No menu items!
3.1 C
Munich
Thursday, April 30, 2026

ಹ್ಯಾಕರ್ ಉದ್ಯಮಿಯಾದ ಇಂಟ್ರೆಸ್ಟಿಂಗ್ ಸ್ಟೋರಿ..!

Must read

ಶಶಾಂಕ್ ಚೌರೇ. ಇಂದೂರಿನ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಜಸ್ಟ್ 13 ವರ್ಷದ ಹುಡುಗನಾಗಿದ್ದ ದಿನಗಳಲ್ಲೇ ಕಂಪ್ಯೂಟರ್ ಮೇಲೇನೆ ಇವ್ರಿಗೆ ಲವ್ ಆಗಿತ್ತು. ಆ ಪ್ರೀತಿಯಲ್ಲಿ ಬಿದ್ದಾಗಲೇ ಬದುಕು ಬದಲಾಗಿತ್ತು. ರಾತ್ರಿಯಿಡೀ ವಿಡಿಯೋ ಗೇಮ್ಸ್ ಆಡ್ತಿದ್ರು ಈ ಶಶಾಂಕ್. ಪರೀಕ್ಷೆಗಳನ್ನು ಕೂಡ ಅದಕ್ಕಾಗಿ ಮಿಸ್ ಮಾಡಿಕೊಳ್ತಿದ್ರು. ಇವರ ಪಾಲಿಗೆ ಕೋಡಿಂಗ್ ಅನ್ನೋದು ಕೊಕೆನ್ನಂತಾಗಿ ಬಿಟ್ಟಿತ್ತು. ಹ್ಯಾಕಿಂಗ್ನಲ್ಲೂ ಶಶಾಂಕ್ ಎಕ್ಸ್ಪರ್ಟ್ ಆಗಿದ್ರು. ಒಂದು ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿದ್ರೆ ಕ್ರಾಕ್ಪಾಲ್ ಡಾಟ್ ಕಾಮ್ ಶಶಾಂಕ್ಗೆ 50 ಡಾಲರ್ ಕೊಡ್ತಾ ಇತ್ತು.
ಎಂಜಿನಿಯರಿಂಗ್ ಮೊದಲ ವರ್ಷ ಓದುತ್ತಲೇ ಶಶಾಂಕ್ ಹ್ಯಾಕಿಂಗ್ ಬ್ಯುಸಿನೆಸ್ ಮುಂದುವರಿಸಿದ್ರು. ಕೇವಲ 18 ನಿಮಿಷಗಳಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ವೆಬ್ಸೈಟ್ ಹಾಗೂ 100ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳ ವೆಬ್ಸೈಟ್ ಹ್ಯಾಕ್ ಮಾಡಿದ್ದಾರೆ ಶಶಾಂಕ್. ಅಷ್ಟೇ ಅಲ್ಲ ವೈರಸ್ ಪತ್ತೆ ಮಾಡೋದ್ರಲ್ಲೂ ಶಶಾಂಕ್ ಹಿಂದೆ ಬೀಳಲಿಲ್ಲ. ಸೈಬರ್ ಭದ್ರತಾ ಸಲಹೆಗಾರರಾಗಿ ಇಂದೋರ್ ಪೊಲೀಸರ ಜೊತೆಗೂ ಶಶಾಂಕ್ ಕೆಲಸ ಮಾಡಿದ್ದಾರೆ. ಐಆರ್ಸಿ ಚಾಟ್ ನೆಟ್ವರ್ಕ್ನ ಸದಸ್ಯರಾಗಿದ್ದ ಶಶಾಂಕ್, ಅದರ ವಿಶೇಷತೆಗಳನ್ನೂ ಬಣ್ಣಿಸ್ತಾರೆ.
ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಶಶಾಂಕ್ ಕಾಲೇಜು ಬಿಟ್ರು. ಆದರೆ, ಪೋಷಕರು ಶಶಾಂಕ್ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ. ನಮಗೆಲ್ಲಾ ಗೊತ್ತೇ ಇದೆ.. ಸ್ಟೀವ್ ಜಾಬ್ಸ್ ಅವ್ರನ್ನ ರೀಡ್ ಕಾಲೇಜಿನಿಂದ ಹೊರಹಾಕಲಾಗಿತ್ತು. ಆಮೇಲೆ ಅವರು ಆ್ಯಪಲ್ ಕಂಪನಿಯನ್ನು ಕಟ್ಟಿ ಬೆಳೆಸಿದ್ರು. ಹಾರ್ವರ್ಡ್ ವಿದ್ಯಾರ್ಥಿಯಾಗಿದ್ದ ಬಿಲ್ ಗೇಟ್ಸ್ ಕೂಡ ಕಾಲೇಜು ಬಿಟ್ಟು ಮೈಕ್ರೋಸಾಫ್ಟ್ ಕಂಪನಿ ಸ್ಥಾಪಿಸಿದ್ರು. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕೂಡ ಕಾಲೇಜ್ ಡ್ರಾಪ್ ಔಟ್ ಆಗಿ ಫೇಸ್ಬುಕ್ ಆರಂಭಿಸಿದ್ದು ಈಗ ಇತಿಹಾಸ.


ಆದ್ರೆ ನಮ್ಮ ಭಾರತದಲ್ಲಿ ಕಾಲೇಜು ಬಿಡೋದು ಅಂದ್ರೆ ಕನಸು ಕಾಣೋ ವಿಚಾರವಲ್ಲ. ಕಾಲೇಜು ಬಿಟ್ಮೇಲೆ ಮುಂದೇನು ಅನ್ನೋ ಯೋಚನೆ ಶಶಾಂಕ್ರನ್ನು ಕಾಡಲಾರಂಭಿಸಿತ್ತು. ಕಾರ್ಪೊರೇಟ್ ಕಂಪನಿಗೆ ವೆಬ್ ಸೆಕ್ಯೂರಿಟಿ ಕನ್ಸಲ್ಟಂಟ್ ಆಗಿ ಹೋಗಲು ಅವರು ನಿರ್ಧರಿಸಿದ್ರು. ಇಂದೋರಿನ ಖ್ಯಾತ ಕಂಪನಿಯೊಂದ್ರಲ್ಲಿ ಅವರಿಗೆ ಸಿಕ್ಕಿದ್ದು ಹ್ಯಾಕಿಂಗ್ ಕೆಲಸ. ಒಂದೂವರೆ ವರ್ಷ ಅಲ್ಲಿ ಕೆಲಸ ಮಾಡಿದ ಶಶಾಂಕ್ಗೆ ಬೇರೊಂದು ಕಂಪನಿಯಿಂದ ಒಳ್ಳೆ ಆಫರ್ ಸಿಕ್ಕಿತ್ತು. ಹೊಸ ಉದ್ಯೋಗಕ್ಕೆ ಸೇರಿ 45 ದಿನಗಳಾದ್ರೂ ಸಂಬಳವನ್ನೇ ಕೊಟ್ಟಿರ್ಲಿಲ್ಲ. ಆ ಕೆಲಸವನ್ನೂ ಬಿಟ್ಟಾಗ ಶಶಾಂಕ್ ಜೇಬಿನಲ್ಲಿದ್ದಿದ್ದು ಬರೀ 5ಸಾವಿರ ರೂಪಾಯಿ.
2009ರ ಫೆಬ್ರವರಿ 23ರಂದು ಶಶಾಂಕ್ ಕೆಲಸ ಬಿಟ್ರು. ಕೈಯಲ್ಲಿ ಕಾಸಿಲ್ಲ, ಡಿಗ್ರಿ ಕೂಡ ಇಲ್ಲ. ಆನ್ಲೈನ್ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ ಅವರಿಗೆ ಡಾಟಾ ಎಂಟ್ರಿಯೊಂದು ಸಿಕ್ಕಿತ್ತು. ರಾತ್ರಿಯಿಡೀ ಕೆಲಸ ಮಾಡಿದ ಶಶಾಂಕ್ 18 ಡಾಲರ್ ಸಂಪಾದಿಸಿದ್ರು. ಎಂಜಿನಿಯರ್ ಓದಿದ್ದ ಇನ್ನಿಬ್ಬರು ಸ್ನೇಹಿತರು ಕೂಡ ಶಶಾಂಕ್ಗೆ ಜೊತೆಯಾದ್ರು. ಕೆಲವೇ ದಿನಗಳಲ್ಲಿ ಅವರಿಗೂ ಕೆಲಸ ಸಿಕ್ಕಿದ್ರಿಂದ ಶಶಾಂಕ್ ಮತ್ತೆ ಒಂಟಿಯಾದ್ರು. 2009ರ ಅಕ್ಟೋಬರ್​​ನಲ್ಲಿ ಸಣ್ಣದೊಂದು ಟೀಂ ಕಟ್ಟಿಕೊಂಡು ಶಶಾಂಕ್ ಇಂಡಿಯಾ ಇನ್ಫೋಟೆಕ್ ಎಂಬ ಸಂಸ್ಥೆ ಆರಂಭಿಸಿದ್ರು. ಇ-ಕಾಮರ್ಸ್ ವೆಬ್ಸೈಟ್ ಮೂಲಕ ಉತ್ಪನ್ನಗಳನ್ನ ಮಾರಾಟ ಮಾಡುವ ಕೆಲಸ ಅಂದು ಆರಂಭಗೊಂಡಿತ್ತು.
ಜೇಬಿನಲ್ಲಿ ಕೇವಲ 5ಸಾವಿರ ರೂಪಾಯಿ ಇಟ್ಟುಕೊಂಡು ಕೆಲಸಕ್ಕಾಗಿ ಅಲೆದಿದ್ದ ಶಶಾಂಕ್ ಈಗ ಕೋಟ್ಯಾಧೀಶ. ವರ್ಷಕ್ಕೆ 5ಕೋಟಿ ರೂಪಾಯಿ ವಹಿವಾಟು ಮಾಡ್ತಿದ್ದಾರೆ. ಪ್ರತಿ ತಿಂಗಳು 300 ಪ್ರಾಜೆಕ್ಟ್ ಮುಗಿಸ್ತಿದ್ದಾರೆ. 2014ರ ಫೆಬ್ರವರಿ ವರೆಗೆ ಇಂಡಿಯಾ ಇನ್ಫೋಟೆಕ್ ಕಂಪನಿ 10 ಸಾವಿರ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಸುಮಾರು 400 ಕ್ಲೈಂಟ್ಗಳನ್ನು ಈ ಸಂಸ್ಥೆ ಹೊಂದಿದೆ. ವಿಶೇಷ ಅಂದ್ರೆ ಕಂಪನಿಯ ಅರ್ಧಕ್ಕಿಂತಲೂ ಹೆಚ್ಚು ವಹಿವಾಟು ಅಮೆರಿಕದಿಂದಲೇ ಆಗ್ತಿದೆ. ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ ಶಶಾಂಕ್.
ಒಟ್ಟಿನಲ್ಲಿ ಅಂದು ಕಾಲೇಜು ಬಿಟ್ಟ ಯುವಕ ಶಶಾಂಕ್ ಇಂದು ಕೋಟ್ಯಾಧೀಶ. ಹ್ಯಾಕರ್ ಆಗಿದ್ದವ ಯಶಸ್ವಿ ಉದ್ಯಮಿಯಾಗಿ ಕೋಟಿ ಕೋಟಿ ಗಳಿಸಲು ಪಟ್ಟ ಶ್ರಮವಂತೂ ಪ್ರತಿ ಯುವಕರಿಗೆ ಸ್ಫೂರ್ತಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article