ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ಪೈಲ್ವಾನ್.
ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಸುದೀಪ್ ಗೆ ಗುರುವಾಗಿ , ಆಕಾಂಕ್ಷ ಸಿಂಗ್ ನಾಯಕಿಯಾಗಿ ಅಭಿನಯಿಸಿದ್ದ ಪೈಲ್ವಾನ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲೂ ಅಬ್ಬರಿಸಿತ್ತು.
2019 ಸೆಪ್ಟೆಂಬರ್ 12 ರಂದು ರಿಲೀಸ್ ಆದ ಈ ಪೈಲ್ವಾನ್ ಗೆ ಆ್ಯಕ್ಷನ್ ಕಟ್ ಹೇಳಿದ್ದು ಕಿಚ್ಚನ ‘ಹೆಬ್ಬುಲಿ’ ಡೈರೆಕ್ಟರ್ ಕೃಷ್ಣ. ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದ್ದ ಪೈಲ್ವಾನ್ ಕಿರುತೆರೆಯಲ್ಲೂ ಸಖತ್ ಸೌಂಡು ಮಾಡಿದೆ.
ಅನಾಥ ಹುಡುಗನೊಬ್ಬ ಪೈಲ್ವಾನ್ ಗುರುವಿನ ಕೈಗೆ ಸಿಕ್ಕು, ಅವರ ಮನೆ ಮಗನಾಗಿ ಬೆಳೆದು, ಪೈಲ್ವಾನ್ ಆಗಿ ಮಿಂಚುವ ಹಾಗೂ ಬದಲಾದ ಸನ್ನಿವೇಶದಲ್ಲಿ ಬಾಕ್ಸರ್ ಆಗುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇಲ್ಲಿ ತಂದೆ- ಮಗ, ತಂದೆ – ಮಗಳು, ಗುರು – ಶಿಷ್ಯ , ಪ್ರೆಯಸಿ, ಪತ್ನಿ ಎಲ್ಲಾ ಭಾವನೆಗಳಿವೆ.
ಕುಸ್ತಿಪಟುವಾಗಿ, ಬಾಕ್ಸರ್ ಆಗಿ ಕಿಚ್ಚ ಸುದೀಪ್ ಅಭಿನಯಿಸಿದ್ದ ಪೈಲ್ವಾನ್ ಸಿನಿಮಾ ಕಿರುತೆರೆಯಲ್ಲೂ ದಾಖಲೆ ನಿರ್ಮಿಸಿದೆ. ಮೊದಲ ಸಲ ಪೈಲ್ವಾನ್ ಕಿರುತೆರೆಯಲ್ಲಿ ಸದ್ದು ಮಾಡಿದಾಗ ಅರ್ಥಾತ್ ಪ್ರಸಾರವಾದಾಗ 16.5 ಟೆಲಿವಿಷನ್ ರೇಟಿಂಗ್ ಪಾಯಿಂಟ್ ( ಟಿಆರ್ ಪಿ) ಬಂದಿತ್ತು. ಎರಡನೇ ಬಾರಿ ಪ್ರಸಾರವಾದಾಗ 11.3 ಟಿಆರ್ ಪಿ ಬಂದಿದ್ದು, ಇದು ದಾಖಲೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಸುದೀಪ್ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ.