಒಳ್ಳೆಯ ಸ್ನೇಹಿತರು ಹಾಗೂ ಉತ್ತಮ ಕೆಲಸಗಾರರು ಅಂತ ಹೇಳೊ ಮೂಲಕ ತನ್ನ ಕುಚ್ಚುಕು ಗೆಳೆಯನ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದಾರೆ.
‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಭಾಗವಹಿಸಿರುವ ಕಿಚ್ಚ ಸುದೀಪ್ ದರ್ಶನ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.ದರ್ಶನ್‌ಗೆ ಮೂಗಿನ ಮೇಲೆಯೆ ಕೋಪ ಅದನ್ನು ಒಬ್ಬರು ಹಿಡಿಯಬೇಕು. ಅಂದಾಗ ಆತ ಕೋಪವನ್ನು ತಣ್ಣಗೆ ಮಾಡಿಕೊಳ್ಳುತ್ತಾನೆ. ಅವನೊಂದು ಮಗು ಎಂದು ಕರೆದಿರುವ ಸುದೀಪ ತಮ್ಮ ನೆಚ್ಚಿನ ಗೆಳೆಯನಿಗೆ ಶೋ ನಲ್ಲೇ ಹಾಯ್ ಹೇಳಿದ್ದಾರೆ.
ಇನ್ನು ತಮ್ಮ ಜೀವನದ ಅನೇಕ ಅನುಭವಗಳನ್ನು ಕಿಚ್ಚ ಸುದೀಪ್ ‘ವೀಕೆಂಡ್ ವಿತ್ ರಮೇಶ್’ ಸೀಸನ್-2 ಕಾರ್ಯಕ್ರಮದಲ್ಲಿ ಹಂಚಿಕೊಂಡಿರೋ ಸುದೀಪ್ ದರ್ಶನ್ ಬಗ್ಗೆ ಆತ್ಮೀಯ ಮಾತುಗಳನ್ನಾಡಿರುವುದು ಇಬ್ಬರ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ. ಇನ್ನೂ ಈ ಮೂಲಕ ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡ್ತಾ ಇದ್ದ ಗಾಸಿಪ್ ಸುದ್ದಿಗೆ ತೆರೆ ಎಳೆದಿದ್ದಾರೆ.
- “ಶ್ರೀ”
POPULAR STORIES :
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ನಲವತ್ತೈದರ ಹರೆಯದಲ್ಲೂ ಅದ್ಭುತ ಬೌಲಿಂಗ್..!
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?