ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದ ಬಹು ಭಾಷಾ ನಟಿ ಬಿಚ್ಚಿಟ್ಟ ಸಿನಿರಂಗದ ‘ ಆ’ ಕರಾಳ ಸತ್ಯ..!

Date:

ಪ್ರತಿಭೆ ಇದ್ದಲ್ಲಿ ಒಂದಲ್ಲ‌ ಒಂದು ದಿನ ಎತ್ತರಕ್ಕೆ ಬೆಳೆಯಬಹುದು‌.‌ ಪ್ರತಿಭೆಗೆ ಎಂದೂ ಸಾವಿಲ್ಲ..ಸೋಲಿಲ್ಲ….ಇದು ಪ್ರತಿರಂಗಕ್ಕೂ ಒಪ್ಪಿತ…ಆದರೆ ಸಿನಿಮಾರಂಗದಲ್ಲಿ ನಟನೆ ಸೇರಿದಂತೆ ಕಲಾ ಸೇವೆಗೆ ಬೇಕಾಗಿರು ಪ್ರತಿಯೊಂದಿದ್ದರೆ ಸಾಲದು ಎಲ್ಲದಕ್ಕೂ ಸೈ ಎನ್ನುವ ‘ ಬೆತ್ತಲೆ’ ಮನಸ್ಥಿತಿ ಕೂಡ ಬೇಕು ಎಂಬುದು ಜಗಜ್ಜಾಹಿರ…! ಇಂತಹದ್ದೇ ಅಸಹ್ಯದ ಕಾರಣದಿಂದಾಗಿ #Meetoo ಅಭಿಯಾನ ಶುರುವಾಗಿದ್ದು…ಚಿತ್ರರಂಗ‌ದ ನಾಲ್ಕುಗೋಡೆಗಳ ಸುತ್ತಲಿನ ಕಥೆಗಳು ತೆರೆದುಕೊಂಡಿದ್ದು…! 

 

 

ಅದೆಂಥಾ ಪ್ರತಿಭೆಯಿದ್ದರೂ ನಟಿಯರಿಯರಿಂದ ಕೆಲವರು ಬಯಸುವುದೇ ಬೇರೆಯದನ್ನು…ಅದೇ ಉದ್ದೇಶಕ್ಕಾಗಿ ಅನೇಕ ನಟಿಯರು ಚಿತ್ರರಂಗಕ್ಕೆ ಬಂದಷ್ಟೇ ಬೇಗ ಗುಡ್ ಬೈ ಹೇಳಿದ್ದಾರೆ. ಅನೇಕರು ಪ್ರವೇಶಕ್ಕೂ ಮುನ್ನ ತಮ್ಮ ಕನಸುಗಳನ್ನು ಕೊಂದಿದ್ದಾರೆ….. ಎಷ್ಟೋ ಮಂದಿ ಸಿನಿ ರಂಗವೇ ಬೇಡ ಅಂತಿದ್ದಾರೆ. ಪೋಚಕರು ತಮ್ಮ ಮಗಳನ್ನು ಸಿನಿಮಾ , ನಟನೆ ಅಂತ ಬೇಡ ಎಂದು ಕೂರಿಸುವುದು ಇದೇ ಕಾರಣಕ್ಕೆ.

ಅನೈತಿಕತೆಗೆ ಬೆಲೆ….ವೃತ್ತಿಧರ್ಮವನ್ನು‌ ಮರೆತು ಮಂಚಕ್ಕೆ ಕರೆಯುವ ಕೆಲ ಮಂದಿಯಿಂದ ಸಿನಿ ಜಗತ್ತನ್ನು ಬೇರೆಯದೇ ದೃಷ್ಟಿಯಿಂದ ನೋಡುವಂತಾಗಿದೆ. ಸಿನಿಮಾರಂಗ  ಹೆಣ್ಣು ಮಕ್ಕಳಿಗೆ ಸೇಫಲ್ಲ ಎಂಬ ಮಾತು ಹಿಂದಿನಿಂದಲೂ ಇದೆ… ಆ ಮಾತು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಕರಾಳತೆಗೆ ಹಂತಕ್ಕೆ ಬಂದಿದೆ…ಪ್ರತಿಭೆಗಿಂತ ಕೆಟ್ಟದಾಗಿ ಬಳಸಿಕೊಳ್ಳಲು ನೋಡುವ ಕೆಲವು ಮಂದಿಯಿಂದ ಕೆಟ್ಟ ಹೆಸರು ಬಂದಿದೆ.

ಕೆಟ್ಟ ‌ಕೆಲಸಗಳನ್ನು ಮಾಡಲು ಒಪ್ಪದ ನಟಿಯರಿಗೆ ಹೆಚ್ಚಿನ ಅವಕಾಶಗಳು ಸಿಗಲ್ಲ ಎಂಬುದು ಈ ಹಿಂದಿನಿಂದಲೂ ಕೇಳಿಬರುತ್ತಿರುವ ಕಳಂಕ…ಈ ಬಗ್ಗೆ ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರು ಮಾತನಾಡಿದ್ದಾರೆ…

ಹೌದು ರವಿಚಂದ್ರನ್ ಅಭಿನಯದ ನರಸಿಂಹ ಸಿನಿಮಾ ಸೇರಿದಂತೆ ಅಲೋನ್, ಡಕೋಟ ಪಿಕ್ಚರ್, ನಮಸ್ತೆ ಮೇಡಂ, ಲವ್ ಯು ಆಲಿಯಾ ಸೇರಿದಂತೆ ಒಂದಿಷ್ಟು ಕನ್ನಡ ಸಿನಿಮಾಗಳಲ್ಲಿ ನಟಸಿರುವ ನಿಕೇಶಾ ಪಾಟೀಲ್ ಚಿತ್ರರಂಗದ ಕರಾಳ ಮುಖವನ್ನು ಅನಾವರಣ ಮಾಡಿರುವವರು.

ಗುಜರಾತಿನ ಕುಟುಂಬದಲ್ಲಿ ಹುಟ್ಟಿದ ನಿಕೇಶಾ ಬೆಳೆದಿದ್ದು ಅಮೆರಿಕಾದಲ್ಲಿ. ಅನೇಕ ಬಿಬಿಸಿ ಶೋಗಳಲ್ಲಿ ಭಾಗಿಯಾಗಿದ್ದ ಅನುಭವವೂ ಅವರಿಗಿದೆ. ..

ಭಾರತಕ್ಕೆ ವಾಪಸ್ಸಾದ ಮೇಲೆ‌ 2010ರಲ್ಲಿ ತೆಲುಗು ಭಾಷೆಯ ಪುಲಿ ಎಂಬ ಸಿನಿಮಾದಲ್ಲಿ ಅಭಿನಯಿಸಿದರು. ಆಮೇಲೆ ಹೆಚ್ಚು ಕಮ್ಮಿ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ , ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಅಭಿನಯಿಸಿದ್ದಾರೆ‌.

ಇನ್ನು ಚಿತ್ರರಂಗದ ಬಗ್ಗೆ ಮಾತನಾಡಿರುವ ಅವರು, ಲೈಂಗಿಕ ದೌರ್ಜನ್ಯಗಳಿಗೆ ಒಳಗಾದವರು ಬಹಳಷ್ಟು ಮಂದಿ ಇದ್ದಾರೆ. ನನಗೂ ಕೂಡ ಕೆಲವರು ಆಫರ್ ಗಳನ್ನು ಒಪ್ಪಿಕೋ ಎಂದು ಹೇಳುತ್ತಾರೆ. ಆದರೆ , ನಾನು ಹಾಗೆ ಮಾಡಲ್ಲ. ಹೀಗಾಗಿ ನನಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಸಿನಿಮಾ ಕ್ಷೇತ್ರಕ್ಕೆ ಬರುತ್ತಾರೆ.‌ ವೃತ್ತಿ ಧರ್ಮ ಮರೆತ ಕೆಲವರಿಂದ ಒಳ್ಳೆಯ ಸಿನಿಮಾ ಮಾಡಿದರೂ ಮತ್ತೆ ಮಾಡಲಾಗಲ್ಲ ಎಂದಿದ್ದಾರೆ.

ಅಲ್ಲದೆ ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದ. ನಾನು ಈಗ ನಟಿ ಎಂಬ ಕಾರಣಕ್ಕೆ ಆತ ನನ್ನ ಮದ್ವೆ ಆಗುತ್ತಿಲ್ಲ ಎಂತಲೂ ಹೇಳಿಕೊಂಡಿದ್ದಾರೆ…..

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...