ಕೊಲಂಬಿಯಾ ಮೂಲದ ಒಬ್ಬ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಶಕೀರಾ ರವರ ತಂದೆ ದೊಡ್ಡ ಆಭರಣ ಅಂಗಡಿಯ ಮಾಲೀಕರು. ಲೆಬನೀಸ್ ತಂದೆ ಮತ್ತು ಸ್ಪಾನಿಷ್ ಇಟಾಲಿಯನ್ ತಾಯಿ. ಶಕೀರಾ ರವರ ಏಳನೇ ವಯಸ್ಸಿನಲ್ಲಿ ಇದ್ದಾಗ ಅವರ ತಂದೆ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲಾಗದೆ ದಿವಾಳಿ ಸ್ಥಿತಿಗೆ ತಲುಪಿದ್ದರು. ಮನೆಯ ಪರಿಸ್ಥಿತಿಯಿಂದಾಗಿ ಶಕೀರಾ ಅವರು ಬೇರೊಬ್ಬರ ಮನೆಯಲ್ಲಿ ಇರಬೇಕಾಯಿತು.
ಆಗ ಅವರ ತಂದೆ ಮನೆಯ ಪರಿಸ್ಥಿಯನ್ನು ವಿವರಿಸಲಾಗದೆ ಅವಳನ್ನು ಒಂದು ಪಾರ್ಕ್ ಗೆ ಕರೆದುಕೊಂಡು ಹೋದರು. ಅಲ್ಲಿ ವಾಸಿಸುವ ಕೆಲವು ಮಕ್ಕಳನ್ನು ತೋರಿಸಿದರು. ಸಂದರ್ಭದ ಸೂಕ್ಷ್ಮತೆಯಲ್ಲಿ ಅರ್ಥ ಮಾಡಿಕೊಂಡ ಶಕೀರಾ ಅಲ್ಲೇ ನಿರ್ಧರಿಸಿದರು ಮುಂದೆ ತಾವು ದೊಡ್ಡ ನಟಿಯಾದ ಮೇಲೆ ತಾವು ಇಂತಹ ಮಕ್ಕಳಿಗೋಸ್ಕರ ಏನಾದರೂ ಮಾಡಬೇಕು ಎಂದು.
ಇಲ್ಲಿಂದ ಅವರ ಜೀವನದ ಮೊದಲ ಸಂಘರ್ಷ ಶುರುವಾಯಿತು. ಶಕೀರಾ 8ನೇ ವಯಸ್ಸಿನಲ್ಲಿ ಖುದ್ದಾಗಿ ಹಾಡನ್ನು ಬರೆದು ಅದಕ್ಕೆ ಸಂಗೀತವನ್ನು ಕೊಟ್ಟು ತಾವೇ ಹಾಡಲಿಕ್ಕೆ ಶುರುಮಾಡಿದರು. ನಂತರ ಅವರ 10ನೇ ವಯಸ್ಸಿನಲ್ಲಿ ಸ್ಕೂಲ್ನಲ್ಲಿ ಮೊದಲ ಬಾರಿ ಸ್ಟೇಜ್ ಮೇಲೆ ಹಾಡಿ ಅವರ ದ್ವನಿ ತುಂಬಾ ಗಟ್ಟಿಯಾಗಿದೆ ಎಂದು ರಿಜೆಕ್ಟ್ ಆದರು. ಅಷ್ಟೇ ಯಾಕೆ ಅವರ ಧ್ವನಿ ಮೇಕೆ ಧ್ವನಿ ರೀತಿಯಿದೆ ಎಂದು ಹೀಯಾಳಿಸಿದರು.
ಇಷ್ಟೆಲ್ಲಾ ಆದರು ಶಕೀರಾ ಅವರು ಛಲ ಬಿಡದೆ ಮ್ಯೂಸಿಕ್ ಇಂಡಸ್ಟ್ರಿ ಗೆ ಹಾರಿದರು. ಮೊದಲು ಹಾಡಿದ ಎರಡು ಆಲ್ಬಮ್ಸ್ ಫ್ಲಾಪ್ ಆಯಿತು. ನಂತರ ಅವರ ಮೂರನೇಯ ಆಲ್ಬಮ್ ಯಶಸ್ಸು ಕಂಡಿತು. ಆಗ ಅವರಿಗೆ 18 ವರ್ಷ. ಆಗಲೇ ಶಕೀರಾ ಒಂದು ಟ್ರಸ್ಟ್ ಸ್ಥಾಪಿಸಿದರು. ಅದರ ಹೆಸರು ಬೇರ್ಫೂಕಟ್ ಫೌಂಡೇಶನ್. ಆ ಮೂಲಕ ಜಗತ್ತಿನ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಈ ಟ್ರಸ್ಟ್ಅನ್ನು ಇಂದಿಗೂ ನಡೆಸುತ್ತಿದ್ದಾರೆ.
ನಂತರದಲ್ಲಿ ಶಕೀರಾ ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿಯಾಗಿ 2010ರ ವಿಶ್ವಕಪ್ ಫು್ಟ್ಬಾಲ್ ಪಂದ್ಯಾವಳಿಯ ವೇಳೆ ಹಾಡಿದ್ದ “ವಾಕಾ ವಾಕಾ’ ಹಾಡು ಯೂ ಟ್ಯೂಬ್ನಲ್ಲಿ 100 ಕೋಟಿ ವೀಕ್ಷಣೆ ಮೂಲಕ ದಾಖಲೆ ಬರೆಯಿತು. ದೇಶ ವಿದೇಶಗಳ ಮೂಲೆ ಮೂಲೆಯಲ್ಲಿ ಎಲ್ಲಿ ನೋಡಿದರೂ ಅವರನ್ನು ಹತ್ತಿರ ಕರೆದು ಪ್ರೀತ್ಸೋ ಜನ ಇದ್ದಾರೆ.
ಏನೇ ಹೇಳಿ, ಇಷ್ಟೆಲ್ಲಾ ಬೆಳೆದರೂ ಜಗತ್ತು ವಿಸ್ಮಯದಿಂದ ನೋಡಿದರೂ ಶಕೀರಾ ಮಾತ್ರ ತುಂಬಾ ಸರಳವಾಗಿ ಜೀವಿಸಿ ಸದಾ ಮಕ್ಕಳ ಶಿಕ್ಷಣ ಅಂತಾ ಓಡಾಡುತ್ತಿರುತ್ತಾರೆ. ಅಂಥಾ ದಿ ಗ್ರೇಟ್ ಶಕೀರಾ ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಕಷ್ಟಗಳಿಗೆ ಸೆಡ್ಡು ಹೊಡೆದು ಗೆದ್ದ ಗಾಯಕಿ..!
Date: