ಮೋಸಮಾಡಿದ ಹುಡುಗಿಗೇ ಕೆಲಸ ಕೊಟ್ಟು, ಮದುವೆಯೂ ಆದವನ ಸ್ಟೋರಿ..!

0
1981

ಮೋಸಮಾಡಿದ ಹುಡುಗಿಗೇ ಕೆಲಸ ಕೊಟ್ಟು, ಮದುವೆಯೂ ಆದವನ ಸ್ಟೋರಿ..!

“ದಿವ್ಯ” ಮೊನ್ನೆ ಫೋನ್ ಮಾಡಿದಾಗ ಆಕಾಶ್ ತುಂಬಾ ಬ್ಯುಸಿ ಆಗಿದ್ದ..! ಪದೇ ಪದೇ ಫೋನ್ ಮಾಡಿದರೂ ಆಕಾಶ್ ಫೋನ್ ರಿಸೀವ್ ಮಾಡಲ್ಲ..! ದಿವ್ಯ ಮೆಸೇಜ್ ಹಾಕ್ತಾಳೆ “ಯಾಕೋ ಸಿಕ್ಕಾಪಟ್ಟೆ ದೊಡ್ಡವನಾಗಿದ್ದೀಯಾ..? ನಿನಗೆ ತುಂಬಾ ಕೊಬ್ಬು ಕಣೋ..” ಅಂತ..! ಅದನ್ನೂ ಕೂಡ ಆಕಾಶ್ ನೋಡಲ್ಲ…! ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಕಾಲ್ ಮಾಡಿದಾಗ “ಆಕಾಶ್ ಸರ್ ಬ್ಯುಸಿ ಇದ್ದಾರೆ.., ಅವರಿಗೆ ಮತ್ತೆ ಹೇಳ್ತೀನಿ, ನೀವು ಯಾರು ಮೇಡಂ ಅಂತ ಆಕಾಶ್ ನ ಪರ್ಸನಲ್ ಸೆಕೆರೇಟ್ರೀ “ಅನುಷಾ” ಹೇಳ್ತಾಳೆ..! ಆಕಾಶ್ ನ ಮೊಬೈಲ್ ಗೆ ಫೋನ್ ಮಾಡಿದ್ರೆ ಅವನ ಬದಲು ಒಂದು ಹುಡುಗಿ ಮಾತನಾಡಿದ್ಲಲ್ಲಾ ಅಂತ ದಿವ್ಯ ತುಂಬಾ ತಲೆಕೆಡಿಸಿಕೊಳ್ತಾಳೆ..! ನೋ, ಥ್ಯಾಂಕ್ಸ್ ನಾನೇ ಬೇಕಾದ್ರೆ ಅವನಿಗೆ ಮತ್ತೆ ಕಾಲ್ ಮಾಡ್ತೀನಿ, ನೀವು ಹೇಳೋ ಅಗತ್ಯವಿಲ್ಲ ಅಂತ ಕೋಪದಿಂದ ಕಾಲ್ ಕಟ್ ಮಾಡಿದ್ಲು..! ಬಟ್ , ಇಲ್ಲಿ ಪಿಎ ಅನುಷಾಳಿಗೆ ಆಕೆ ಯಾರು? ಅವಳೇಕೆ ಸಿಟ್ಟು ಮಾಡಿಕೊಂಡ್ಲು ಅಂತ ತಲೆಬುಡ ಅರ್ಥ ಆಗಲ್ಲ…! ಪಾಪ. ಅರ್ಥ ಆಗೋದಾದ್ರು ಹೆಂಗೆ? ಅಲ್ವಾ..?

ಆಕಾಶ್ ಮೀಟಿಂಗ್ ಮುಗಿಸಿಕೊಂಡು ಮನೆಗೆ ಹೊರಟಾಗ ಅನುಷಾ.. ಸಾರ್, ನಿಮಗೆ ಯಾರೋ ಕಾಲ್ ಮಾಡಿದ್ರು, ಅವರು ಸರಿಯಾಗಿ ಮಾತಾಡ್ಲಿಲ್ಲ..! ಹೀಗೊಂದು ಮೆಸೇಜ್ ಕೂಡ ಮಾಡಿದ್ದಾರೆ ನೋಡಿ ಅಂತ ತೋರಿಸ್ತಾಳೆ..! ಆಕಾಶ್ ತುಂಬಾ ಸುಸ್ತಾಗಿದ್ದ, ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಅನುಷಾ..! ಸಿಂಪ್ಲಿ ಇಗ್ನೋರ್ ಇಟ್..! ಡೋಂಟ್ ಬಾದರ್ ಅಬೌಟ್ ಸಚ್ ತಿಂಗ್ಸ್..,ನಿಮಗೆ ಯಾರು ಏನು ಅಂತ ಅವರ ಪರಿಚಯ ಮಾಡಿಕೊಟ್ರೆ ಮಾತ್ರ ನನಗೆ ಹೇಳಿ..? ಯಾರ್ಯಾರೋ ಕೆಲಸಕ್ಕೆ ಬಾರದ ಫೋನ್ ಮಾಡಿದ್ರೆ ಅದನ್ನೆಲ್ಲಾ ಹೇಳೋದು ಬೇಡ…! ಅಂತ ಕಡ್ಡಿ ಮುರಿದಂಗೆ ಹೇಳ್ತಾನೆ..! ಆಮೇಲೆ, ಕಾರ್ ಡೋರ್ ಓಪನ್ ಮಾಡ್ತಾ.. ಸರಿ, ಬನ್ನಿ, ಮನೆಗೆ ಹೋಗೋಣ, ಅಮ್ಮಾ ನಿಮ್ಮನ್ನೂ ಕರ್ಕೊಂಡು ಬರಲಿಕ್ಕೆ ಹೇಳಿದ್ದಾರೆ ಎಂದು ಅನುಷಾಗೆ ಹೇಳ್ತಾನೆ…! ಬಾಸ್ ಹೇಳಿದ ಮೇಲೆ ಇಲ್ಲ ಅಂತ ಹೇಳಲಿಕ್ಕೆ ಆಗಲ್ವಲ್ಲಾ..? ಅನುಷಾ ಆಕಾಶ್ ಜೊತೆ ಅವನ ಮನೆಗೆ ಅವನ ಕಾರ್ ನಲ್ಲೇ ಹೋಗ್ತಾಳೆ..!

ಇನ್ನೇನು ಮನೆ ಮೆಟ್ಟಿಲು ಹತ್ತಬೇಕು ಅಷ್ಟರಲ್ಲಿ ಅದೇ ದಿವ್ಯಾಳ ಫೋನ್ ಬರುತ್ತೆ..! ಅನುಷಾ ಪಿಕ್ ಮಾಡಿ, “ಹೇಳಿ ಮೇಡಂ ಅಂತಾಳೆ…! ಈಗ್ಲಾದ್ರೂ ಆಕಾಶ್ ಗೆ ಫೋನ್ ಕೊಡ್ತೀಯಾ ತಾಯಿ ಅಂತ ಜೋರ್ ಮಾಡ್ತಾಳೆ ದಿವ್ಯ! ಸಾರ್, ಆಗ ಫೋನ್ ಮಾಡಿದವ್ರೇ ಮತ್ತೆ ಫೋನ್ ಮಾಡಿದ್ದಾರೆ ತಗೋಳಿ ಅಂತ ಅನುಷಾ ಫೋನ್ ಆಕಾಶ್ ಗೆ ಫೋನ್ ಕೊಡ್ತಾಳೆ..! ಹಲೋ, ಯಾರು.? ಅಂತ ಕೇಳ್ತಾನೆ ಆಕಾಶ್..! ಓಹೋ.. ಬೇರೆ ಯಾರೋ ಹುಡುಗಿ ಸಿಕ್ಕಿದ್ದಾಳೆ…? ನಮ್ ನಂಬರ್ರೇ ಡಿಲೀಟ್ ಆಗಿದೆ ಅಲ್ವಾ..? ಇರ್ಲಿ, ನಾನು ದಿವ್ಯ..! ಒಂದ್ ಕಾಲದಲ್ಲಿ ನಿನ್ನ ಬೆಸ್ಟ್ ಫ್ರೆಂಡ್..! ನೆನಪಾಯ್ತಾ ಅಂತ ಕೋಪದಿಂದಲೇ ಕೇಳ್ತಾಳೆ..!
ಓಹೋ.. ನೀನಾ..? ಏನ್ ಹೇಳ್? ನೆನಪಿರಲಿಕ್ಕೆ ಮರ್ತಿದ್ರೆ ತಾನೆ..? ಅಂತಾನೆ..! “ಯಾರೋ ಅವಳು ನಿನಗೆ ಫೋನ್ ಮಾಡಿದ್ರೆ ರಿಸೀವ್ ಮಾಡೋಳು..? ಅಂತ ಸಿಟ್ಟಲ್ಲೇ.. ಏರು ದನಿಯಲ್ಲಿ ಕೇಳ್ತಾಳೆ..! “ಇವಳಾ, ಅನುಷಾ ಕಣೇ..! ನಮ್ ಕ್ಲಾಸ್ ಮೇಟ್ ಅನುಷಾ ಕಣೇ..! ಅಂತ ಹೇಳ್ತಾನೆ..! ಅದಕ್ಕೆ “ಓಹೋ ಈಗ ಇವಳಾ ನಿಂಗೆ ಅಂತ ವ್ಯಂಗ್ಯವಾಗಿ ಕೇಳ್ತಾಳೆ ದಿವ್ಯ..! “ಬಾಯಿಗೆ ಬಂದಹಾಗೆ ಮಾತಾಡ್ಬೇಡ.. ಅವಳು ಈಗ ನನಗೆ ಫ್ರೆಂಡ್ ಮಾತ್ರ..! ನೀನ್ ಅನ್ಕೊಂಡಿರೋ ಹಾಗೇ ಏನೂ ಇಲ್ಲ..! “ಫ್ರೆಂಡ್ ಆದ್ರೆ ಫೋನ್ ಯಾಕಪ್ಪ ಅವ್ಳು ಕೈಗೆ ಕೊಡಬೇಕು..? ಆಗ ನಾನು ನಿನ್ನ ಜೊತೆ ಕ್ಲೋಸ್ ಇರುವಾಗ, ಫೋನ್ ಮುಟ್ಟಿದ್ರೇ ಕೂಗಾಡ್ತಾ ಇದ್ದೀ..? ಎಂದು ಮತ್ತೆ ವ್ಯಂಗ್ಯವಾಗಿ ಹೇಳ್ತಾಳೆ ದಿವ್ಯ..! “ಅವತ್ತೇ ಬೇರೆ ಇವತ್ತೇ ಬೇರೆ..? ನಿನ್ನ ಜೊತೆ ಬೇಡದ ಮಾತಾಡೋಕೆ ನನಗೀಗ ಟೈಮ್ ಇಲ್ಲ..! ಗುಡ್ ಬೈ ಅಂತ ಫೋನ್ ಕಟ್ ಮಾಡ್ತಾನೆ..!
ಊಟ ಮಾಡಿ ಮನೆಗೆ ಹೊರಟ ಅನುಷಾಳಿಗೆ ಕಾರ್ ಕೀ ಕೊಟ್ಟು.., ನೀನು ಮನೆಗೆ ನನ್ನ ಕಾರ್ ತಗೊಂಡು ಹೋಗು, ನಾಳೆ ಡ್ರೈವರ್ ಹೇಗೂ ಬರಲ್ಲ..! ಆಫೀಸ್ ಗೆ ನಾನು ಬೈಕ್ ನಲ್ಲೇ ಬರ್ತೀನಿ..! ನೀನು ಕಾರಲ್ಲಿ ಬಾ ಅಂತ ಹೇಳ್ತಾನೆ ಆಕಾಶ್..! “ಬಾಸ್ ನೀವು ಬೈಕ್ ನಲ್ಲಿ, ನಾನು ಕಾರ್ ನಲ್ಲಾ..? ಬೇಡ.. ಈಗ ನಾನು ಆಟೊ ಮಾಡ್ಕೊಂಡು ಹೋಗ್ತೀನಿ..! ಅಂತಾಳೆ ಅನುಷಾ. “ನಿನಗೆ ನಾನು ಬಾಸ್ ಆಫೀಸಲ್ಲಿ, ಮನೆಯಲ್ಲಿ, ಹೊರಗಡೆ ಫ್ರೆಂಡ್..! ಓಕೆ, ಅಲ್ಲಾ ಅನುಷಾ, ನನ್ನ ಜೊತೆಯಲ್ಲೇ ಓದಿದವಳು ನೀನು..! ಕೆಲಸ ಹುಡುಕುತ್ತಿದ್ದೀಯಾ ಅಂತ ಗೊತ್ತಾಯ್ತು, ಸೋ ನನಗೂ ಒಂದೊಳ್ಳೆ ಸೆಕ್ರೇಟ್ರೀ ಬೇಕಿತ್ತು.. ನಿನ್ನ ತಗೊಂಡೆ..ಅಷ್ಟೇ.! ಇಷ್ಟೆಲ್ಲಾ ಗೌರವ ಕೊಡುವುದಾದ್ರೆ ನೀ ನನ್ನ ಜೊತೆ ಕೆಲಸ ಮಾಡೋದು ಬೇಡ..! ನಾನೇ ಬೇಕಾದ್ರೆ ಬೇರೆ ಕಡೆ ಕೆಲಸ ಕೊಡೊಸ್ತೀನೆಂದು ಫ್ರೆಂಡ್ಲೀ ಆಗಿ ಆವಾಜ್ ಹಾಕಿದ..! ಸರಿ, ಅಂತ ನಗುಬೀರಿ, ಆಕಾಶ್ ಅಮ್ಮನ ಕಾಲಿಗೆ ನಮಸ್ಕರಿಸಿ ಹೋದಳು ಅನುಷಾ..!
ಮನೆಗೆ ಹೋದವಳೇ ದಿವ್ಯಳಿಗೆ ಕಾಲ್ ಮಾಡ್ತಾಳೆ..! ದಿವ್ಯ ಸಿಡಿಸಿಡಿದು ರೇಗಾಡಿದ್ರೂ ತಾಳ್ಮೆಯಿಂದ “ದಿವ್ಯಾ ನೀನು ತಪ್ಪು ತಿಳಿಯ ಬೇಡ..! ಆಕಾಶ್ ಗೂ ನನಗೂ ನೀ ಅಂದುಕೊಂಡ ಸಂಬಂಧವಿಲ್ಲ..! ಆಕಾಶ್ ಇವತ್ತು ನನಗೆ ಬಾಸ್, ಇಂದು ಅವನು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾನೆ..! ಹತ್ತು ಹಲವು ಬ್ಯುಸಿನೆಸ್ ಗಳಲ್ಲಿ ತೊಡಗಿಕೊಂಡಿದ್ದಾನೆ..! ನಾನೀಗ ಅವನ ಪರ್ಸನಲ್ ಸೆಕ್ರೇಟರಿ..! ಆಕಾಶ್ ಮೊದಲಿನಂತಿಲ್ಲ, ಇವತ್ತು ಅವನು ತುಂಬಾ ಚೇಂಜ್ ಆಗಿದ್ದಾನೆ..! ಆದ್ರೆ ಅವನಲ್ಲಿ ಒಳ್ಳೆಯತನ ಒಂದಿ‍ಷ್ಟೂ ಕಡಿಮೆ ಆಗಿಲ್ಲ ಕಣೇ..! ಅದಕ್ಕೆ ಅವನು ನನ್ನ ಟ್ರೀಟ್ ಮಾಡೋ ರೀತಿಯೇ ಸಾಕ್ಷಿ..! ಅವನು ತುಂಬಾ ಒಳ್ಳೆಯ ಹುಡುಗ ಆಗ ಯಾರ್ ಯಾರಿದ್ದೋ ಮಾತು ಕಟ್ಕೊಂಡು ನೀನು ಅವನಿಗೆ ಅವಮಾನ ಮಾಡಿ ಮಾತು ಬಿಟ್ಟೆ..! ಅವನ ಜೊತೆ ಇದ್ದಿದ್ರೆ ನಿನ್ನ ಲೈಫೇ ಚೇಂಜ್ ಆಗಿರ್ತಾ ಇತ್ತು..! ಮೊನ್ನೆಯಷ್ಟೇ ನಿನ್ನನ್ನು ನೆನೆದು ಕಣ್ಣಲ್ಲಿ ನೀರಾಕಿದ್ದ, “ದಿವ್ಯಾಗೆ ನಾನೇನೂ ಮಾಡಿಲ್ಲ, ಆದ್ರೆ ಬೇರೆಯವರ ಮಾತನ್ನು ಕೇಳಿ ನನ್ನನ್ನು ನೆಗ್ಲೇಟ್ ಮಾಡಿದ್ಲು.! ಮನೆಯಲ್ಲಿ ಬೈಸಿದ್ಲು, ಹುಡುಗರತ್ರ ಹೊಡೆಸಿದ್ಲು…ಅಂತ ತುಂಬಾ ನೊಂದು ಮಾತಾಡಿದ್ದ”! ನೋಡು, ದಿವ್ಯ ನೀನು ಅಷ್ಟೆಲ್ಲಾ ಮಾಡಿದ್ರು ಇವತ್ತು ಕೂಡ ನಿನ್ನ ಜೊತೆ ಚೆನ್ನಾಗಿಯೇ ಮಾತನಾಡಿದ್ದ, ಆದ್ರೆ ನೀನೇ ಏನೇನೋ ಮಾತಾಡಿ, ಅವನು ರೇಗೋಥರ ಮಾಡ್ದೀ..! ಅವನಿಗೆ ನೀನು ಹೊಡೆಸಿದಾಗಲೇ ನಿನ್ನ ನಂಬರ್ ಡಿಲೀಟ್ ಮಾಡ್ದ..! ಆಮೇಲೆ ಯಾರ ಬಳಿಯೂ ನಿನ್ನ ನಂಬರ್ ಕೇಳಿಲ್ಲ..! ಬಟ್, ಕ್ಲೋಸ್ ಫ್ರೆಂಡ್ಸ್ ಹತ್ರವೆಲ್ಲಾ ದಿವ್ಯಾ ಹೆಂಗಿದ್ದಾಳೆಂದು ಕೇಳ್ತಾನೆ ಇರ್ತಾನೆ”..! ಇವತ್ತು ಅವನ ಬಳಿ ಕಾರಿದೆ, ಬಂಗಲೆಯಿದೆ, ಕೆಲಸಕ್ಕೆ ಜನರಿದ್ದಾರೆ..! ಇಷ್ಟಾದ್ರೂ ತುಂಬಾ ಸಿಂಪಲ್ ಆಗಿಯೇ ಇದ್ದಾನೆ ಕಣೇ..! ಅಂತ ದಿವ್ಯಾಳ ಮನ ಕರಗುವಂತೆ ಅನುಷಾ ಹೇಳ್ತಾಳೆ..!
ಮಾರನೇ ದಿನವೇ ದಿವ್ಯ ಅನುಷಾಳ ಹತ್ತಿರ ಆಫೀಸ್ ಅಡ್ರಸ್ ಕೇಳ್ಕೊಂಡು ಅಲ್ಲಿಗೆ ಬರ್ತಾಳೆ..! ರೆಸ್ಯೂಮ್ ಕೊಡ್ತಾಳೆ..! ಅವಳು ಬಂದಿದ್ದನ್ನ ತಿಳಿದ ಕೂಡಲೇ ಆಕಾಶ್ “ಈಗ ಬಂದಿರೋ ದಿವ್ಯಾ ಅನ್ನೊರಿಗೆ ಅಪಾಯಿಂಟ್ಮೆಂಟ್ ಆರ್ಡರ್ ಕೊಡಿ” ಅಂತ ಆರ್ಡರ್ ಮಾಡಿಯೇ ಬಿಡ್ತಾನೆ..! ರೆಸ್ಯೂಮ್ ಕೊಡಲು ಬಂದ ದಿನವೇ ಆಪಾಯಿಂಟ್ಮೆಂಟ್ ಆರ್ಡರ್ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗ್ತಾಳೆ..! ಆದ್ರೆ ಆಕಾಶ್ ನ ಎದುರು ನಿಂತು ಮಾತಾಡೋಕೆ ಮುಜುಗರ, ಭಯ ಎರಡೂ ಕೂಡ ಆಗ್ತಾ ಇರುತ್ತೆ..! ಆಕಾಶ್ ಅನುಷಾಳನ್ನು ಕರೆದು ಇವತ್ತು ಸಂಜೆ ನಾನು ಬರೋದು ಲೇಟ್ ಆಗುತ್ತೆ..! ನೀನು ಮತ್ತು ದಿವ್ಯಾ ನಮ್ಮ ಮನೆಗೆ ಹೋಗಿ..! ಅಮ್ಮನಿಗೆ ಹೇಳಿರ್ತೀನಿ ಅಂತ ಹೇಳ್ತಾನೆ..! ಆಕಾಶ್ ಹೇಳಿದಂತೆ ದಿವ್ಯಾಳನ್ನು ಕರ್ಕೊಂಡು ಅನುಷಾ ಅವನ ಮನೆಗೆ ಹೋಗ್ತಾಳೆ..! ಆಕಾಶ್ ಅಪ್ಪ, ಅಮ್ಮ ಹಾಗೂ ಅನುಷಾ ಇರುವಾಗಲೇ ದಿವ್ಯಾ ಆಕಾಶನ ಕಾಲಿಗೆ ಬಿದ್ದು ಕ್ಷಮೆ ಕೇಳ್ತಾಳೆ..! ಜೋರಾಗಿ ಅಳ್ತಾಳೆ..! ಆಗ ಅವನು ಏನ್ ಹೇಳ್ತಾನೆ ಗೊತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು “ದಿವ್ಯಾ..ನಾನು ಊರು ಬಿಟ್ಟು ನಿಮ್ಮ ಊರಲ್ಲಿರುವಾಗ ಮನೆಯನ್ನು ಬಿಟ್ಟಿದ್ದೇನೆಂದು ಎಂದೂ ಅನಿಸಿರಲಿಲ್ಲ.., ಅದಕ್ಕೆ ನೀನು, ನಿಮ್ಮ ಮನೆಯವರೇ ಕಾರಣ..! ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ರಿ., ನೀನಂತೂ ನಾನು ಊರಿಗೇ ಹೋಗೋದು ಬೇಡ ಅಂತಿದ್ದೀ..! ಅಷ್ಟೊಂದು ಹಚ್ಚಿಕೊಂಡಿದ್ದೆ..! ಆದ್ರೆ ಆತ ಪ್ರದೀಪ್ ಹೇಳೋ ಮಾತು ಕೇಳಿ ನನ್ನ ಮೇಲೆ ತಪ್ಪು ತಿಳಿದೆಯಲ್ಲಾ..? ಅವನು ಏನ್ ಅಂದ ಹೇಳು? ನಾನು ನಿನ್ನ ಜೊತೆ ಬೇಡದ ರೀತಿಯಲ್ಲೆಲ್ಲಾ ಕಾಲ ಕಳೆದಿದ್ದೇನೆಂದು..? ಅದೂ, ಆವಿಷಯವನ್ನು ನಾನೇ ಅವನ ಬಳಿ ಹೇಳಿದ್ದೆನೆಂದಲ್ಲವೇ..? ಅನ್ನ ತಿಂದ ಮನೆಗೆ ದ್ರೋಹ ಬಗೆಯುವವ ನಾನಲ್ಲ..! ಅಷ್ಟಕ್ಕೂ ನಿನ್ನ ಬಗ್ಗೆ ಅಂತ ಮಾತೆಂದೂ ನಾನು ಹೇಳಿಲ್ಲ.! ನಿನಗೆ ನನ್ನ ಬಗ್ಗೆ ಗೊತ್ತಿದ್ದರೂ ನನ್ನ ದ್ವೇಷಿಸಿದೆ..ನನ್ನ ಅಳುವಿಗೂ ಬೆಲೆ ಕೊಡಲಿಲ್ಲ..! ಇವತ್ತಿಗೂ ಆಣೆ ಮಾಡಿ ಹೇಳ್ತೀನಿ ನಾನೆಂದೂ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿಲ್ಲವೆಂದು ತುಂಬಾ ದುಃಖದಿಂದಲೇ ಹೇಳ್ತಾನೆ..! ಮತ್ತೆ ದಿವ್ಯಾ ಆಕಾಶ್ ಜೊತೆ ಚೆನ್ನಾಗಿದ್ದಾಳೆ..! ದಿವ್ಯಾ ಮಾಡಿದ ಮೋಸಕ್ಕೆ, ಕೊಟ್ಟ ಹಿಂಸೆಗೆ, ಮಾಡಿದ ಅವಮಾನಕ್ಕೆ ಬೇರೆ ಯಾರಾದ್ರೂ ಆಗಿದ್ರೆ ಹತ್ತಿರ ಕೂಡ ಸೇರಿಸಿಕೊಳ್ತಾ ಇರ್ಲಿಲ್ಲ..! ಮುಖ ಕೂಡ ನೋಡ್ತಾ ಇರ್ಲಿಲ್ಲ..! ಬಟ್ ಆಕಾಶ್ ಅವಳ ಪ್ರೀತಿಗೆ ಬೆಲೆಕೊಟ್ಟಿದ್ದ, ಅವಳಂತೇ ನಾನೂ ದ್ವೇಷಿಸಿದ್ದರೆ ಅವಳಿಗೂ ನನಗೂ ವ್ಯತ್ಯಾಸವೆಲ್ಲಿ..? ಅಂತ ಆಕೆಯನ್ನು ಕ್ಷಮಿಸಿದ್ದ ಅಷ್ಟೇ ಅಲ್ಲ ಕೆಲಸವಿಲ್ಲದೇ ಬರಿಗೈಲಿ ಇದ್ದ ದಿವ್ಯಾಳಿಗೆ ಕೆಲಸವನ್ನೂ ಕೊಟ್ಟ..! ಆಕಾಶ್ ಓದು ಮುಗಿಯುತ್ತಲೇ ಕಂಪನಿಯೊಂದರಲ್ಲಿ ಆರೇ ತಿಂಗಳು ಕೆಲಸ ಮಾಡಿದ್ದ, ನಂತರ ಏನೇನೋ ಮಾಡಿ ಸ್ವಂತ ಬ್ಯುಸ್ನೆಸ್ ಸ್ಟಾರ್ಟ್ ಮಾಡಿದ್ದ..! ಒಂದೇ ವರ್ಷದಲ್ಲಿ ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾನೆ..! ಕೈ ಕೊಟ್ಟ ಹುಡುಗಿಯೂ ಕೈ ಹಿಡಿದಿದ್ದಾಳೆ.. .

LEAVE A REPLY

Please enter your comment!
Please enter your name here