ಇದುವೆ ಭಾರತದ ಮೊಟ್ಟಮೊದಲ “ಪುಸ್ತಕಗಳ ಗ್ರಾಮ” ..!

Date:

 

ಭಾರತದ ಮೊಟ್ಟಮೊದಲ “ಪುಸ್ತಕಗಳ ಗ್ರಾಮ” ..!

ಮಹಾರಾಷ್ಟ್ರದ ಭಿಲಾರ್ ಎನ್ನುವ ಗ್ರಾಮ ಈಗ ದೇಶದ ಎಲ್ಲರ ಜನರ ಸೆಳೆದಿದೆ. ಈ ಊರು ದೇಶದ ಮೊಟ್ಟ ಮೊದಲ ಪುಸ್ತಕ ಗ್ರಾಮ ಅಂತ ಗುರ್ತಿಸಿಕೊಂಡಿದೆ. ಬ್ರಿಟನ್ ವೇಲ್ಸ್ ಪ್ರೇರಣೆಯಾಗಿಟ್ಟುಕೊಂಡು ಭಿಲಾರ್, ದೇಶದ ಮೊತ್ತ ಮೊದಲ ಪುಸ್ತಕಗಳ ಗ್ರಾಮವಾಗಿ ಬೆಳೆದಿದೆ. ಭಿಲಾರ್ ಗ್ರಾಮದಲ್ಲಿ ಓದುಗರಿಗೆ ಉತ್ತೇಜನ ನೀಡಲು ಗ್ರಾಮಸ್ಥರೇ ಸೇರಿ ಒಂದು ಗ್ರಂಥಾಲಯ ತೆರೆದಿದ್ದಾರೆ. ಇದಕ್ಕೆ ಅಲ್ಲಿನ ಸರ್ಕಾರ ಕೂಡ ಸಾಥ್ ನೀಡಿದೆ… ಇಲ್ಲಿ ಮರಾಠಿ ಭಾಷೆಯ ಸುಮಾರು 15000ಕ್ಕೂ ಅಧಿಕ ಪುಸ್ತಕಗಳು ಇಡಲಾಗಿದೆ.

ಭಿಲಾರ್ ಗ್ರಾಮವನ್ನು ಪುಸ್ತಕಗಳ ಗ್ರಾಮವನ್ನಾಗಿ ಮಾಡಲು ಮಹಾರಾಷ್ಟ್ರ ಸರಕಾರ ಕೂಡ ಸಾಕಷ್ಟು ಶ್ರಮವಹಿಸಿದೆ ಅಂತಾನೇ ಹೇಳಬಹುದು. ಮಹಾರಾಷ್ಟ್ರ ಶಿಕ್ಷಣ ಸಚಿವರಾಗಿದ್ದ ವಿನೋದ್ ತವಾಡೆ ಮತ್ತು ಮರಾಠಿ ಭಾಷಾ ವಿಭಾಗ ಸಾಕಷ್ಟು ಕೆಲಸ ಮಾಡಿ ಇಂದು ಭೀಲಾರ್ ಗ್ರಾಮ ದೇಶದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

ಇಲ್ಲಿರೋ ಗ್ರಂಥಾಲಯದಲ್ಲಿ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಡಲಾಗಿದೆ. ದೇಶದ ಸಂಸ್ಕೃತಿ, ನಾಡು ನುಡಿ, ಸಾಹಿತ್ಯ, ಇತಿಹಾಸ, ಕವನ ಸಂಕಲನ, ಸಾಹಿತ್ಯ, ಜೀವನ ಚರಿತ್ರೆ ಸೇರಿದಂತೆ ಎಲ್ಲಾ ವಿಭಾಗಗಳ ಪುಸ್ತಕಗಳು ಇಲ್ಲಿವೆ. ಮಕ್ಕಳಿಗೆ ಕಥೆ ಪುಸ್ತಗಳು, ಸಾಹಿತಿಗಳ ಬುಕ್, ಕಥೆ, ಕಾದಂಬರಿ, ಪ್ರವಾಸಿ ಕಥನ, ಸ್ವಾತಂತ್ರ್ಯ ಹೋರಾಟದಲ್ಲಿ ಮರಾಠಿಗರ ಪಾತ್ರ, ಶಿವಾಜಿ ಮಹಾರಾಜ್ ರಂತಹ ಸಾಧನೆ ಮಾಡಿರುವವರ ಪುಸ್ತಕಗಳು ಇಲ್ಲಿವೆ.

ಈ ಗ್ರಂಥಾಲಯ ಬೆಳಿಗ್ಗೆಯಿಂದ ಸಂಜೆಯವರೆಗೂ ತೆರೆದಿದ್ದು ಯಾರು ಬೇಕಾದ್ರು ಏಷ್ಟು ಹೊತ್ತಾದ್ರೂ ಓದುತ್ತಾ ಕೂರಬಹುದು. ಇ ಲ್ಲಿ ಯಾವುದೇ ರೀತಿಯ ಫೀಸ್ ಆಗಲಿ ಮತ್ತೊಂದು ಆಗಲಿ ಇರೋದಿಲ್ಲ.

ಗ್ರಂಥಾಲಯ ತೆರೆದಾಗಿನಿಂದ ನಿತ್ಯವೂ ನೂರಾರು ಮಂದಿ ಓದುಗರು ಬರ್ತಾರೆ. ತಮಗೆ ಬೇಕಾದ ಪುಸ್ತಕಗಳನ್ನು ಓದುತ್ತಾರೆ. ಓದುಗರಿಗೆ ಅನುಕೂಲವಾಗಲೆಂದು ಕುರ್ಚಿಗಳು, ಟೇಬಲ್ಗಳು ಮತ್ತು ಛತ್ರಿಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇಲ್ಲಿಗೆ ಮಕ್ಕಳು, ವಯಸ್ಸಾದವರು, ಸಾಹಿತಿಗಳು ಬಂದು ಓದುತ್ತಾರೆ. ಅದಕ್ಕಾಗಿ ಮರಾಠಿಯಲ್ಲಿ ಭಿಲಾರ್ ಗ್ರಾಮವನ್ನು “ಪುಸ್ತಕಾಂಚೆ ಗಾಂವ್” ಎಂದು ಕರೆಯಲಾಗುತ್ತೆ. ಅಷ್ಟೇ ಅಲ್ಲದೇ ಪುಸ್ತಕಗಳ ಅಂಗಡಿ ಇದು ಅಂತಲೂ ಖ್ಯಾತಿ ಪಡೆದುಕೊಂಡಿದೆ.

ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಇರುವ ಓದುಗರಿಗೆ ಉಪಯೋಗವಾಗಲೆಂದು ಈ ವ್ಯವಸ್ಥೆ ಮಾಡಿಕೊಡಲಾಗಿದೆ. ಓದುಗರಿಗೆ ಈ ಪುಸ್ತಕಗಳು ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲ ಪುಸ್ತಕಗಳನ್ನು ಜೋಪಾನವಾಗಿ ಇಡಲು ಕೂಡ ವ್ಯವಸ್ಥೆಗಳನ್ನು ಮಾಡಲಾಗಿದೆ” .

ಭಾರತದ ಉಳಿದ ಗ್ರಾಮಗಳಿಗೆ ಹೋಲಿಸಿದರೆ ಭಿಲಾರ್ ಗ್ರಾಮದಲ್ಲಿ ಸ್ವಲ್ಪ ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸವಿದೆ. ಈ ಗ್ರಾಮದಲ್ಲಿ ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸವನ್ನ ಇಟ್ಟುಕೊಂಡಿದ್ದಾರೆ. ಭಿಲಾರ್ ಗ್ರಾಮವನ್ನು ಪುಸ್ತಕಗಳನ್ನು ಗ್ರಾಮವನ್ನಾಗಿಸುವ ಹಿಂದೆ ಮರಾಠಿ ಭಾಷೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಕೂಡ ಇದೆ. ಭವಿಷ್ಯದ ಯೋಚನೆಗಳು ಏನೇ ಇರಬಹುದು. ಆದ್ರೆ ಒಂದು ಇಡೀ ಗ್ರಾಮವನ್ನು ಪುಸ್ತಗಳಿಂದ ಸಿಂಗರಿಸುವುದು ಕಷ್ಟದ ಮಾತೇ ಸರಿ. ಆದ್ರೆ ಭಿಲಾರ್ ಯಾವುದು ಅಸಾಧ್ಯವೋ ಅದನ್ನು ಮಾಡಿ ತೋರಿಸಿದೆ.

 

Share post:

Subscribe

spot_imgspot_img

Popular

More like this
Related

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ.

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ. ದೇವಿಯ ಹಿನ್ನಲೆ ಕೂಷ್ಮಾಂಡಾ ದೇವಿಯೇ...

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...