ಪ್ರತಿಯೊಂದು ಜೀವಿಗೂ ಲೈಂಗಿಕತೆ ಅನ್ನೋದು ಅವಶ್ಯಕತೆ.ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಾನವನ ದೇಹದಲ್ಲಿನ ಅನೇಕ ಬದಲಾವಣೆಗೆ ಕಾರಣವಾಗುತ್ತದೆ. ಹಾರ್ಮೋನ್ ಬದಲಾವಣೆ, ವರ್ತನೆಯಲ್ಲಿ ಬದಲಾವಣೆ, ದೀರ್ಘಾಯುಷ್ಯ ಹೀಗೆ ಅನೇಕ ಪರಿವರ್ತನೆ ಅಥವಾ ಲಾಭಕ್ಕೆ ಕಾರಣವಾಗಬಹುದು. ಹೀಗೆ ಸೆಕ್ಸ್ನಲ್ಲಿ ಸಕ್ರೀಯರಾಗಿರುವವರೂ ನಿಲ್ಲಿಸಿ ಬಿಟ್ರೆ ದೇಹದಲ್ಲಿ ಏನಾಗುತ್ತೆ ಗೊತ್ತಾ..?
ಇದು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕಾಣಿಸಿಕೊಳ್ಳಬಹುದು. ರಕ್ತ ಪರಿಚಲನೆಯಲ್ಲಿನ ಸಮಸ್ಯೆ ಸಹ ಕಾರಣವಾಗುತ್ತದೆ. ದೀರ್ಘ ಕಾಲದ ನಂತರ ಸಂಭೋಗಕ್ಕೆ ನಿಂತರೆ ಯೋನಿ ಸಡಿಲವಾಗಿರುವುದರಿಂದ ಹಳೆಯ ಅನುಭವ ಸಿಗದೆ ಇರಬಹುದು.
ಸೆಕ್ಸ್ ಮಾಡುವುದನ್ನು ನಿಲ್ಲಿಸಿದರೆ ಅದು ನಿಮ್ಮ ಸೆಕ್ಸ್ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಸ್ತಮೈಥುನದಂತಹ ಕ್ರಿಯೆಯಿಂದ ಲೈಂಗಿಕ ವಿಚಾರದ ಜೀವಂತಿಕೆ ಕಾಪಾಡಿಕೊಳ್ಳಬಹುದು. ಪುರುಷನಿಗೆ ಆಗುವಷ್ಟು ಪರಿಣಾಮ ಮಹಿಳೆಯರಿಗೆ ಆಗುವುದಿಲ್ಲ. ಪುರುಷನ ಶಿಶ್ನ ನಿಮಿರುವಿಕೆಯನ್ನು ಒಳಗೊಳ್ಳದಿದ್ದರೆ ಉದ್ರೇಕದ ಸಮಸ್ಯೆ ಎದುರಾಗಬಹುದು.

ನಿಯಮಿತ ಸೆಕ್ಸ್ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಇದು ನಿಂತಾಗ ಮಹಿಳೆಯರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಕಳೆದುಕೊಳ್ಳಬಹುದು.
ಸ್ಟ್ರೇಸ್ ಎನ್ನುವ ಆಧುನಿಕ ಮಾಯೆ ನಿಮ್ಮನ್ನು ಅಪ್ಪಿಕೊಳ್ಳಬಹುದು. ಸೆಕ್ಸ್ ನಲ್ಲಿ ಬರ್ನ್ ಆಗುವ ಕ್ಯಾಲೋರಿಗಳು ಹಾಗೂ ಮೆದುಳಿನಲ್ಲಿ ಆಗುವ ಬದಲಾವಣೆಗಳಿಂದ ನೀವು ವಂಚಿತರಾಗುತ್ತೀರಿ.
ಸೆಕ್ಸ್ ನಿಲ್ಲಿಸಿದರೆ ಯೋನಿ ಬಿಗಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಒಂದು ಹಂತದ ಸೆಕ್ಸ್ ಗೆ ಸಪೋರ್ಟ್ ಮಾಡುತ್ತಿದ್ದ ಯೋನಿಯ ಕೋಶಗಳು ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳಬಹುದು.