ಭಾರತೀಯ ಕ್ರಿಕೆಟ್ಗೆ ಹೊಸ ರೂಪ ನೀಡಿದ ನಾಯಕ, ಇಂದಿನ ಬಿಸಿಸಿಐ ಅಧ್ಯಕ್ಷ , ಬಂಗಾಳದ ಹುಲಿ ಸೌರವ್ ಗಂಗೂಲಿಗೆ ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್, 2007ರ ಟಿ20, 2011ರ ವಿಶ್ವಕಪ್ ಹೀರೋ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ. ನೀವೀಗ BCCI ಅಧ್ಯಕ್ಷರು, ಪ್ರೊಫೆಷನಲ್ ಆಗಿರಿ ಅಂತ ತಮಾಷೆ ಮಾಡಿದ್ದಾರೆ!
ಸೌರವ್ ಗಂಗೂಲಿ 1996ರಲ್ಲಿ ಲಾರ್ಡ್ಸ್ನಲ್ಲಿ ನಡೆದ ತಮ್ಮ ಡೆಬ್ಯೂ ಟೆಸ್ಟ್ ಪಂದ್ಯದ ಫೋಟೋವೊಂದನ್ನು ಇನ್ಸ್ಟಾಗ್ರಾಮಲ್ಲಿ ಶೇರ್ ಮಾಡಿದ್ದರು. ರಾಹುಲ್ ದ್ರಾವಿಡ್ ಅವರೊಡನೆ ಇರುವ ಫೋಟೋವನ್ನು ಹಾಕಿ ಶತಕ ಸಿಡಿಸಿ ಮಿಂಚಿದ್ದ ದಿನವನ್ನು ಸ್ಮರಿಸಿದ್ದರು. ಅದೊಂದು ಅದ್ಭುತ ನೆನಪೆಂದು ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಜೀವನದ ಮೊದಲ ಪಂದ್ಯವನ್ನು ನೆನೆದಿದ್ದರು.
ಆ ಪೋಸ್ಟ್ನಲ್ಲಿದ್ದ ಫೋಟೋದಲ್ಲಿ ಏಜೆನ್ಸಿಯೊಂದರ ವಾಟರ್ ಮಾರ್ಕ್ ಇತ್ತು. ಅದನ್ನು ಗಮಿಸಿ ಯುವಿ ಆ ರೀತಿ ಕಾಮೆಂಟ್ ಮಾಡಿದ್ದಾರೆ. ದಾದಾ ನಿಮ್ಮನ್ನು ನೋಡುತ್ತಿರುತ್ತಾರೆ. ನೀವು ಈಗ ಬಿಸಿಸಿಐ ಅಧ್ಯಕ್ಷರು. ಹೀಗಾಗಿ ದಯವಿಟ್ಟು ಪ್ರೊಫೆಷನಲ್ ಆಗಿರಿ ಎಂದು ಕಾಲೆಳೆದಿದ್ದಾರೆ.