ಕಿರಿಕ್ ಪಾರ್ಟಿ.. ಸ್ಯಾಂಡಲ್ವುಡ್ನ ಎವರ್ಗ್ರೀನ್ ಸಿನಿಮಾಗಳಲ್ಲೊಂದು.ರಿಷಭ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಹಾಗೂ ಆ ಸಿನಿಮಾದ ಹಾಡುಗಳು ಸೂಪರ್ ಡೂಪರ್ ಹಿಟ್. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಸೇರಿದಂತೆ ಇಡೀ ಕಿರಿಕ್ ಪಾರ್ಟಿ ಟೀಮ್ ಕಾಂಬಿನೇಷನ್ ದೊಡ್ಡಮಟ್ಟಿಗೆ ಕ್ಲಿಕ್ ಆಗಿತ್ತು. 2016ರಲ್ಲಿ ತೆರೆಕಂಡ ಆ ಸಿನಿಮಾವನ್ನು ಜನ ಇಂದಿಗೂ ಮರೆತಿಲ್ಲ.
ಇದೇ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ ಇವತ್ತು ಬಹು ಭಾಷಾ ನಟಿ.. ತೆಲುಗಲ್ಲಿ ಸೂಪರ್ ಸ್ಟಾರ್.. ಸಂಯುಕ್ತಾ ಹೆಗಡೆ ಕೂಡ ಒಂದಿಷ್ಟು ಹೆಸರು ಮಾಡಿದ್ದಾರೆ. ಇಡೀ ಟೀಮ್ ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ. ಆ ಕಿರಿಕ್ ಪಾರ್ಟಿ ಬಳಿಕ 4 ವರ್ಷದ ನಂತರ ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನಾಗಿ ದರ್ಶನ ನೀಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಖುಷಿಯಲ್ಲಿರುವ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ 2 ಸಿನಿಮಾ ಮಾಡೋ ಬಗ್ಗೆ ಹೇಳಿದ್ದಾರೆ.
ಕಿರಿಕ್ ಪಾರ್ಟಿ -2 ಸಿನಿಮಾ ಮಾಡಬೇಕು ಅನ್ನೋ ಪ್ಲ್ಯಾನ್ ಇರ್ಲಿಲ್ಲ. ಆದ್ರೀಗ ಅದಕ್ಕೊಂದು ಉತ್ತಮ ವೇದಿಕೆ ದೊರೆತಿದೆ. ಕಿರಿಕ್ ಪಾರ್ಟಿಗಳು ಮತ್ತೆ ಸ್ಕ್ರೀನ್ ಮೇಲೆ ಬರ್ತಿದ್ದು, ಒಳ್ಳೆ ಫೈಟ್ ಇರಲಿದೆ ಅಂತ ಟ್ವೀಟ್ ಮಾಡಿದ್ದಾರೆ.
ಇನ್ನು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರ್ತಾರಾ ಅನ್ನೋದು ಸದ್ಯದ ಕುತೂಹಲ.
I had no certain plans of KP2 until now but I certainly got a perfect plot now… ☺️???? #KirikParties will come back on screen and it will be such a fight…
— Rakshit Shetty (@rakshitshetty) February 26, 2020