ನಿಮ್ಮ ರಾಶಿಗೆ ತಕ್ಕಂತೆ ನಿಮ್ಮ ಗುಣ. ನಿಮ್ಮ ಗುಣಕ್ಕೆ ತಕ್ಕಂತೆ ಹನಿಮೂನ್ ಪ್ಲೇಸ್…!
ಹೌದು, ನೀವು ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಹನಿಮೂನ್ ಪ್ಲೇಸ್ ಸೆಲೆಕ್ಟ್ ಮಾಡಿಕೊಳ್ಳಿ.
ಮೇಷ : ಈ ರಾಶಿಯವರು ಕ್ರಿಯಾತ್ಮಕ ಮತ್ತು ಸಾಹಸಪ್ರಿಯರು. ಇವರಿಗೆ ಸರಿಯಾದ ತಾಣ ಮನಾಲಿ ಮತ್ತು ದುಬೈ ನಂತಹ ಸ್ಥಳಗಳು.
ವೃಷಭ : ಇವರು ಪ್ಲ್ಯಾನಿಂಗ್ ಇಷ್ಟಪಡುವವರು. ಶಾಪಿಂಗ್, ಒಳ್ಳೆಯ ಲಂಚ್, ಡಿನ್ನರ್ ಇವರಿಗಿಷ್ಟ. ಈ ರಾಶಿಯವರು ನಮ್ಮ ಭಾರತದ ಉದಯ್‌ಪುರ್ ಮತ್ತು ವಿದೇಶವಾದಲ್ಲಿ ಇಟಲಿಗೆ ಹನಿಮೂನ್ ಗಾಗಿ ಹೋದರೆ ಚಂದ.
ಮಿಥುನ : ಈ ರಾಶಿಯವರು ಗಾಸಿಪ್ ಮತ್ತು ಫನ್ ಲವಿಂಗ್ ವ್ಯಕ್ತಿತ್ವದವರು. ರೊಮ್ಯಾಂಟಿಕ್ ತಾಣಗಳು ಇಷ್ಟವಾಗುತ್ತವೆ . ಊಟಿ ಅಥವಾ ಲಂಡನ್ ಇವರ ಹನಿಮೂನ್ ಗೆ ಸೂಕ್ತ.
ಕರ್ಕಾಟಕ : ಈ ರಾಶಿಯವರು ಬೇರೆ ಬೇರೆ ತಾಣಗಳಿಗಳನ್ನು ಎಂಜಾಯ್ ಮಾಡುತ್ತಾರೆ. ಇವರಿಗೆ ಪ್ರವಾಸ ಇಷ್ಟ. ಈ ರಾಶಿಯವರು ಹನಿಮೂನ್‌ಗೆ ಲಕ್ಷದ್ವೀಪ ಅಥವಾ ಗ್ರೀಸ್ ಆಯ್ಕೆ ಮಾಡಿಕೊಳ್ಳಿ.
ಸಿಂಹ : ಗ್ಲಾಮರ್, ಲಕ್ಸುರಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ನಗರಗಳನ್ನು ಇಷ್ಟಪಡುವ ವ್ಯಕ್ತಿತ್ವ ಈ ರಾಶಿಯವರದ್ದು. ಇವರ ಹನಿಮೂನ್‌ಗೆ ಸರಿಯಾಗಬಹುದಾದ ತಾಣ ರಾಜಸ್ಥಾನ, ಪ್ಯಾರಿಸ್.
ಕನ್ಯಾ : ಇವರು ಏನಾದರು ಹೊಸ ಹೊಸ ವಿಷಯಗಳನ್ನು ತಿಳಿಯಲು ಹಾಗೂ ನೋಡಲು ಇಷ್ಟಪಡುತ್ತಾರೆ. ಈ ರಾಶಿಯವರು ಈಜಿಪ್ಟ್ ಅಥವಾ ಜೈಸಲ್ಮೇರ್‌ಗೆ ಹನಿಮೂನ್ ಗಂತ ಹೋಗಬಹುದು.
ತುಲಾ : ಸಮಾಜವನ್ನು ತುಂಬಾ ಇಷ್ಟಪಡುವವರು. ಶಾಂತಿ ಪ್ರಿಯರಾದ ಇವರಿಗೆ ಟೂರ್ ಇಷ್ಟ. ಈ ರಾಶಿಯವರಿಗೆ ಸ್ಪೇನ್ ಮತ್ತು ಕೇರಳ ಹನಿಮೂನ್ ಎಂಜಾಯ್ ಮಾಡಲು ಹೇಳಿ ಮಾಡಿಸಿದ ತಾಣ.
ವೃಶ್ಚಿಕ : ಬೇರೆ ಬೇರೆ ತಾಣಗಳ ಬಗ್ಗೆ, ಅಲ್ಲಿನ ಸಂಸ್ಕೃತಿ, ಭಾಷೆಯನ್ನು ಕಲಿಯಲು ಇಷ್ಟಪಡುವ ನೀವು ಜಮ್ಮು ಕಾಶ್ಮೀರ ಅಥವಾ ವೆನಿಸ್ ಆಯ್ಕೆ ಮಾಡಿಕೊಳ್ಳಬಹುದು.
ಧನು : ಈ ರಾಶಿಯವರಿಗೆ ತಮ್ಮದೇ ಆದ ಟೂರ್ ಮಾಡಲು ಇಷ್ಟವಾಗಿರುವುದರಿಂದ ಇವರು ಪ್ಯಾಕೇಜ್ ಟೂರ್ ಇಷ್ಟಪಡಲ್ಲ. ಹಾಗಾಗಿ ಇವರು ಹನಿಮೂನ್ ಗೆ ಲೋನಾವಾಲ ಅಥವಾ ಪ್ಯಾರೀಸ್ ಗೆ ಹೋಗ್ಬಹುದು.
ಮಕರ : ಐತಿಹಾಸಿಕ ಹಿನ್ನೆಲೆ ಇರುವ ತಾಣಗಳಿಗೆ ಭೇಟಿ ನೀಡಲು ಈ ರಾಶಿಯವರಿಗಿಷ್ಟ.ಈ ರಾಶಿಯವರಿಗೆ ಪರ್‌ಫೆಕ್ಟ್ ಆದ ತಾಣ ಎಂದರೆ ಕೋವಲಮ್ ಅಥವಾ ಪ್ರಾಗ್ಯು
ಕುಂಭ : ಈ ರಾಶಿಯವರಿಗೆ ರಾಜಕೀಯ, ಮಾನವಿಯ ಚಟುವಟಿಕೆಗಳಲ್ಲಿ ತುಂಬಾನೆ ಆಸಕ್ತಿ ಇರುತ್ತದೆ. ಈ ರಾಶಿಯವರಿಗೆ ಗೋವಾ ಟೂರ್ ಅಥವಾ ಬೆರ್ಲಿನ್ ನಲ್ಲಿ ಹನಿಮೂನ್ ಸೂಪರ್.
ಮೀನ : ಮೀನಾ ರಾಶಿಯವರು ಪ್ರಕೃತಿ ಪ್ರಿಯರು. ಈ ರಾಶಿಯವರಿಗೆ ಸೂಕ್ತವಾದ ತಾಣ ಎಂದರೆ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದಾದರೆ ಅಂಡಮಾನ್ ನಿಕೋಬಾರ್ ಮತ್ತು ಜಪಾನ್.