ಧೋನಿ ಎಂಬ ಜಗಮೆಚ್ಚಿದ ನಾಯಕನ ಬಗ್ಗೆ ‘ಅನ್ ಟೋಲ್ಡ್ ಸ್ಟೋರಿಯಲ್ಲೂ ಇಲ್ಲದ ವಿಷಯ ಇಲ್ಲಿದೆ…!
ಮಹೇಂದ್ರ ಸಿಂಗ್ ಧೋನಿ…ಟೀಮ್ ಇಂಡಿಯಾ ಕಂಡ ಅದ್ಭುತ ಕ್ರಿಕೆಟಿಗ…ಇಡೀ ವಿಶ್ವ ಕ್ರಿಕಟನ್ನೇ ಆಳಿದ ಶ್ರೇಷ್ಠ ನಾಯಕ..ಭಾರತಕ್ಕೆ ಟಿ20 , ಏಕದಿನ ವಿಶ್ವಕಪ್ ಗಳನ್ನು ಗೆದ್ದುಕೊಟ್ಟ ನಾಯಕ….
ವಿಶ್ವದ ಬೆಸ್ಟ್ ಫಿನಿಶರ್ ಎಂದ ಕೂಡಲೇ ನೆನಪಾಗುವುದು ಇದೇ ನಮ್ಮ ಧೋನಿ…ಗುರಿ ಎಂತಹದ್ದೇ ಇರಲಿ..ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದಾಗ…ಇನ್ನೇನು ಪಂದ್ಯ ಭಾರತದಿಂದ ಕೈ ಜಾರಿಯೇ ಬಿಟ್ಟಿತು ಎಂದು ಹೇಳುವಾಗ ಧೋನಿ ಬ್ಯಾಟ್ ಅಬ್ಬರಿಸುತ್ತಿತ್ತು…ಬಾಕಿ ಬಾಲ್ – ರನ್ ಗಳ ನಡುವೆ ಅಜಗಜಾಂತರ ವ್ಯತ್ಯಾಸ ಇದ್ದರೂ ಅದು ನೋಡು ನೋಡುತ್ತಿದ್ದಂತೆ ಸಮವಾಗಿ ಬಿಡುತ್ತಿತ್ತು…ಕಣ್ಣುಮುಚ್ಚಿ ಬಿಡುವುದರೊಳಗೆ ಪಂದ್ಯದ ಗತಿಯೇ ಬದಲಾಗಿ ಪಂದ್ಯ ಭಾರತದ ತೆಕ್ಕೆಗೆ ಬಂದು ಬಿಡುತ್ತಿತ್ತು…ಧೋನಿ ಎಂಬ ನಾಯಕನ ಬ್ಯಾಟ್ ನ ತಾಕತ್ತು ಅದಾಗಿತ್ತು…ಧೋನಿ ಎಂಬ ಶಕ್ತಿಗೆ ಪರ್ಯಾಯ ಬರಲು ಸಾಧ್ಯವೇ ಇಲ್ಲ ಬಿಡಿ.
ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಅತ್ಯುತ್ತಮ ಆಟವಾಡಿದರೂ ಭಾರತಕ್ಕೆ ಗೆಲುವು ಮರೀಚಿಕೆಯಾಯಿತು. ಸೆಮಿಫೈನಲ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಮಂಡಿಯೂರಿತು..ಪಂದ್ಯದ ಸೋಲಿಗೆ ಬಹುತೇಕರು ಧೋನಿಯನ್ನೇ ಟೀಕಿಸಿದರು..ಆದರೆ ಆ ಸೋಲಿಗೆ ಧೋನಿ ಮಾತ್ರ ಕಾರಣನಾ…BAT ಸ್ಪೆಲಿಂಗ್ ಗೊತ್ತಿಲ್ಲದವರು, ಬ್ಯಾಟ್ ಹಿಡಿಯಲು ಬರದೇ ಇರೋ ಮಹಾನುಭಾವರು ಕೂಡ ಧೋನಿ ಬಗ್ಗೆ ಟೀಕಾಪ್ರಹಾರ ನಡೆಸಿದರು..!
ವಿಶ್ವಕಪ್ ಬಳಿಕ ಧೋನಿಯ ನಿವೃತ್ತಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ…ಆದರೆ ತಾನಿನ್ನೂ ದೇಶದ ಪರ ಆಡುವ ಉತ್ಸಾಹದಲ್ಲಿದ್ದಾರೆ ಧೋನಿ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗದ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, 38ವರ್ಷದ ಧೋನಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ…
ಈ ಎಲ್ಲಾ ಬೆಳವಣಿಗೆ ನೋಡಿದರೆ ಧೋನಿ ನಿವೃತ್ತಿಯ ಕಾಲ ಸನ್ನಿಹಿತವಾಗುತ್ತಿದೆ…!
ಧೋನಿ ಎಂಬ ಅಗಾಧ ಕ್ರಿಕೆಟ್ ಶಕ್ತಿಯ ಬಗ್ಗೆ …ಅವರ ಲೈಫ್ ಸ್ಟೋರಿ ಬಗ್ಗೆ ನೋಡಲೇ ಬೇಕು…ಅವರ ಕುರಿತ ಸಿನಿಮಾ ಅನ್ ಟೋಲ್ಡ್ ಸ್ಟೋರಿಯಲ್ಲೂ ಬಂದಿರದ ಕೆಲವು ಸಂಗತಿಗಳು ಇಲ್ಲಿವೆ..
ಮಹೇಂದ್ರ ಸಿಂಗ್ ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಅಚ್ಚು-ಮೆಚ್ಚು. 2013 ರಲ್ಲಿ ಬೀದಿ ನಾಯಿಗಳನ್ನು ಧೋನಿ ದತ್ತು ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಧೋನಿ ನಾಯಿಗಳೊಂದಿಗೆ ಆಟ ಆಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಧೋನಿ ತಮ್ಮ ನಾಯಿಗಳಿಗೆ ಪ್ರೀತಿಯ ಹೆಸರುಗಳನ್ನು ಇಡುತ್ತಾರೆ. ಸ್ಯಾಮ್ ಎನ್ನುವ ನಾಯಿ ಧೋನಿಯವರ ಮೆಚ್ಚಿನ ಸ್ಥಾನದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಐಸಿಸಿಯ 3 ಪ್ರಮುಖ ಪ್ರಶಸ್ತಿ ಗೆದ್ದ ನಾಯಕ ಯಾರಾದರೂ ಇದ್ದರೆ ಅದು ಮಹೇಂದ್ರ ಸಿಂಗ್ ಧೋನಿ ಮಾತ್ರ. 2007 ರ ಟಿ-20 ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಧೋನಿ ಹೆಸರಿನಲ್ಲಿಯೇ ಇದೆ.
ಐಸಿಸಿಯ 3 ಪ್ರಮುಖ ಪ್ರಶಸ್ತಿ ಗೆದ್ದ ನಾಯಕ ಯಾರಾದರೂ ಇದ್ದರೆ ಅದು ಮಹೇಂದ್ರ ಸಿಂಗ್ ಧೋನಿ ಮಾತ್ರ. 2007 ರ ಟಿ-20 ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಧೋನಿ ಹೆಸರಿನಲ್ಲಿಯೇ ಇದೆ.
ಲೆಫ್ಟಿನೆಂಟ್ ಕರ್ನಲ್ ಧೋನಿ
2011 ನವೆಂಬರ್ ನಲ್ಲಿ ಸೇನೆ ಧೋನಿ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡುತ್ತದೆ. 1983ರ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರಿಗೆ ಮಾತ್ರ ಈ ಗೌರವ ಹಿಂದೆ ಸಿಕ್ಕಿತ್ತು. 2018ರಲ್ಲಿ ಧೋನಿ ಅವರಿಗೆ ಪದ್ಮಭೂಷಣ ಗೌರವ ಸಹ ನೀಡಿ ಗೌರವಿಸಲಾಗಿದೆ. ಈ ವಿಷಯಗಳು ಗೊತ್ತು..ಆದರೆ ಅನ್ ಟೋಲ್ಡ್ ಸ್ಟೋರಿಯಲ್ಲಿಲ್ಲ..ಕಾರಣ ಆ ಸಿನಿಮಾ ಬಂದಿದ್ದು ,2016ರಲ್ಲಿ.
ಎಲ್ಲರೊಂದಿಗೂ ಸ್ನೇಹ ಪರವಾಗಿ ನಡೆದುಕೊಳ್ಳುವ ಧೋನಿಗೆ ಬಾಲಿವುಡ್ ನಟಿ ಬಿಪಾಶಾ ಬಸು ನೆಚ್ಚಿನ ಗೆಳತಿ. ಧೋನಿ ಸಾಕ್ಷಿ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೂಮರ್ ಗಳು ಕೇಳಿ ಬಂದಿದ್ದವು. ಮದುವೆಯಾದ ನಂತರವೂ ಇವರ ಗೆಳೆತನ ಹಾಗೆ ಇದೆ.
ಹಾಲು ಇಷ್ಟ,,ಚಿಕನ್ ಕಷ್ಟ:
ಆಹಾರದ ವಿಷಯಕ್ಕೆ ಬಂದರೆ ಧೋನಿಗೆ ಎಲ್ಲವೂ ಇಷ್ಟ. ಆದರೆ ಚಿಕನ್ ಅಂದ್ರೆ ಸ್ವಲ್ಪ ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಇನ್ನು ಹಾಲು ಕುಡಿಯುವುದರಲ್ಲಿ ಮಹಿ ಮೀರಿಸಿದವರು ಯಾರೂ ಇಲ್ಲ ಬಿಡಿ! ಚಿಕನ್ ಬಟರ್ ಮಸಾಲಾ, ಕಬಾಬ್, ಚಿಕನ್ ಟಿಕ್ಕಾ ಪಿಜ್ಜಾ ಸಹ ಧೋನಿಗೆ ಇಷ್ಟವಾಗುತ್ತಂತೆ.
ಜಾಹೀರಾತು ಮಾರುಕಟ್ಟೆ ಬಾದ್ ಷಾ ಧೋನಿ.
ಶಾರುಖ್ ಖಾನ್ ಬಿಟ್ಟರೆ ಅತಿ ಹೆಚ್ಚು ಜಾಹೀರಾತಿನಲ್ಲಿ ಕಾಣಿಸಿಕೊಂಡ ದಾಖಲೆಯೂ ಧೋನಿ ಬಳಿಯಲ್ಲೇ ಇದೆ. 2015ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಜನ ಸ್ಫೋರ್ಟ್ ಮೆನ್ ಗಳಲ್ಲಿ ಧೋನಿಗೆ 23ನೇ ಸ್ಥಾನ ಇತ್ತು. ಪೆಪ್ಸಿ, ರೀಬಾಕ್ ಸೇರಿದಂತೆ ಅನೇಕ ಕಂಪನಿಗಳ ಬ್ಯ್ರಾಂಡ್ ವ್ಯಾಲ್ಯೂ ಮಹೇಂದ್ರರಿಂದ ಹೆಚ್ಚಿದೆ!
ಧೋನಿ ಸದ್ಯದ ಆಸ್ತಿ 759 ಕೋಟಿ!
ವಿವಿಧ ಜಾಹೀರಾತುಗಳ ಒಪ್ಪಂದ ಹೊರತುಪಡಿಸಿ ಲೆಕ್ಕಹಾಕಿದರೆ ಧೋನಿ ಸದ್ಯದ ಆಸ್ತಿ 111 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 759 ಕೋಟಿ ರೂ. ಗೂ ಅಧಿಕ.