ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇಯಾದ ಅಧಿಪತ್ಯ ಸ್ಥಾಪಿಸಿರುವ ಸ್ಯಾಮ್‌ಸಂಗ್ ಸಂಸ್ಥೆಯು 5G ಪ್ರಪಂಚಕ್ಕೆ ಎರಡು ಹೊಸ ಮೊಬೈಲ್ ಫೋನ್‌ಗಳನ್ನು ಪರಿಚಯಿಸಿದೆ .
ಸ್ಯಾಮ್‌ಸಂಗ್ ಗ್ಯಾಲಕ್ಸಿ A51 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A71 5G ಎಂಬ ಎರಡು 5 G ಸ್ಮಾರ್ಟ್ ಫೋನ್ ಗಳನ್ನು ತಂದಿದೆ . ಈ ಎರಡು ಮಾದರಿಗಳು ಕೂಡ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾಗಳ ವಿನ್ಯಾಸವನ್ನು ಹೊಂದಿವೆ . ಅಲ್ಲದೆ 4500mAh ಬ್ಯಾಟರಿ ಸಹ ಹೊಂದಿದ್ದು ಇದು ಕೂಡ ಈ ಎರಡು ಹೊಸ ಫೋನ್ ಗಳ ವಿಶೇಷತೆ .
ಸ್ಯಾಮ್ಸಂಗ್ ಗ್ಯಾಲಕ್ಸಿ A51 5 G : ಸ್ಯಾಮ್‌ಸಂಗ್ ಗ್ಯಾಲಕ್ಸಿ A51 5 G ಫೋನ್ 6.5 ಇಂಚಿನ ಡಿಸ್‌ಪ್ಲೇ, ಸೂಪರ್ ಅಮೊಲಿಡ್ ಇನ್ಫಿನಿಟಿ ಒ ಡಿಸ್‌ಪ್ಲೇ ಹೊಂದಿದೆ. ಒಕ್ಟಾ ಕೋರ್ ಎಸ್‌ಒಸಿ ಡ್ಯುಯಲ್ 2.2GHz + Hexa 1.8GHz ಪ್ರೊಸೆಸರ್ ಹೊಂದಿದೆ . 6 GB ಮತ್ತು 8 GB RAM ಎಂಬ ಎರಡು ಮಾದರಿ ಹಾಗು 128 GB ಸ್ಟೋರೇಜ್ ಆಯ್ಕೆಯ ಮೂಲಕ ಗ್ರಾಹಕರಿಗೆ ಲಭ್ಯವಾಗಲಿವೆ .
ಮೈಕ್ರೋಎಸ್‌ಡಿ ಸ್ಲಾಟ್ ಮೂಲಕ 1 TBವರೆಗೆ ವಿಸ್ತರಿಸಬಹುದು. ಹಿಂಬದಿಯಲ್ಲಿ 48+12+5+5 ಮೆಗಾಪಿಕ್ಸೆಲ್ ಕ್ಯಾಮರಾ ಇದರಲ್ಲಿದ್ದು, 4500mAh ಬ್ಯಾಟರಿ ಹಾಗೂ 15W ಫಾಸ್ ಚಾರ್ಜ್ ಇದೆ.
ಆಂಡ್ರಾಯ್ಡ್ 10 ಆಧಾರಿತ ಸ್ಯಾಮ್‌ಸಂಗ್ ಒನ್ 2.0 ಓಎಸ್ ಬಲ ಇದಕ್ಕಿದ್ದು ಈ ಫೋನ್ ಬೆಲೆ ಅಂದಾಜು 38,100 ರೂ
ಸ್ಯಾಮ್‌ಸಂಗ್ ಗ್ಯಾಲಕ್ಸಿ A71 5G : ಗ್ಯಾಲಕ್ಸಿ A71 5G ಫೋನ್ 6.7 ಇಂಚಿನ ಫುಲ್ ಎಚ್ ಡಿ ಹಾಗೂ ಇನ್ಫಿನಿಟಿ ಒ ಸೂಪರ್ ಅಮೊಲಿಡ್ ಡಿಸ್‌ಪ್ಲೇ ವ್ಯವಸ್ಥೆ ಇದೆ . ಸ್ನ್ಯಾಪ್‌ಡ್ರ್ಯಾಗನ್ 765G ಎಸ್‌ಒಸಿ ಸಹಿತ ಡ್ಯುಯಲ್ 2.2GHz + Hexa 1.8GHz ಪ್ರೊಸೆಸರ್ ಉಂಟು .
6 GB ಮತ್ತು 8 GB RAM ಎಂಬ ಎರಡು ಮಾದರಿ ಹಾಗು 128 GB ಸ್ಟೋರೇಜ್ ಲಭ್ಯವಿದೆ . ಮೈಕ್ರೋಎಸ್‌ಡಿ ಸ್ಲಾಟ್ ಮೂಲಕ 1 TBವರೆಗೆ ವಿಸ್ತರಿಸಬಹುದು.
ಹಿಂಬದಿಯಲ್ಲಿ 64+12+5+5 ಮೆಗಾಪಿಕ್ಸೆಲ್ ಕ್ಯಾಮರಾ, , 32 ಮೆಗಾಪಿಕ್ಸೆಲ್ ಸೆಲ್ಫಿ ಸೌಲಭ್ಯವಿದೆ .
4500mAh ಬ್ಯಾಟರಿ ಹಾಗೂ 25W ಫಾಸ್ಟ್ ಚಾರ್ಜ್ ಬೆಂಬಲವಿದೆ. ಆಂಡ್ರಾಯ್ಡ್ 10 ಆಧಾರಿತ ಸ್ಯಾಮ್‌ಸಂಗ್ ಒನ್ 2.0 ಓಎಸ್ ಇದ್ದು ಈ ಫೋನ್ ಲೆ ಅಂದಾಜು 45,800 ರೂಪಾಯಿ .
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!