No menu items!
14.8 C
Munich
Thursday, April 30, 2026

ಇವರು ಕಾಲಿಲ್ಲದಿದ್ದರೂ ಫುಟ್ಬಾಲ್​ ನಿಲ್ಲಿಸಿಲ್ಲ..!

Must read

ಮೊಹಮ್ಮದ್ ಅಬ್ದುಲ್ಲಾ. 7 ವರ್ಷದ ಬಾಲಕನಿದ್ದಾಗಲೇ ರೈಲು ಅಪಘಾತವೊಂದರಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ್ರು. ಅದಾಗಿ 15 ವರ್ಷವಾಗಿದೆ. 22 ವರ್ಷ ವಯಸ್ಸಿನ ಅಬ್ದುಲ್ಲಾ ಈಗ ಬಾಂಗ್ಲಾದೇಶದಲ್ಲಿ ಸಖತ್ ಹೆಸರುವಾಸಿಯಾಗಿದ್ದಾರೆ.
ಎರಡೂ ಕಾಲುಗಳಿಲ್ಲದೇ ಇದ್ರೂ ಅಬ್ದುಲ್ಲಾ ಇವತ್ತು ಛಲ ಮತ್ತು ಹಠದಿಂದಲೇ ಅದ್ಭುತ ಫುಟ್ಬಾಲರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾನೆ. ಅಷ್ಟೇ ಅಲ್ಲ ತನ್ನ ರೋಲ್ ಮಾಡೆಲ್ ಪೋರ್ಚುಗಲ್ನ ಗೋಲ್ ಮೆಷಿನ್ ಕ್ರಿಶ್ಚಿಯಾನೋ ರೊನಾಲ್ಡೊರನ್ನು ಭೇಟಿಯಾಗುವ ಕನಸು ಕೂಡ ನನಸಾಗಬೇಕಿದೆ.
ವಿಚಿತ್ರ ಎಂದರೆ, ವಿಧಿ ಅಬ್ದುಲ್ಲಾ ಬಾಳಿನಲ್ಲಿ ಸಾಕಷ್ಟು ಆಟವಾಡಿತ್ತು. ಕಾಲುಗಳನ್ನು ಕಳೆದುಕೊಂಡ ಬೆನ್ನಲ್ಲೇ ಅಮ್ಮನ ಪ್ರೀತಿಯನ್ನು ಕೂಡ ಕಳೆದುಕೊಂಡ್ರು ಅಬ್ದುಲ್ಲಾ. ಅಪ್ಪ ಮತ್ತು ಮಲತಾಯಿ ಜೊತೆಗೆ ಬೆಳೆದ್ರು. ಆದ್ರೆ ಕುಟುಂಬದಲ್ಲಿ ಅಬ್ದುಲ್ಲಾಗೆ ಅವಮಾನ ಒಂದೇ ಎದುರಾಗಿತ್ತು. ಹೀಗಾಗಿ ಮನೆ ಬಿಟ್ಟು ಓಡುವ ನಿರ್ಧಾರ ಮಾಡಿದ್ರು. ಆರಂಭದಲ್ಲಿ ಭಿಕ್ಷೆ ಬೇಡಿ ಜೀವನ ಕಳೆದ್ರು. ಆದ್ರೆ ನಂತರ ಅಜ್ಜಿಯ ಜೊತೆ ಬದುಕಲು ಆರಂಭಿಸಿದ್ರು.


ಅಬ್ದುಲ್ಲಾ 2001ರಲ್ಲಿ ರೈಲು ಪ್ರಯಾಣದ ವೇಳೆ ಅಪಘಾತಕ್ಕೆ ಒಳಗಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು. ಬಾಂಗ್ಲಾದಲ್ಲಿರುವ ಅಪರಜಯೋ ಬಾಂಗ್ಲಾ ಅನ್ನೋ ಎನ್ಜಿಒ ಒಂದರ ಸಹಾಯದೊಂದಿಗೆ ಔಷಧಗಳನ್ನು ಪಡೆದ್ರು. ಅಲ್ಲೇ ವ್ಹೀಲ್ಚೇರ್ ಮೂಲಕ ಚಲಿಸುವುದನ್ನು ಕಲಿತ್ರು. ಆದ್ರೆ ಅಬ್ದುಲ್ಲಾ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಕಾಲೇ ಇಲ್ದೇ ಇದ್ರೂ, ವ್ಹೀಲ್ಚೇರ್ನ ಸಹಾಯವಿಲ್ಲದೆ ನಡೆದಾಡುವ ಪ್ರಯತ್ನ ಮಾಡಿದ್ರು.


ತನ್ನ ಚಿಕ್ಕ ಕಾಲುಗಳಲ್ಲಿ ಅಬ್ದುಲ್ಲಾ ಫುಟ್ಬಾಲ್ ಆಟವನ್ನು ಆಡಿ ದೇಶದ ಗಮನ ಸೆಳೆದ್ರು. ಈಗ ಅಬ್ದುಲ್ಲಾ ಅಂದ್ರೆ ಬಾಂಗ್ಲಾದೇಶದ ಎಲ್ಲಾ ಜನರಿಗೂ ಗೊತ್ತಿದೆ. ಅಬ್ದುಲ್ಲಾ ಫುಟ್ಬಾಲ್ ಆಟದ ಜೊತೆಗೆ ಬಂದರು ಒಂದರಲ್ಲಿ ಕೂಲಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ಲಾ ತನ್ನ ಹೊಟ್ಟೆ ಹೊರೆಯಲು ಕೆಲಸ ಮಾಡಿದ್ರೆ, ತನ್ನ ಕನಸಿನ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋರನ್ನು ಭೇಟಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಫುಟ್ಬಾಲ್ ಆಡುತ್ತಿದ್ದಾರೆ.
ಒಟ್ಟಿನಲ್ಲಿ ಅಬ್ದುಲ್ಲಾ ಸಾಹಸ ಎಲ್ಲರಿಗೂ ಸ್ಪೂರ್ತಿ. ನನ್ನಿಂದ ಏನು ಆಗಲ್ಲ ಅನ್ನುವವರು ಅಬ್ದುಲ್ಲಾ ಕಥೆ ಕೇಳಿದ ಮೇಲೆ ಬದಲಾಗೋದಿಕ್ಕೆ ಸಾಕಷ್ಟು ಮಾರ್ಗಗಳಿವೆ ಅನ್ನೋದನ್ನ ತಿಳಿದುಕೊಳ್ಳಬೇಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article