ಫೇಕ್ ಯೂಸರ್ ಖಾತೆ ತೆರೆದು ಮಹಾ ಮೋಸ..! ಬುಕ್​ ಮೈ ಶೋನವ್ರೇ ಇದೇನ್ ಸ್ವಾಮಿ?

Date:

ಸಿನಿಮಾ ಟಿಕೆಟ್ ಬುಕ್ಕಿಂಗ್ ಅಂದ್ ಕೂಡಲೇ ಥಟ್ ಅಂತ ನೆನಪಾಗೋದೆ ಮುಂಗಡ ಟಿಕೆಟ್ ಬುಕ್ಕಿಂಗ್ ವೇದಿಕೆ ಬುಕ್​ ಮೈ ಶೋ! ಆದ್ರೆ, ಅದು ಗ್ರಾಹಕರ ಹಾಗೂ ಸಿನಿಮಾ ತಂಡದ ನಂಬಿಕೆಗೆ ವಿಶ್ವಾಸಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಫೇಕ್ ಯೂಸರ್ ಖಾತೆ ತೆರೆದು ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಬುಕ್​ ಮೈ ಶೋನವರ ಗಮನಕ್ಕೆ ಬಂದಿದ್ಯೋ ಇಲ್ವೋ? ಬಂದಿದ್ದರೂ ಸುಮ್ಮನಿದ್ದರೋ ಗೊತ್ತಿಲ್ಲ. ಯೂಸರ್ ಎಂಬ ಅಕೌಂಟ್​ನಿಂದ ಎಲ್ಲಾ ಸಿನಿಮಾಗಳ ಕುರಿತು ಕಾಮೆಂಟ್ ಮಾಡಲಾಗುತ್ತಿದೆ. ಯಾರೀ ಈ ‘ಯೂಸರ್’ ಅನ್ನೋದು ಯಕ್ಷ ಪ್ರಶ್ನೆ..! ದಿನಕ್ಕೆ 10 ಮೂವಿ ರಿಲೀಸ್ ಆದ್ರೆ ಆ 10 ಮೂವಿಯ ಕುರಿತು ಈ ಯೂಸರ್ ಅಕೌಂಟ್​ನಿಂದ ರಿಯಾಕ್ಷನ್ ಇರುತ್ತೆ..! ಅದು ಕೆಲವೇ ಕೆಲವು ಗಂಟೆಗಳಲ್ಲಿ,..! ನೀವು ದಿನ ಅಂತ ತೆಗೆದುಕೊಂಡರೂ ಪ್ರತೀವಾರ ಸಿನಿಮಾ ರಿಲೀಸ್ ಆದ ದಿನ 2 ಮೂವಿ ನೋಡ್ಬಹುದಾ? ಅಮ್ಮಮ್ಮ ಅಂದ್ರೆ 3 ಮೂವಿ ನೋಡ್ಬಹುದು ಅಷ್ಟೇ..! ಅದ್ಬಿಟ್ಟು ಎಲ್ಲಾ ಮೂವಿ ನೋಡಿ ಹೇಗ್ರಿ ರೀ ಕಾಮೆಂಟ್ ಮಾಡೋಕೆ ಆಗುತ್ತೆ? ಅಥವಾ ಇದು ಬುಕ್​ ಮೈ ಶೋನವರ ಪ್ರಾಯೋಜಿತ ದಂಧೆಯೇ ಅನ್ನೋ ಅನುಮಾನ ಕೂಡ ಇದೆ..! ಯಾಕಂದ್ರೆ ಹೀಗೆ ಫೇಕ್​ ಅಕೌಂಟ್​​ಗಳಿಂದ ರಿಯಾಕ್ಷನ್ಸ್ ಮತ್ತು ರೇಟಿಂಗ್ ಪಡೆದು ಹಣದ ಡಿಮ್ಯಾಂಡ್ ಮಾಡೋ ಉದ್ದೇಶ ಇದ್ದರೂ ಇದ್ದಿರಬಹುದು..! ಅಥವಾ ಕನ್ನಡೇತರ ಸಿನಿಮಾಗಳಿಗೆ ಮಣೆಹಾಕುವ ಇರಾದೆ ಕೂಡ ಇರಬಹುದು.
ಈ ಬಗ್ಗೆ ‘ಯುವರತ್ನ’ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಅಸಮಧಾನ ಹೊರಹಾಕಿದ್ದಾರೆ. ಕೆಲವರು ಟೀಮ್ ಕಟ್ಕೊಂಡು ಫೇಕ್​ ಯೂಸರ್ ಖಾತೆ ತೆರೆದಿರೋ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....