ಕೊರೋನಾ ಬಂದ್​ನಿಂದ ಸ್ಯಾಂಡಲ್​​ವುಡ್ ಗಾದ ನಷ್ಟ ಕೇಳಿದ್ರೆ ತಲೆ ತಿರುಗುತ್ತೆ!

Date:

ಕೊರೋನಾದಿಂದ ಇಡೀ ವಿಶ್ವ ನಲುಗಿದೆ. ಜನ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್​ಟಾಪ್​ಗಳನ್ನು ನೀಡಿ ಮನೇಲೇ ಕುಳಿತು ಕೆಲಸ ಮಾಡಿ ಅಂದಿವೆ.. ಕೆಲವು ಪರೀಕ್ಷೆಗಳು ಹೊರತು ಪಡಿಸಿ ಬಹುತೇಕ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪುಟ್ಟ ಪುಟ್ಟ ಮಕ್ಕಳನ್ನು ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ತೇರ್ಗಡೆ ಮಾಡಿ ಈಗಾಗಲೇ ಸುಧೀರ್ಘ ರಜೆ ಘೋಷಿಸಲಾಗಿದೆ.
ಮಾಲ್​ಗಳು, ಥಿಯೇಟರ್​ಗಳು ಇಲ್ಲದೆ ನಗರ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಕೊರೋನಾ ಆರ್ಥಿಕತೆಗೆ ಬಹುದೊಡ್ಡ ಮಟ್ಟಿನ ಹೊಡೆತ ನೀಡಿದೆ. ಆ ಬಿಸಿ ನಮ್ಮ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಫಿಲ್ಮ್​ ಚೇಂಬರ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕೊರೋನಾ ವೈರಸ್​ ಹಬ್ಬುವಿಕೆ ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 22ರವರೆಗೆ ಬಂದ್ ಮಾಡಲಾಗಿತ್ತು. ಈಗ ಮಾರ್ಚ್ 31ರವರೆಗೆ ಚಿತ್ರ ಪ್ರದರ್ಶನವನ್ನು ಬಂದ್ ಮಾಡಲಾಗಿದೆ. ಬಂದ್​ಗೂ ಮುನ್ನ ಯಾವ ಸಿನಿಮಾಗಳೆಲ್ಲಾ ಪ್ರದರ್ಶನಕಾಣುತ್ತಿದ್ದವೋ ಬಂದ್ ತೆರವಿನ ನಂತರ ಆ ಸಿನಿಮಾಗಳಿಗೇ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಚಿತ್ರೀಕರಣ ನಡೆಸುವವರಿಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಬೇಕು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿರುವ ಚಿತ್ರಗಳು ಗೊಂದಲವಿಲ್ಲದೆ ಡೇಟ್ ಅನೌನ್ಸ್ ಮಾಡಬೇಕು ಎಂದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಬಂದ್​ನಿಂದ ಚಿತ್ರರಂಗಕ್ಕಾದ ನಷ್ಟವನ್ನು ವಿವರಿಸಿದ್ರು. ಬಂದ್​ನಿಂದ ಸ್ಯಾಂಡಲ್​ವುಡ್​ಗೆ ಸುಮಾರು 30 ರಿಂದ 40 ಕೋಟಿ ರೂ ಅಷ್ಟು ನಷ್ಟವಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳೂ ಸೇರಿಸದಂತೆ 80 ರಿಂದ 100 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...