“ನಾವೇ ಹುಡುಗೀರ ಹಿಂದೆ ಯಾಕ್ ಹೋಗ್ಬೇಕು. ಹುಡುಗೀರು ನಮ್ ಹಿಂದೆ ಬರೋದಿಲ್ವಾ? ಯಾಕ್ ಬರಲ್ಲ.”
“ಅಲ್ಲ ಕಣೊ, ನೀನೇ ಪ್ರಪೋಸ್ ಮಾಡಿದ್ದ?”
ಇಂಥಾ ಮಾತುಗಳು ಸಹಜವಾಗಿ ಕೇಳಿರ್ತೀರ. ನಮ್ಮ ಸಮಾಜದಲ್ಲಿ ಲವ್ ಸ್ಟೋರಿಗಳಿಗೆ ಏನೂ ಕಮ್ಮಿ ಇಲ್ಲ. ಹಾಗಂತ ಬಹುಪಾಲು ಎಲ್ಲಾ ಪ್ರೇಮಕಥೆಗಳಲ್ಲೂ ಹುಡುಗನೇ ಪ್ರಪೋಸ್ ಮಾಡಿರ್ತಾನೆ. ಹುಡುಗಿ ಮಾಡಿರಲ್ಲ. ಕೆಲವೇ ಕೆಲವೊಮ್ಮೆ ಹುಡುಗಿ ಪ್ರಪೋಸ್ ಮಾಡಿದ್ಳು ಅಂತ ಕೇಳೋಕೆ ವಿಶೇಷವಾಗಿರುತ್ತೆ.
ಅದಿರಲಿ. ಒಂದು ದಿನ ಇಂಥಾ ಸಂದರ್ಭ, ಇಂಥಾ ಪ್ರಶ್ನೆ ನನಗೂ ಬಂತು. ಅವತ್ತು ಭಾನುವಾರ. ಆಕಾಶ್ (ಹೆಸರು ಬದಲಾಯಿಸಲಾಗಿದೆ) ಬಿಗ್ ಬಜಾರ್ ಮೆಟ್ಟಲು ಹತ್ತುತ್ತಾ ಹೀಗೊಂದು ಪ್ರಶ್ನೆ ನನಗೆ ಕೇಳಿದ.
“ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಪ್ರಪೋಸ್ ಮಾಡಲ್ಲ?!”
ಆಕಾಶ್ ಗೆ ಉತ್ತರಿಸುವುದಕ್ಕಾಗಿ ನಾನೂ ಸ್ವಲ್ಪ ಯೋಚಿಸಬೇಕಾಯ್ತು.
ಇದ್ಯಾಕೆ ಹೀಗೆ ಅಂತ ಕಾರಣ ತಿಳಿದುಕೊಳ್ಳಬೇಕಾಯ್ತು.
1) ಹುಡುಗೀರು ತಮಾಷೆ ಮಾಡ್ತಾರೆ!
ಹೌದು. ಹುಡುಗಿನೇ ಪ್ರಪೋಸ್ ಮಾಡಿದ್ಳು ಅಂದ್ರೆ, ಅವ್ಳ ಗೆಳತಿಯರು ತಮಾಷೆ ಮಾಡ್ಬೋದು. ಅವ್ನೇ ಪ್ರಪೋಸ್ ಮಾಡೋದು ಬಿಟ್ಟು, ನಿನ್ನತ್ರ ಮಾಡಿಸ್ಕೊಂಡ್ನ? ಎಂದು ನಗಬಹುದು. ಇದಕ್ಕೆ ಹುಡುಗಿಯರು ಅಂಜುತ್ತಾರೆ. ಮತ್ತು ಇದು ಅವರಿಗೆ ಸರಿ ಕಾಣುವುದಿಲ್ಲ.
2) ನಾಚಿಕೆಯ ಸ್ವಭಾವ..
ಹುಡುಗಿಯರಿಗೆ ನಾಚಿಕೆ ಸ್ವಭಾವ ಸಹಜವಾದುದು. ಅವರಿಗೆ ತಮ್ಮ ಪ್ರೀತಿ ಹೇಳಿಕೊಳ್ಳಲು ಹಿಂಜರಿಕೆ ಉಂಟಾಗಬಹುದು. ಹುಡುಗನೇ ಹೇಳಲಿ ಎಂದು ಕಾಯುತ್ತಿರಬಹುದು.
3) ಹುಡುಗಿಯ ಸಭ್ಯತೆ ಅಥವಾ ಸಂಪ್ರದಾಯದ ಕಾರಣ..
ಹುಡುಗಿಯರು ಹುಡುಗಿಯರಂತೆ ಇರಬೇಕು. ಅಂದರೆ ಹುಡುಗರ ಬಳಿ ತಾವೇ ಹೋಗಿ ಮಾತನಾಡುವುದು ಸರಿಯಲ್ಲ. ಇದೊಂದು ಸಭ್ಯತೆಯ ಲಕ್ಷಣ ಎಂಬ ಕಾರಣಕ್ಕೂ ಹೌದು. ಅಥವಾ ಹುಡುಗಿ ಮೊದಲು ಮಾತನಾಡಿ, ಪ್ರೀತಿ ಹೇಳಿದರೆ ಹುಡುಗರ ನೋಟಕ್ಕೆ ಹುಡುಗಿ ಸರಿ ಇಲ್ಲ ಎಂದೂ ಕಾಣಬಹುದು. ಇದು ಹುಡುಗರ ಅಥವಾ ಸಮಾಜದ ತಪ್ಪು ಕಲ್ಪನೆಯೂ ಆಗಿರಬಹುದು. ಆದರೂ ಜನರು ಹೀಗೆ ತಿಳಿಯುತ್ತಾರೆ.
4) ಹಿಂದೆ ಹಾಗೇ ನಡೆದು ಬಂದಿದೆ..
ಹಿಂದಿನಿಂದಲೂ ಹೆಚ್ಚಾಗಿ ಹುಡುಗನೇ ಹುಡುಗಿ ಕೇಳುವ ಕ್ರಮ. ಹುಡುಗಿಯನ್ನು ಅವರ ಮನೆಯವರು ಕೊಡುವುದು. ಅಂದರೆ ಪಡೆಯುವವನು ಹುಡುಗ. ಹಾಗಾಗಿ ಇದರ ಪ್ರಭಾವದಿಂದಲೂ ಹುಡುಗನೇ ಮೊದಲು ಪ್ರಪೋಸ್ ಮಾಡಬೇಕು ಎಂದು ತಿಳಿಯಬಹುದು.
5) ಹುಡುಗಿಯ ಬಯಕೆ..
ಹುಡುಗನೇ ಪ್ರಪೋಸ್ ಮಾಡಲಿ ಎಂಬುದು ಹುಡುಗಿಯ ಬಯಕೆಯೂ ಆಗಿರಬಹುದು. ಇದಕ್ಕಾಗಿ ಅವಳು ಕಾಯುತ್ತಿರಬಹುದು.
ಇಷ್ಟು ಕಾರಣಗಳನ್ನು ತಿಳಿದುಕೊಂಡೆ. ಅದನ್ನು ಆಕಾಶ್ ಗೂ ಹೇಳಿದೆ. ಅವನು ನಿರಾಳನಾದ. ಹೌದು, ನಾನೇ ಪ್ರಪೋಸ್ ಮಾಡುತ್ತೇನೆ ಎಂದು ಎದ್ದು ಹೋದ. ಅವನೀಗ ಆ ಹುಡುಗಿಯೊಂದಿಗೆ ಚೆನ್ನಾಗಿದ್ದಾನೆ. ಆಗಾಗ ಅವರಿಬ್ಬರೂ ಬಿಗ್ ಬಜಾರ್ ನಲ್ಲಿ ಐಸ್ ಕ್ರೀಮ್ ತಿನ್ನುತ್ತಾ ಸಿಗುತ್ತಾರೆ.
– ನಾಗೇಶ್ ಭಿನ್ನ