ಚಕ್ರವರ್ತಿ ಸೂಲಿಬೆಲೆಗೆ ‘ಮೊದಲು ಮಾನವನಾಗು’ ಎಂದ ಡಾಲಿ ಧನಂಜಯ್!

Date:

ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ನಟ ಡಾಲಿ ಧನಂಜಯ್ ಮಾನವೀಯತೆ ಪಾಠ ಬೋಧಿಸಿದ್ದಾರೆ. ಸೂಲಿಬೆಲೆಯ ಟ್ವೀಟೊಂದಕ್ಕೆ ನೇರಾನೇರವಾಗಿ ಒಂದೇ ಒಂದು ವಾಕ್ಯದಲ್ಲಿ ಧನಂಜಯ್ ಚಾಟಿ ಬೀಸಿದ್ದಾರೆ. ಸೂಲಿಬೆಲೆ ಮತ್ತು ಧನಂಜಯ್ ಟ್ವೀಟ್ವಾರ್ ನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.


ಇಟಲಿಯಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಸುಮಾರು 24,747 ಮಂದಿ ಕೊರೋನಾ ಸೋಂಕಿತರಾಗಿದ್ದು 1809 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗಳ ಕೊರತೆ ಉಂಟಾಗಿರುವುದರಿಂದ 80 ವರ್ಷಕ್ಕೂ ಮೇಲ್ಪಟ್ಟವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ಯೋಚಿಸಲಾಗುತ್ತಿದೆ. ಸೋಂಕು ತಗುಲಿರುವ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ” ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ. ಆ ಸುದ್ದಿಯನ್ನು ಟ್ಟಿಟ್ಟರ್ನಲ್ಲಿ ಹಂಚಿಕೊಂಡಿರುವ ಸೂಲಿಬೆಲೆ, `ಜೀಸಸ್ ಲವ್ಸ್ ಆಲ್’ ಎಂಬ ವ್ಯಂಗ್ಯಭರಿತ ಶೀರ್ಷಿಕೆ ನೀಡಿದ್ದಾರೆ. ಅದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಾಲಿ ಧನಂಜಯ್ ಕೂಡ ಆ ಟ್ವೀಟನ್ನು ಖಂಡಿಸಿ, ಸೂಲಿಬೆಲೆಗೆ ಮಾನವೀಯತೆ ಪಾಠ ಬೋಧಿಸಿದ್ದಾರೆ. “ ಏನಾದರೂ ಆಗು ಮೊದಲು ಮಾನವನಾಗು’’ ಅಂತ ಟ್ವೀಟ್ ಮೂಲಕವೇ ಮಾನವೀಯತೆ ಪಾಠ ಮಾಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಸೂಲಿಬೆಲೆ, “ಕ್ಷಮಿಸಿ ನಾನು ನನ್ನ ತಪ್ಪನ್ನು ಸರಿಪಡಿಸಿದ್ದೇನೆ. ವಿಶ್ವದಾದ್ಯಂತ ಮಿಷನರಿಗಳು ಜೀಸಸ್ ಲವ್ಸ್ ಆಲ್ ಎಂದು ಹೇಳುತ್ತವೆ. ಆದ್ರೆ ಇಟಲಿಯ ವಯೋವೃದ್ಧರ ಸೇವೆಗೆ ನಿರಾಕರಿಸಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ ಆದ್ರೆ 80 ವರ್ಷ ಮೇಲ್ಪಟ್ಟವರನ್ನು ನಿರಾಕರಿಸುತ್ತಾನಾ? ಯಾರೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದೀರೋ ಗಮನಿಸಿ ವ್ಯಾಟಿಕನ್ ಸಿಟಿ ಇಟಲಿಗೆ ಹತ್ತಿರವಿದೆ’’ ಎಂದಿದ್ದಾರೆ.


ಸದ್ಯ ಈ ಟ್ವೀಟ್ ವಾರ್ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಕೆಲವರು ಡಾಲಿ ಪರ ಬ್ಯಾಟ್ ಬೀಸುತ್ತಿದ್ದರೆ, ಮತ್ತೆ ಕೆಲವರು ಚಕ್ರರ್ತಿ ಸೂಲಿಬೆಲೆ ಪರ ಬ್ಯಾಟಿಂಗ್ ನಡೆಸುತ್ತಿದ್ದು, ಸದ್ಯ ಟ್ವಿಟ್ಟರ್ನಲ್ಲಿ ಸೂಲಿಬೆಲೆ, ಡಾಲಿ ಟ್ವೀಟ್ನದ್ದೇ ಸೌಂಡು.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....