ನಿಮ್ಮ ಜೀವನದಲ್ಲಿ ಈ ಸಾಮಾನ್ಯ ಕನಸುಗಳ ಮಹತ್ವ…!

Date:

ಪ್ರತಿನಿತ್ಯ ಒಂದಿಲ್ಲೊಂದು ಚಿತ್ರ ವಿಚಿತ್ರ ಕನಸುಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಆದರೆ ನಾವ್ಯಾರು ಆ ಕನಸುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರೋದಿಲ್ಲ. ನಮ್ಮ ಮನಸ್ಸು ಸಂಪೂರ್ಣ ಸ್ತಬ್ದವಾದಾಗಿದೆಯೆಂದು ನಾವು ಭಾವಿಸಿದಾಗ ಭಯ, ಕಚಗುಳಿ, ವಿಸ್ಮಯ, ಸಂಭ್ರಮ ನೋವು ಸಂಚಾರ ಹೀಗೆ ಏನೇನೊ ಯೋಚನೆಗಳು ಸುಪ್ತ ಮನಸ್ಸಿನಲ್ಲಿ ಘಟಿಸಿ ಮರು ಕ್ಷಣದಲ್ಲೆ ಕಣ್ಮರೆಯಾಗಿ ಬಿಡುತ್ತವೆ.

ಕೆಲವರು ಮಾತ್ರ ಇಂತಹ ಕನಸುಗಳ ಬಗ್ಗೆ ಚಿಂತಿಸುತ್ತಾ ಅದರಿಂದ ಒಳ್ಳೆಯದಾಗುತ್ತೆ ಅಥವಾ ಕೆಟ್ಟದಾಗುತ್ತೆ ಅಂತ ನಂಬಿ ಭಯದಲ್ಲಿ ಬದುಕ್ತಾ ಇರ್ತಾರೆ. ಆದರೆ ಕನಸುಗಳು ನಿಜವಾಗಿ ಬೇರೆಯದೆ ಆದ ನಮ್ಮಲ್ಲಿಲ್ಲದ ಹೊಸ ಕಲ್ಪನೆಗಳಲ್ಲ. ಸುಪ್ತ ಮನಸ್ಸಿನಲ್ಲಿದ್ದ ಬಯಕೆಗಳು, ನಿರೀಕ್ಷೆಗಳು ಸಮಸ್ಯೆಗಳ ಕುರಿತು ನಾವು ಯೋಚಿಸುತ್ತಿದ ಪರಿಹಾರಗಳು ಮತ್ತು ಆಡದೇ ಉಳಿದ ಕೆಲವೊಂದು ಮಾತುಗಳೆ ಕನಸುಗಳಾಗಿ ರೆಕ್ಕೆ ಪುಕ್ಕ ಕಟ್ಟಿಕೊಂಡು ವಿಚಿತ್ರ ಅನುಭವ ನೀಡುತ್ತವೆ. ಸಾಮಾನ್ಯವಾಗಿ ಕೆಲವೊಂದು ಸ್ವಪ್ನಗಳು ಎಲ್ಲರಿಗೂ ಪದೆ ಪದೆ ಕಾಣಿಸಿಕೊಳ್ಳುತ್ತವೆ.

ಅರ್ಥವೇ ಇಲ್ಲದ ಅಬ್ಸಟ್ರಾಕ್ಟ್ ಆದ ಕನಸುಗಳು ಕೂಡ ಏನೊ ಅರ್ಥವನ್ನು ಹೇಳುತ್ತಿರುತ್ತವೆ. ಹಿಂದಿನ ಕಾಲದಲ್ಲಾದರೆ ಮನುಷ್ಯ ವಿಚಿತ್ರ ಕನಸುಗಳಿಗೆ ಏನೇನೊ ಅರ್ಥ ಕಲ್ಪಿಸಿ ಶಕುನ- ಅಪಶಕುನ ಎಂದು ನಂಬಿಬಿಡುತ್ತಿದ್ದ. ಆದರೆ ಇಂದು ವಿಜ್ಞಾನ ಪ್ರಗತಿ ಸಾಧಿಸಿದೆ. ಮನೋ ವೈದ್ಯರು ಸ್ವಪ್ನಗಳ ಹಿಂದಿನ ಕಾರಣಗಳನ್ನು ಪತ್ತೆ ಹಾಗಾದ್ರೆ ಮೋಸ್ಟ್ ಕಾಮನ್ ಆಗಿ ಕಾಣಿಸಿಕೊಳ್ಳೊ ಕನಸುಗಳ ಬಗ್ಗೆ ತಿಳ್ಕೋಬೇಕೆಂದರೆ ಇಲ್ಲಿ ನೋಡಿ..
1. ಯಾರೋ ಹಿಂಬಾಲಿಸಿದಂತೆ
ಇದು ಸರ್ವೇ ಸಾಮಾನ್ಯವಾದ ಕನಸು. ಬಹುತೇಕರಿಗೆ ಜೀವನದಲ್ಲಿ ಒಮ್ಮೆಯಾದರೂ ಇಂಥ ಕನಸುಗಳ ಅನುಭವವಾಗಿರುತ್ತದೆ. ನಿಜ ಜೀವನದಲ್ಲಿ ನಿಮಗೆ ಯಾರಿಂದಲಾದರೂ ಬೆದರಿಕೆಯಿದ್ದರೆ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವಂತೆ. ಇದರಿಂದ ನೀವು ಓಡುತ್ತಿದ್ದೀರಿ ಎಂದು ಈ ಕನಸುಗಳು ಸೂಚಿಸುತ್ತವೆ. ಬಾಹ್ಯ ಜಗತ್ತಿನ ಬೆದರಿಕಗಳೇ ಆಗಿರಬೇಕು ಅಂತ ಇಲ್ಲ. ಮನಸ್ಸಿನೊಳಗಿನ ಆಂತರಿಕ ಯುದ್ಧಗಳ ಪರಿಣಾಮದಿಂದ ಕೂಡ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ.


2. ಎತ್ತರದಿಂದ ಬೀಳುತ್ತಿರುವಂತೆ
ಎತ್ತರದ ಕಟ್ಟಡದಿಂದ ಅಥವಾ ಬಂಡೆಯಿಂದ ಬೀಳುತ್ತಿರುವ ಅನುಭವ ಕನಸಿನಲ್ಲಿ ಉಂಟಾಗುತ್ತದೆ. ನಮ್ಮಲ್ಲಿ ಸುಪ್ತವಾಗಿರುವ ಆತಂಕವೇ ಇಂತಹ ಕನಸುಗಳಿಗೆ ಕಾರಣ. ಯಾವುದೋ ವಿಷಯದಲ್ಲಿ ಸೋಲುತ್ತಿದ್ದೇವೆ ಅಥವಾ ಕೆಲವೊಂದು ಬೆಳವಣಿಗೆಗಳು ನಮ್ಮ ಕೈ ಮೀರಿ ಬೆಳೆಯುತ್ತಿದೆ ಎಂಬ ಭಾವನೆಯೆ ಇವೆಲ್ಲಕ್ಕೆ ಕಾರಣ.


3. ನಗ್ನತೆಯ ಅನುಭವ
ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ದೇಹವನ್ನು ಸರಿಯಾಗಿ ಮುಚ್ಚಿಕೊಳ್ಳಲಾಗದೇ ಮುಜುಗರವನ್ನು ಅನುಭವಿಸುತ್ತಿದ್ದೇವೆ ಎನ್ನುವ ಭಾವನೆ ಮನಸ್ಸಿನೊಳಗೆ ಕಾಡುತ್ತಿರುತ್ತದೆ. ಹಾಗಾಗಿ ಕನಸಿನಲ್ಲಿ ನಗ್ನವಾದಂತಹ ಅನುಭವಗಳಾಗುತ್ತವೆ. ಇದು ಭಾವನೆಗಳ ಒತ್ತಡ ಮತ್ತು ಮಾನಸಿಕ ದುರ್ಬಲತೆಯನ್ನು ಕೂಡ ಸೂಚಿಸುತ್ತದೆ. ನೀವು ನಂಬದ ಯಾರನ್ನೋ ಬಹಿರಂಗ ಪಡಿಸಲು ಇಚ್ಛಿಸುತ್ತಿದ್ದರೆ ಅಥವಾ ಏನನ್ನೋ ಮರೆಮಾಚಲು ಪ್ರಯತ್ನಿಸುತ್ತಿದ್ದರೆ ಕೂಡ ಕನಸಿನಲ್ಲಿ ನಗ್ನತೆಯ ಅನುಭವವಾಗುತ್ತದೆ.


4. ನೀರು
ನೀರು ಸುಪ್ತಮನಸ್ಸಿಗೆ ಹಿಡಿದಂತಹ ಕನ್ನಡಿ. ನೀರಿನ ಗುಣಮಟ್ಟ ಭಾವನೆಗಳ ಪರಿಸ್ಥಿತಿಯನ್ನು ವಿವರಿಸುತ್ತದೆ. ಸ್ಫಟಿಕ ಸ್ಪಷ್ಟ, ಶುದ್ಧ ಕಲಬೆರಕೆ ಶಾಂತತೆಯು ಭಾವನೆಗಳ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಸೂಚಿಸುತ್ತದೆ.


5. ಚಲನೆ ಸಾಧ್ಯವಿಲ್ಲದ ನಡಿಗೆ
ನೀವು ಚಲಿಸಲು ಪ್ರಯತ್ನಿಸುತ್ತಿರುತ್ತೀರಿ ನಡೆದಂತಹ ಅನುಭವ ಕೂಡ ಆಗುತ್ತದೆ. ಆದರೆ ಕಾಲುಗಳು ಚಲಿಸುತ್ತಿರುವುದಿಲ್ಲ, ಎಲ್ಲಿಗೂ ಹೋಗುತ್ತಿರುವುದಿಲ್ಲ. ಅಂದರೆ ಟ್ರೆಡ್ ಮಿಲ್ ನಲ್ಲಿ ನಡೆದಂತಹ ಅನುಭವ. ಕೆಲವೊಮ್ಮೆ ನೀವು ಕನಸುಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ ಕೂಡ ಇಂತಹ ಅನುಭವವಾಗುತ್ತದೆ. ನೀವು ಬೇಗ ಬೇಗ ಹೆಚ್ಚಿನ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದೀರಿ, ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೀರಿ ಆದರೆ ಅದು ಸಾಧ್ಯವಿಲ್ಲ . ಹಾಗಾಗಿ ನಿಜ ಜೀವನದಲ್ಲೂ ಓಡುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ.


6. ಹಲ್ಲುಗಳನ್ನು ಕಳೆದುಕೊಂಡಂತೆ
ಹಲ್ಲು ನಮ್ಮ ಶಕ್ತಿ, ಬುದ್ಧಿಶಕ್ತಿ ಮತ್ತು ಸಂವಹನ ಸಾಮಥ್ರ್ಯದೊಂದಿಗೆ ವ್ಯಾಪಕವಾದ ಸಂಬಂಧಹೊಂದಿದೆ. ಸಂವೇದನೆ ಮತ್ತು ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದಾಗ ಇಂತಹ ಒಂದು ಕನಸುಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.


7. ಪರೀಕ್ಷೆ
ಪರೀಕ್ಷೆಯ ಅನುಭವಗಳು ಅನೇಕ ¸ಲ ನಮ್ಮನ್ನು ಕನಸಿನಲ್ಲೂ ಕಾಡುತ್ತಿರುತ್ತದೆÀ. ಕೆಲವರಿಗೆ ತಾವು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ತಲುಪಲಾಗದಂತೆ, ಪರೀಕ್ಷೆಯನ್ನು ಸರಿಯಾಗಿ ಬರೆಯಲಾಗದಂತೆ ಕನಸುಗಳು ಬೀಳುತ್ತಿರುತ್ತವೆ. ಕೆಲವರಂತು ಪೆನ್ನನ್ನು ಮರೆತುಹೋದಂತೆ ಅನೇಕ ಸಾರಿ ಕನಸುಗಳು ಬೀಳುತ್ತಿರುತ್ತವೆ ಎಂದು ಹೇಳಿದ್ದಾರೆ. ಇದರರ್ಥ ನೀವು ನಿಜಜೀವನದಲ್ಲಿ ಪದೇ ಪದೆ ಪರೀಕ್ಷೆಗೆ ಒಳಗಾಗುತ್ತಿದ್ದೀರಿ ಎಂಬ ಭಾವನೆ ನಿಮ್ಮಲ್ಲಿದ್ದರೆ ಅಂತಹ ಕನಸುಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ಪ್ರದರ್ಶನಗಳು ಅಥವಾ ಕೆಲಸದಬಗ್ಗೆ ನರ್ವಸ್ ಆಗಿದ್ದಾಗ ಇಂತಹ ಕನಸುಗಳು ಕಾಣಿಸುಕೊಳ್ಳುತ್ತವೆ.


8. ವಾಹನ
ವಾಹನ ಅಥವಾ ರಸ್ತೆಯ ಕನಸು ನಿಜಜೀವನದಲ್ಲಿ ನಾವು ಆರಿಸಿಕೊಂಡಿರುವ ಮಾರ್ಗವನ್ನು ಮತ್ತು ನಾವು ನಡೆಯುತ್ತಿರುವ ದಾರಿಯಮೇಲೆ ನಮಗಿರುವ ನಿಯಂತ್ರಣವನ್ನು ಸೂಚಿಸುತ್ತದೆ. ಕಾರು, ರೈಲು ವಿಮಾನಗಳು ನಿಮ್ಮ ಆಯ್ಕೆಯ ಬಗ್ಗೆ ನಿಮಗಿರುವ ಸ್ಪಷ್ಟತೆ ಮತ್ತು ಜ್ಞಾನ ಮತ್ತು ಅದನ್ನು ನಿಭಾಯಿಸುವ ಶಕ್ತಿಯನ್ನು ಸೂಚಿಸುತ್ತವೆ.


9.ಪಾರ್ಶ್ವವಾಯು
ನಿದ್ರೆಯಲ್ಲಿ ನಮ್ಮ ಯಾವುದಾದರೂ ಅಂಗ ನಿಷ್ಕ್ರೀಯವಾದಂತೆ ಅನುಭವವಾದರೆ ಅದು ಬರೀ ಕನಸಲ್ಲ. ನಿಜವಾಗಿಯೂ ನಮ್ಮದೇಹವು ನಿದ್ರಾವಸ್ಥೆಯಲ್ಲಿ ಕೆಲಕ್ಷಣಗಳ ಕಾಲ ಪಾಶ್ರ್ವವಾಯುವಿಗೆ ಒಳಗಾಗಿರುತ್ತದೆ…! ಸುಪ್ತ ಮನಸ್ಸು ಮಾತ್ರ ಕಾರ್ಯನಿರ್ವಹಿಸುತ್ತಿರುತ್ತದೆ. ಕನಸಿನಲ್ಲಿ ನಡೆದುದಕ್ಕೆ ದೇಹ ಪ್ರತಿಕ್ರಿಯಿಸಬಾರದೆಂದು ಎಚ್ಚರಿಕೆಯಾಗಿ ಈ ರೀತಿಯ ವ್ಯವಸ್ಥೆ ಮಾನವನ ಮೆದುಳಿನಲ್ಲಿದೆ.

10. ಮರಣ
ಪ್ರೀತಿ ಪಾತ್ರರು ಮರಣ ಹೊಂದಿದಂತೆ ಬಹುತೇಕರಿಗೆ ಆಗಾಗ ಕನಸು ಬೀಳುತ್ತಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಭೀತಿಯನ್ನು ಹುಟ್ಟಿಸುವಂತಹ ಕನಸಾಗಿದೆ. ಸಾವಿನ ಬಗ್ಗೆ ಎಲ್ಲರಲ್ಲೂ ನಕಾರಾತ್ಮಕ ಭಾವನೆಯಿದೆ. ಆದರೆ ಸಾವಿನ ಕನಸು ನೀವು ಹೊಸದೇನಕ್ಕೊ ಸಿದ್ಧರಾಗುತ್ತಿದ್ದೀರಿ.. ಹೊಸದಾದ ಚಟುವಟಿಕೆಗೆ ಭಾವನೆಗೆ ನಿಮ್ಮ ಜೀವನ ಮತ್ತು ಅಂತರಂಗದಲ್ಲಿ ಅವಕಾಶ ಮಾಡಿಕೊಡುತ್ತಿದ್ದೀರಿ ಎಂಬುದು ಮನಶಾಸ್ತ್ರಜ್ಞರ ಅಭಿಪ್ರಾಯ..


11.ಹಾರುವುದು
ಇದು ನೀವು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಿರಿ ಎಂದು ಸೂಚಿಸುತ್ತದೆ. ನಿಮ್ಮ ಬದುಕು ಸಾಗುತ್ತಿರುವ ಹಾದಿಯಿಂದಾಗಿ, ಕಾರ್ಯಗಳಲ್ಲಿನ ಯಶಸ್ಸಿನಿಂದಾಗಿ ನಿಮಗೆ ಹೆಮ್ಮೆಯಿದೆ. ನೀವು ಇತರರಿಗಿಂತ ನಾನು ಒಳ್ಳೆಯ ಭಾವನೆಗಳನ್ನು ಹೊಂದಿದ್ದಾಗ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ.


12. ದೆವ್ವ ಬೂತಗಳು
ನಿಜ ಜೀವನದಲ್ಲಿ ಯಾರಿಂದಲಾದರೂ ದಬ್ಬಾಳಿಕೆಯನ್ನು ಎದುರಿಸುತ್ತಿದ್ದರೆ ಅಂತಹ ವ್ಯಕ್ತಿಗಳಿಗೆ ಈ ಕನಸು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಯಾರಾದರೂ ನಿಮ್ಮ ಮೇಲೆ ಆಧಿಕಾರವನ್ನು ಸ್ಥಾಪಿಸುತ್ತಿದ್ದಾರೆ, ಒತ್ತಡವನ್ನು ಹೇರುತ್ತಿದ್ದಾರೆ ಎಂಬ ಭಾವನೆ ಇದ್ದಾಗ ಕೂಡ ಈ ಪದೆ ಪದೆ ಕನಸಿನಲ್ಲಿ ದೆವ್ವ ಭೂತಗಳ ದರ್ಶನವಾಗುತ್ತದೆ.


13. ಕೂದಲು
ನಿಜ ಜೀವನದಲ್ಲಿ ಕೂದಲನ್ನು ಕಳೆದು ಕೊಳ್ಳುವಿಕೆಗೂ ಕನಸಿನಲ್ಲಿ ಕೂದಲನ್ನು ಕಳೆದುಕೊಳ್ಳುವಿಕೆಗೂ ತುಂಬ ವ್ಯತ್ಯಾಸವಿದೆ. ಕೂದಲಿಗೂ ಲೈಂಗಿಕ ಆಸಕ್ತಿಗೂ ಬಲವಾದ ಸಂಬಂಧವಿದೆಯಂತೆ. ಕನಸಿನಲ್ಲಿ ಕಾಣುವ ಒತ್ತೊತ್ತಾದ ಕೂದಲುಗಳು ತೀವ್ರವಾದ ಲೈಂಗಿಕ ಆಸಕ್ತಿಯನ್ನು ಹಾಗು ಕೂದಲುದುರುವಿಕೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ.


14. ಕೊಲೆ
ಕನಸಿನಲ್ಲಿ ಕೊಲೆಯ ದೃಶ್ಯ ಎಂತಹ ಕಲ್ಲು ಗುಂಡಿಗೆಯವರನ್ನು ಬೆಚ್ಚಿಬೀಳಿಸುತ್ತದೆ. ಅದರಲ್ಲೂ ತಮ್ಮ ಕೈಯಾರೆ ಕೊಲೆಗೈದಂತೆ ಕನಸು ಬಿದ್ದರೆ ವ್ಯಕ್ತಿಯ ನಿದ್ರೇನೆ ಹಾರಿಹೋಗುತ್ತೆ. ಇದು ನೀವು ಜೀವನದಲ್ಲಿ ವ್ಯಕ್ತಿತ್ವದಲ್ಲಿನ ಕೆಲವು ಅಂಶಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಿರಿ ಎಂದು ಸೂಚಿಸುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಅಥವಾ ಕೆಲವು ವರ್ತನೆಗಳನ್ನು ಬದಲಾಯಿಸಿ ಕೊಳ್ಳುತ್ತಿದ್ದೀರಿ ಎಂದು ಸೂಚಿಸುತ್ತದೆ.


15. ಪಂಜರದಲ್ಲಿ ಸಿಲುಕಿದಂತೆ ಬಂಧಿಯಾದಂತೆ
ಇಂತಹ ಅನುಭವ ಬಹುತೇಕರಿಗಾಗಿರುತ್ತದೆ. ನಿಮ್ಮ ಕನಸಿನಲ್ಲಿ ಪಂಜರದಲ್ಲಿ ಸಿಲುಕಿ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿರುವ ಅನುಭವ ಆಗಿರಬಹುದು. ಇದರರ್ಥ ನೀವು ನಿಜ ಜೀವನದಲ್ಲಿ ಕೂಡ ಯಾವುದೋ ಒಂದು ಕೆಟ್ಟ ನಿರ್ಧಾರದಿಂದ, ತಪ್ಪು ಆಯ್ಕೆಗಳಿಂದ ಅಥವಾ ಕಷ್ಟದ ಪರಿಸ್ಥಿತಿಯಂದ ಹೊರಬರಲಾರದೆ ಒದ್ದಾಡುತ್ತಿದ್ದೀರಿ ಎಂದು.

16. ಹಾವುಗಳು
ಕನಸಲ್ಲಿ ಹಾವು ಕಾಣಿಸಿಕೊಳ್ಳೊದು. ತುಂಬಾ ವಿಚಿತ್ರ. ಇದೊಂದು ವಿಚಿತ್ರವಾದ ಕನಸಾಗಿದೆ. ಪೊರೆ ಬಿಡುತ್ತಿರುವ ಹಾವುಗಳು ಕೆಲವೊಮ್ಮೆ ನಿದ್ರೆಯನ್ನೇ ಕೆಡಿಸಿಬಿಡುತ್ತವೆ. ಕೆಲವು ಹಾವುಗಳು ನಾಚಿಕೆ, ತಪ್ಪಿತಸ್ಥ ಭಾವನೆ, ಪಾಪ ಕೃತ್ಯದ ಭಯವನ್ನು ಪ್ರತಿನಿಧಿಸುತ್ತವೆ.

ಇವಿಷ್ಟು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಕನಸುಗಳು. ಇದರ ಹೊರತಾಗಿ ಜನ ಎನೇನೊ ಕನಸು ಕಾಣುತ್ತಿರುತ್ತಾರೆ. ಡ್ರೀಮ್ ಕಮ್ ಟ್ರ್ಯೂ ಅಂತಾರೆ. ಆದರೆ ನಮ್ಮ ಜೀವನದಲ್ಲಿರುವ ವಿಚಾರಗಳೇ ಕನಸುಗಳಾಗಿ ಬರೋದು ಅಂತ ವಿಜ್ಞಾನಿಗಳು ಹೇಳ್ತಾರೆ.

-ಕೃಪೆ : ಸ್ಟೋರಿ ಪಿಕ್

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...