ನಟ, ನಿರ್ದೇಶಕ ಹುಚ್ಚ ವೆಂಕಟ್ ಡಿಂಪಲ್ ಕ್ವೀನ್ ರಚಿತಾ ರಾಮ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಏಕ್ ಲವ್ ಯಾ ಟೀಸರ್ ನೋಡಿದ ಹುಚ್ಚವೆಂಕಟ್ ರಚಿತಾರಾಮ್ ಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ.
ಲಿಪ್ ಲಾಕ್, ಸಿಗರೇಟ್ ಸೇದೋದೆಲ್ಲಾ ಬೇಕಾ? ನಿಮ್ಮನ್ನು ಮಹಿಳೆಯರು, ಮಕ್ಕಳು ಥಿಯೇಟರಲ್ಲಿ ನೋಡೋಕೆ ಆಗುತ್ತಾ? ಇದು ಟ್ಯಾಂಲೆಂಟಾ? ಥೂ…ನಿಮ್ಗೆ ಟ್ಯಾಲೆಂಟ್ ಇದೆ ಅದನ್ನು ಬಳಸಿಕೊಳ್ಳಿ. ಅದ್ ಬಿಟ್ ಇಂಥಾ ಸೀನ್ ಗಳಲ್ಲಿ ನಟಿಸೋಕೆ ಯಾಕೆ ಒಪ್ಪಿಕೊಳ್ತೀರಾ ಅಂತ ಖಾರವಾಗಿ ಹೇಳಿದ್ದಾರೆ.
ನಿಮ್ಮ ಅಮ್ಮ – ಅಪ್ಪಗೆ ಈ ದೃಶ್ಯ ನೋಡೋಕೆ ಆಗುತ್ತಾ? ನಾಳೆ ನಿಮ್ಮ ಮದುಗೆ ಆಗುವ ಹುಡುಗ ಈ ಸೀನ್ ನೋಡಿದರೆ? ಸಣ್ಣ ಪುಟ್ಟ ವಿಷಯಗಳಿಗೆ ಡಿವೋರ್ಸ್ ಆಗುತ್ತೆ. ಜೀವನ ಮುಖ್ಯ ಇಂಥಾ ಪಾತ್ರಗಳನ್ನು ಮಾಡ್ಬೇಡಿ ಎಂದು ವೆಂಕಟ್ ಹೇಳಿದ್ದಾರೆ.
ಡೈರೆಕ್ಟರ್ ಪ್ರೇಮ್ ಗೆ ಈ ದೃಶ್ಯ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿರುವ ವೆಂಕಟ್ ಅದೊಂದು ದೃಶ್ಯ ತೆಗೆಯುವಂತೆ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಅಶ್ಲೀಲತೆ ಇರಲಿಲ್ಲ.ಒಂದು ಗೌರವವಿದೆ ಅದನ್ನು ಕಾಪಾಡಿಕೊಳ್ಳಬೇಕೆಂದು ವೆಂಕಟ್ ತಮ್ಮದೇ ಸ್ಟೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.