ಪ್ರೀತಿಗೆ ಕಣ್ಣಿಲ್ಲ ಅಂತ ಹೇಳ್ತೀವಿ…ಇದು ನೂರಕ್ಕೆ ಸಾವಿರ ಪಟ್ಟು ಎಂದರೆ ತಪ್ಪಾಗಲ್ಲ…! ಇದು ನಿಮ್ಗೂ ಗೊತ್ತು..ನಮ್ಗೆ ಗೊತ್ತೇ ಇದೆ. ಆದರೆ ಇದು ಪ್ರೀತಿ ಅನ್ನಲಾಗಲ್ಲ..ಹಾಗೆಂದರೆ ಪ್ರೀತಿಗೇ ಅವಮಾನ! ಆ ಹೆಸರಿಗೆ ಕಳಂಕ! ಇದು ಅಕ್ರಮ ಸಂಬಂಧದ ಸ್ಟೋರಿ…. ಅದು 60 ರ ಅಜ್ಜಿ ಮತ್ತು 22 ರ ಯುವಕನ ನಡುವಿನ ಅಕ್ರಮ ಸಂಬಂಧ…!
ಹೌದು ಪ್ರೇಮಸೌಧವಿರುವ ಉತ್ತರ ಪ್ರದೇಶ ಆಗ್ರಾದಲ್ಲಿ ಈ ಘಟನೆ ನಡೆದಿರುವುದು.
7 ಮಕ್ಕಳು ಹಾಗೂ 7 ಮಂದಿ ಮೊಮ್ಮಕ್ಕಳನ್ನು ಹೊಂದಿರುವ ವೃದ್ಧೆ ಆಕೆ. ಅವಳು 22ರ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳೆಂದು ಆರೋಪ ಕೇಳಿಬಂದಿದೆ.
ಆಗ್ರಾದ ಎತ್ಮಾದುದ್ದಲ್ಲಾ ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಮಕ್ಕಳು ಹಾಗೂ ಮೊಮ್ಮಕ್ಕಳು ದೂರು ನೀಡಲು ಯುವಕನ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಇನ್ನು ತನ್ನ ಸಂಬಂಧಿಕರ ಜೊತೆ ಪೊಲೀಸ್ ಠಾಣೆಗೆ ಹೋಗಿ ಆ ವೃದ್ಧೆಯನ್ನು ಮದುವೆಯಾಗುವುದಾಗಿ ಘೋಷಿಸಿದ್ದಾನೆ.ಇನ್ನೇನಾಗುತ್ತೋ.