ಇಶಾಪಂತ್.. ಲೇಡಿ ಸಿಂಗಂ ಖ್ಯಾತಿಯ ಖಡಕ್ ಪೊಲೀಸ್ ಆಫೀಸರ್. ಸದ್ಯ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಈ ಡೈನಾಮಿಕ್ ಪೊಲೀಸ್ ಒಳ್ಳೆಯ ಗಾಯಕಿ ಕೂಡ. ಇತ್ತೀಚೆಗೆ ಇವರು ಹಾಡಿದ ಜೊತೆ ಜೊತೆಯಲಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪರ ರಾಜ್ಯದವರಾದರೂ ಕನ್ನಡದ ಮೇಲೆ ಅಪಾರ ಅಭಿಮಾನವನ್ನಿಟ್ಟುಕೊಂಡು ಕನ್ನಡವನ್ನು ಕಲಿತು, ಕನ್ನಡದಲ್ಲೇ ಮಾತನಾಡುತ್ತಾರೆ. ಸ್ಥಳೀಯರು ಬಂದು ತಮ್ಮೊಡನೆ ಮಾತನಾಡುವಾಗ ಕನ್ನಡದಲ್ಲೇ ಅವರನ್ನು ಮಾತನಾಡಿಸಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರೆಸ್ಮೀಟ್, ಇಂಟರ್ ವ್ಯೂ ಎಲ್ಲದರಲ್ಲೂ ಕೂಡ ಅವರು ಕನ್ನಡದಲ್ಲೇ ಮಾತನಾಡುವುದು.
ಕನ್ನಡತಿಯೇ ಆಗಿರುವ ಇಶಾಪಂತ್ ಅವರಿಗೆ ಕನ್ನಡ ಹಾಡುಗಳನ್ನು ಕೂಡ ಸಖತ್ತಾಗಿ ಹಾಡುತ್ತಾರೆ. ಇನ್ನು ಕನ್ನಡ ಸಿನಿಮಾಗಳ ಬಗ್ಗೆಯೂ ಬಹಳ ಪ್ರೀತಿ. ಅವರಿಗೆ ಡಾ. ರಾಜ್ಕುಮಾ ಫೇವರೇಟ್ ಅಂತೆ.
ರಾಜ್ಕುಮಾರ್ ಅಂದ್ರೆ ಇಷ್ಟ ಎನ್ನುವ ಅವರ ಲೇಟೆಸ್ಟ್ ಫೇವರೇಟ್ ನಟ ರಾಕಿಂಗ್ ಸ್ಟಾರ್ ಯಶ್ ಅಂತೆ! ಸ್ವತಃ ಅವರೇ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.