ಕೊರೋನಾ ಭೀತಿಯಲ್ಲಿ ಯಶ್ – ರಾಧಿಕಾ ಪಂಡಿತ್..!

Date:

ಚೀನಾದಿಂದ ಬಂದ ಕೊರೋನಾ ವೈರಸ್ ಇಂದು ಇಡೀ ವಿಶ್ವದಲ್ಲಿ ತನ್ನ ಕರಾಳ ಛಾಯೆ ಬೀರಿದೆ. ಭಾರತದಲ್ಲೂ ಕೊರೋನಾ ಶಾಕ್ ನೀಡಿದೆ. ಕರ್ನಾಟಕದಲ್ಲೂ ಡೆಡ್ಲಿ ವೈರಸ್ ಭೀತಿ ಹುಟ್ಟಿಸಿದೆ. ಈ ಭೀತಿ ಸ್ಯಾಂಡಲ್​ವುಡ್​ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ, ನಟಿ ಸ್ಯಾಂಡಲ್ವುಡ್​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೂ ಕಾಡಿದೆ.


ಹೌದು ನಾಳೆ, ಅಂದ್ರೆ ಮಾರ್ಚ್​ 7 ರಂದು ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಆಚರಿಸಿಕೋ ತುದಿಗಾಲಲ್ಲಿದ್ದರು. ಯಶ್ ಅಭಿಮಾನಿಗಳೂ ಸಹ ರಾಧಿಕಾರಿಗೆ ಶುಭಹಾರೈಸಲು ಮನೆಗೆ ತೆರಳಲು ಪ್ಲ್ಯಾನ್ ಮಾಡಿದ್ದರು. ಯಶ್ – ರಾಧಿಕಾ ಅಭಿಮಾನಿಗಳ ಒಡಗೂಡಿ ರಾಧಿಕಾರ ಹುಟ್ಟುಹಬ್ಬ ಆಚರಿಸಲು ಯೋಚಿಸಿದ್ದರು. ಆದರೆ, ಕೊರೋನಾ ವೈರಸ್ ದೆಸೆಯಿಂದ ಆ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಕೊರೋನಾ ಭೀತಿಯಲ್ಲಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಗುತ್ತಿಲ್ಲ. ಹೆಚ್ಚಿನ ಜನ ಸೇರದಂತೆ ಮನವಿ ಮಾಡಲಾಗಿದೆ.
ಬೆಂಗಳೂರಲ್ಲಿ ಈ ಬಗ್ಗೆ ಮಾತನಾಡಿರುವ ರಾಕಿಂಗ್ ಸ್ಟಾರ್ ಯಶ್, ಕೊರೋನಾ ಭೀತಿಯಿಂದ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.


ಮಕ್ಕಳು ಕೂಡ ಇದ್ದಾರೆ. ಕೊರೋನಾದಿಂದ ಹೆಚ್ಚಿನ ಜನ ಸೇರೋ ಹಾಗಿಲ್ಲ. ಹಾಗಾಗಿ ಯಾರೂ ಬೇಜಾರು ಮಾಡ್ಕೋಬೇಡಿ ಈ ಸಲ ದೊಡ್ಡ ರೀತಿಯಲ್ಲಿ ರಾಧಿಕಾ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಮನವಿ ಮಾಡಿದ್ದಾರೆ.
ಕೊರೋನಾ ಆತಂಕವಿದ್ದು ಗುಂಪು ಗುಂಪಾಗಿ ಸೇರಬೇಡಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾದರೂ ಚಿಕಿತ್ಸೆ ಪಡೆದುಕೊಳ್ಳಿ ಎಂದು ಯಶ್ ಕರೆಕೊಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....