ಎಸ್.ನಾರಾಯಣ್‌ಗೆ ಕೈ ಕೊಟ್ಟ ಹುಚ್ಚಾ ವೆಂಕಟ್‌….!

Date:

ಸ್ಯಾಂಡಲ್‌ವುಡ್‌ ನಲ್ಲಿ ಫೈರಿಂಗ್‌ ಸ್ಟಾರ್ ಹುಚ್ಚ ವೆಂಕಟ್ ಮತ್ತು ಎಸ್.ನಾರಾಯಣ್ ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿ ಬರ್ತಾ ಇದೆ ಅನ್ನೋದು ಭಾರೀ ಸುದ್ದಿ ಮಾಡಿತ್ತು ಆದ್ರೆ ಈಗ ಹುಚ್ಚ ವೆಂಕಟ್ ಈ ಚಿತ್ರದಿಂದ ಹೊರಬಂದಿರೋದಾಗಿ ಹೇಳಿ ಶಾಂಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಹೌದು ತಾವು ಅಭಿನಯಿಸಬೇಕಿದ್ದ ‘ಡಿಕ್ಟೇಟರ್ ಚಿತ್ರದಿಂದ ಹೊರಬಂದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಹುಚ್ಚ ವೆಂಕಟ್. ಚಿತ್ರತಂಡ ತಮ್ಮ ಕಾಲ್‌ಶೀಟ್ ಪಡೆದು ಸಾಕಷ್ಟು ದಿನಗಳೇ ಆಗಿದ್ರು ಶೂಟಿಂಗ್ ಸ್ಟಾರ್ಟ್ ಮಾಡಿಲ್ಲ ಹೀಗಾಗಿ ನನ್ನ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದೆ. ಇದೇ ಕಾರಣದಿಂದ ನಾನು ಚಿತ್ರದಿಂದ ಹೊರಬಂದಿರುವುದಾಗಿ ವೆಂಕಟ್ ತಿಳಿಸಿದ್ದಾರೆ.

ನಾನು ಯಾರಿಗೂ ತಗ್ಗಿ-ಬಗ್ಗಿ ನಡೆಯೋನಲ್ಲ. ಡಿಕ್ಟೇಟರ್ ಚಿತ್ರ ಎಸ್.ನಾರಾಯಣ್ ನಿರ್ದೇಶನ ಮಾಡ್ತಿದ್ದಾರೆ ಅಂತ ಹೆಸರು ಮಾಡಿದ್ದಲ್ಲ, ನಾನು ಅಭಿನಯಿಸ್ತಿದ್ದೀನಿ ಅಂತ ಸುದ್ದಿ ಮಾಡಿತ್ತು. ಇನ್ಮೇಲೆ ನಾನು ನನ್ನಿಷ್ಟದಂತೆ ನನ್ನ ಬ್ಯಾನರಿನಲ್ಲೇ ಅಭಿನಯಿಸ್ತೀನಿ ಎಂದಿದ್ದಾರೆ.
ಆದ್ರೆ ಎಲ್ಲೋ ಒಂದು ಕಡೆ ಹುಚ್ಚ ವೆಂಕಟ್ ನ ಈ ಮಾತುಗಳು ಹಲವು ವರ್ಷದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ, ಎಷ್ಟೋ ಹಿಟ್ ಚಿತ್ರಗಳನ್ನ ನೀಡಿ ಎಷ್ಟೋ ನಟ ನಟಿಯರಿಗೆ ಬದುಕು ಕಟ್ಟಿಕೊಟ್ಟ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವ್ರಿಗೆ ಮಾಡಿರೋ ಅವಮಾನವೇ ಸರಿ.
ಇನ್ನು ಈಬೆಳವಣಿಗೆಯಿಂದ ನೊಂದಿರುವ ಎಸ್.ನಾರಾಯಣ್ ಈ ವಿಚಾರ ನನ್ನಲ್ಲಿ ಹುಚ್ಚ ವೆಂಕಟ್ ಬಗ್ಗೆ ಅಸಹ್ಯ ಮೂಡಿಸಿದೆ. ಚಿತ್ರ ಮಾಡೋದು ಹುಡುಗಾಟಿಕೆಯ ಮಾತಲ್ಲ. ನಾವು ಚಿತ್ರಕ್ಕಾಗಿ ಸ್ಕ್ರಿಪ್ಟ್ ಮಾಡುತ್ತಿದ್ದೇವೆ. ಸ್ಕ್ರಿಪ್ಟ್ ಗೆ ಸಾಕಷ್ಟು ಸಮಯ ಬೇಕಾಗುತ್ತೆ ಇದರ ಮೇಲೆ ನಿರ್ಧಾರ ನಿರ್ಮಾಕರಿಗೆ ಬಿಟ್ಟದ್ದು ಎಂದಿದ್ದಾರೆ.

huccha venkat with shivanna

ಇದೇ ವೇಳೆ ಸೆಂಚುರಿಸ್ಟಾರ್ ಶಿವರಾಜಕುಮಾರ್ ಅವರ ಸರಳತೆಯನ್ನು ವೆಂಕಟ್ ಮೆಚ್ಚಿ ಹೊಗಳಿದ್ರು. ಪೊರ್ಕಿ ಹುಚ್ಚ ವೆಂಕಟ್ ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ರು. ನನ್ ಮಗಂದ್ ಅನ್ನೋ ಡೈಲಾಗ್‌ನ್ನೂ ಶಿವಣ್ಣ ಮೆಚ್ಚಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಾನು ಸಾಹಸಸಿಂಹ ವಿಷ್ಣುವರ್ಧನ್ ಬಿಟ್ರೆ ಶಿವಣ್ಣನ ಅಭಿಮಾನಿ ಎಂದರು ವೆಂಕಟ್.

  • ಶ್ರೀ

POPULAR  STORIES :

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...