ಇವು ವಿಶ್ವದ ಟಾಪ್ 10 ದುಬಾರಿ ತಿನಿಸುಗಳು

Date:

 

10. ಮಾಟ್ಸುಟೇಕ್ ಮಶ್ರೂಮ್ – 66789.95 ರೂಪಾಯಿ

10

ಮಾಟ್ಸುಟೇಕ್ ಎಂಬ ಹೆಸರಿನ ಈ ಅಣಬೆ ವಿಶ್ವದಲ್ಲೇ ಅತಿ ದುಬಾರಿ ಅಣಬೆ ಎಂಬ ಖ್ಯಾತಿಯನ್ನು ಪಡೆದಿದೆ. ಈ ಅಣಬೆಗಳು ಏಷ್ಯಾದಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ. ಜಪಾನ್, ಚೀನಾ, ಕೋರಿಯಾ, ಇಂಗ್ಲೆಂಡ್, ಕೆನಡಾ ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳು ಮಾಟ್ಸುಟೇಕ್ ಮಶ್ರೂಮ್ ನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತವೆ. ಅದರಲ್ಲೂ ಜಪಾನ್ ನ ರೆಡ್ ಪೈನ್ ಜಾತಿಯ ಮಾಟ್ಸುಟೇಕ್ ಅಣಬೆಗಳು ಹೆಚ್ಚು ದರ ಹೊಂದಿವೆ. ಈ ಅಣಬೆಗಳು ಹೆಚ್ಚಾಗಿ ಕಾಡುಗಳಲ್ಲಿ ಕಾಣಸಿಗುತ್ತವೆ. ಆದ್ದರಿಂದ ಇವುಗಳನ್ನು ಹುಡುಕುವುದು ಕಷ್ಟ. ಆದರೆ ಜಪಾನ್ ದೇಶ ಟನ್ ಗಟ್ಟಲೇ ಮಾಟ್ಸುಟೇಕ್ ಮಶ್ರೂಮ್ ನ್ನು ಬೆಳೆಯುತ್ತದೆ.

09. ವೆಸ್ಟಿನ್ ಹೋಟೆಲ್ ಬೆಗೆಲ್ – 66789.95 ರೂಪಾಯಿ

910

ಇದು ಬೆಳಗಿನ ಉಪಹಾರವಂತೆ. ಅದರಲ್ಲೂ ನ್ಯೂಯಾರ್ಕ್ ನ ವೆಸ್ಟಿನ್ ಹೋಟೆಲ್ ನಲ್ಲಿ ಮಾಡುವ ಬೆಗೆಲ್ ತಿನ್ನಬೇಕೆಂದರೆ ಬರೋಬ್ಬರಿ 66789.95 ರೂಪಾಯಿ ನೀಡಬೇಕಂತೆ. ಏಕೆಂದರೆ ಇದನ್ನು ಅತಿ ಕಡಿಮೆ ಪ್ರಮಾಣದ ಬಿಳಿ ಟ್ರಫಲ್ ಕ್ರೀಮ್, ರೀಸ್ಲಿಂಗ್ ಜೆಲ್ಲಿ ಮತ್ತು ಚಿನ್ನದ ಎಲೆಗಳಿಂದ ಅಲಂಕಾರ ಮಾಡಲಾಗುತ್ತದೆ. ಆದ್ದರಿಂದಲೇ ಇದಕ್ಕೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ.

08. ಜಿಲಿಯನ್ ಡಾಲರ್ ಲಾಬ್ ಸ್ಟರ್ ಫ್ರಿಟ್ಟಾಟ್ಟಾ – 66789.95 ರೂಪಾಯಿ

8

ಇದು ಒಂದು ಮಾದರಿಯ ಆಮ್ಲೇಟ್..! ಯೆಸ್.. ಆಮ್ಲೇಟ್ ಗೆ 66789.95 ರೂಪಾಯಿ ಕೊಡಬೇಕಾ ಎಂದುಕೊಳ್ಳಬೇಡಿ. ಇದು ಕೇವಲ ಮೊಟ್ಟೆಯಿಂದ ಮಾಡಿದ ಆಮ್ಲೇಟ್ ಅಲ್ಲ. ಬದಲಿಗೆ ಏಡಿ, ಸೆವ್ರುಗಾ ಎಂಬ ಚಟ್ನಿ, 6 ಮೊಟ್ಟೆಯನ್ನು ಹಾಕಲಾಗುತ್ತದೆ. ಇವೆಲ್ಲವು ಕೂಡಾ ದುಬಾರಿಯೇ. ಆದ್ದರಿಂದ ಈ ತಿನಿಸಿಗೆ ದೊಡ್ಡ ಮೊತ್ತದ ಬೆಲೆ ನಿಗದಿಪಡಿಸಲಾಗಿದೆ. ವಿಶೇಷವೆಂದರೆ ಇದರ ಪ್ರಚಾರಕ್ಕಾಗಿ ಜಿಲಿಯನ್ ಎಂಬ ಈ ರೆಸ್ಟೋರೆಂಟ್ ಲಕ್ಷಾಂತರ ರೂಪಾಯಿ ಖಚರ್ು ಮಾಡುತ್ತದಂತೆ..! ಒಂದು ದಿನಕ್ಕೆ ಕೇವಲ 12 ಆಮ್ಲೆಟ್ ಗಳನ್ನು ಮಾತ್ರ ಮಾಡಲಾಗುತ್ತದಂತೆ..! ಅದಕ್ಕೂ ಜನರು ಕ್ಯೂ ಹಚ್ಚಿರುತ್ತಾರಂತೆ..!

07. ವಾಗ್ಯೂ ರಿಬೆಯೆ ಸ್ಟೀಕ್ – 187011.86 ರೂಪಾಯಿ

7

ಇದು ಮಾಂಸದಿಂದ ತಯಾರಿಸುವ ಒಂದು ದುಬಾರಿ ಖಾದ್ಯ. ಒಮೆಗಾ 3 ಮತ್ತು ಒಮೆಗಾ 6 ಎಂಬ ಆ್ಯಸಿಡ್ ನ್ನು ಇದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ ಅದು ಆರೋಗ್ಯಕ್ಕೇನೂ ಹಾನಿಯನ್ನುಂಟು ಮಾಡುವುದಿಲ್ಲ. ವಿಶೇಷವೆಂದರೆ ಇದು ಈಗ ಜಪಾನ್ ನಲ್ಲಿ ಮಾತ್ರ ಸಿಗುತ್ತದೆ. ಈ ಮುಂಚೆ ನ್ಯೂಯಾರ್ಕ್ ನಲ್ಲೂ ವಾಗ್ಯೂ ರಿಬೆಯೆ ಸ್ಟೀಕ್ ನ್ನು ತಯಾರಿಸಲಾಗುತ್ತಿತ್ತು. ಆದರೆ ಅದು ಈಗ ಮುಚ್ಚಿ ಹೋಗಿದೆ. ಆದ್ದರಿಂದ ವಾಗ್ಯೂ ರಿಬೆಯೆ ಸ್ಟೀಕ್ ನ್ನು ತಿನ್ನಬೇಕೆಂದರೆ 187011.86 ರೂಪಾಯಿಯನ್ನು ಕಿಸೆಯಲ್ಲಿಟ್ಟುಕೊಂಡು ಜಪಾನ್ ವಿಮಾನವನ್ನೇರಬೇಕು..!

06. ಸಮುಂದರಿ ಖಝಾನಾ ಕರಿ – 213727.84 ರೂಪಾಯಿ

6

ಇದು ಪಕ್ಕಾ ಭಾರತೀಯ ತಿನಿಸು. ವಿಶೇಷವೆಂದರೆ ಆಸ್ಕರ್ ಪುರಸ್ಕೃತ ಚಿತ್ರ ಸ್ಲಮ್ ಡಾಗ್ ಮಿಲಿಯನೇರ್ ನ ಸಕ್ಸಸ್ ಪಾರ್ಟಿ ಆಯೋಜಿಸಿದಾಗ ಇದನ್ನು ತಯಾರಿಸಲಾಯಿತು. ಇದರಲ್ಲಿ ಟ್ರಫಲ್, ಚಿನ್ನದ ಎಲೆ, ಚಿನ್ನ ಲೇಪಿತ ಕಡಲ ಏಡಿಗಳು, ನಾಲ್ಕು ಕ್ವಿಲ್ ಮೊಟ್ಟೆಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. ಆದರೆ ಬೆಲೆ ಮಾತ್ರ 213727.84 ರೂಪಾಯಿ. ಇದು ಭಾರತದ ಅತಿ ದುಬಾರಿ ಆಹಾರ ಎನಿಸಿಕೊಂಡಿದೆ.

05. ರಾಯಲ್ ಪಿಜ್ಜಾ 007 – 280517.79 ರೂಪಾಯಿ

5

ಡೋಮಿನೊಕೋ ಕ್ರೋಲ್ಲಾ ಎಂಬ ವ್ಯಕ್ತಿ ಪಿಜ್ಜಾ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಪಿಜ್ಜಾದ ಮೇಲೆಯೇ ನಾವು ತೋರಿಸುವ ಫೋಟೋದಲ್ಲಿನ ವ್ಯಕ್ತಿಯ ಚಿತ್ರವನ್ನು ಚಿತ್ರಿಸುವ ಮೂಲಕ ಅಚ್ಚರಿ ಮೂಡಿಸುತ್ತಾನೆ. ಆದರೆ ಈತ ತಯಾರಿಸುವ ರಾಯಲ್ ಪಿಜ್ಜಾ 007 ಇಂದು ಭಾರೀ ಫೇಮಸ್ ಆಗಿದೆ. ಏಕೆಂದರೆ ಅದರ ಬೆಲೆಯೇ 280517.79 ರೂಪಾಯಿಗಳು. ಇಷ್ಟಕ್ಕೂ ಈ 12 ಇಂಚ್ ನ ಪಿಜ್ಜಾ ತಯಾರಿಸಲು ಟೊಮ್ಯಾಟೋ ಸಾಸ್, ಕೆಲವು ವಿಧದ ಚಟ್ನಿ, ಸ್ಕಾಟಿಷ್ ಸಾಲ್ಮನ್, ಜಿಂಕೆಯ ಮಾಂಸವನ್ನು ಬಳಸಲಾಗುತ್ತದೆ. ಅಲ್ಲದೇ ಇದರ ಮೇಲೆ 24 ಕ್ಯಾರೆಟ್ ಚಿನ್ನದ ಪದರ ಹಾಕಲಾಗಿರುತ್ತದೆ..! ಇದೇ ಕಾರಣಕ್ಕೆ ರಾಯಲ್ ಪಿಜ್ಜಾ 007ಗೆ 280517.79 ರೂಪಾಯಿ ನೀಡಬೇಕಾಗುತ್ತದೆ.

04. ಡೆನ್ಸುಕ್ ಕಪ್ಪು ಕಲ್ಲಂಗಡಿ – 407418.70 ರೂಪಾಯಿ

4

ಜಪಾನಿನಲ್ಲಿ ಒಂದು ವಿಧದ ಕಲ್ಲಂಗಡಿಯನ್ನು ಬೆಳೆಯಲಾಗುತ್ತದೆ. ಅದರಲ್ಲಿ ಅಂಥಾದ್ದೇನಿದೆಯೋ ಗೊತ್ತಿಲ್ಲ, ಅದನ್ನು ಎಷ್ಟೇ ಪ್ರಮಾಣದಲ್ಲಿ ಬೆಳೆದರೂ ಕೂಡಾ ಕ್ಷಣ ಮಾತ್ರದಲ್ಲಿ ಮಾರಾಟವಾಗುತ್ತದಂತೆ. ಅದೂ ಕೂಡಾ ಒಂದು ಕಲ್ಲಂಗಡಿಗೆ 4 ಲಕ್ಷ ರೂಪಾಯಿ ನಿಗದಿಪಡಿಸಿದರೂ ಅಲ್ಲಿನ ಜನ ಈ ಕಲ್ಲಂಗಡಿಯನ್ನು ಬಿಡುತ್ತಿಲ್ಲವಂತೆ. ಅದೇ ನಮ್ಮ ಕರ್ನಾಟಕದಲ್ಲಿ ಬಂದು 4 ಲಕ್ಷ ರೂಪಾಯಿ ನೀಡಿದರೆ ಇಡೀ ಜನ್ಮಕ್ಕಾಗುವಷ್ಟು ಕಲ್ಲಂಗಡಿಯನ್ನು ಕೊಟ್ಟು ಕಳಿಸುತ್ತಾರೆ ನಮ್ಮ ರೈತರು.

03. ಯುಬಾರಿ ಕಿಂಗ್ ಮೆಲನ್ಸ್ – 1527619.74 ರೂಪಾಯಿ

3

ಇದನ್ನು ಸಾಮಾನ್ಯ ಸೂಪರ್ ಮಾರ್ಕೆಟ್ ಗಳಲ್ಲಿ ಹುಡುಕುವುದು ಅಸಾಧ್ಯ. ಏಕೆಂದರೆ ಇದು ವಿಶ್ವದ ಅತಿ ದುಬಾರಿ ಕಲ್ಲಂಗಡಿ..! ಇದರಲ್ಲಿರುವ ಸಿಹಿ ಅಂಶ ಇದಕ್ಕೆ ವಿಶ್ವದ ಅತಿ ದುಬಾರಿ ಕಲ್ಲಂಗಡಿ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ. ಒಂದು ಬಾರಿ ಯುಬಾರಿ ಕಿಂಗ್ ಮೆಲನ್ ಗಾಗಿ ಬಿಡ್ ನಡೆಯುತ್ತಿದ್ದಾಗ ಒಂದೇ ಒಂದು ಕಲ್ಲಂಗಡಿ ಬರೋಬ್ಬರಿ 23,000 ಡಾಲರ್ ಗೆ ಮಾರಾಟವಾಗಿ ಇಡೀ ಜಗತ್ತನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿತ್ತು.

02. ಅಲ್ಮಾಸ್ ಕೆವಿಯೆರ್ – 1669748.75 ರೂಪಾಯಿ
2
ಇದು ಇರಾನ್ ಮೂಲದ ಒಂದು ವಿಧದ ಚಟ್ನಿ. ಇದು ಮೊದಲೇ ದುಬಾರಿಯಾಗಿತ್ತು. ಆದರೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತಿರುವುದರಿಂದ ಮತ್ತಷ್ಟು ದುಬಾರಿಯಾಗಿದೆ. ಇದನ್ನು ಇಂಗ್ಲೆಂಡ್ ನ ಕೇವಿಯರ್ ಹೌಸ್ ಅಂಡ್ ಫ್ರೂನಿಯರ್ ಎಂಬ ಅಂಗಡಿಯನ್ನು ಬಿಟ್ಟು ವಿಶ್ವದ ಯಾವುದೇ ಅಂಗಡಿಯಲ್ಲಿ ಖರೀದಿಸಲು ಸಾಧ್ಯವಿಲ್ಲ. ಅದರಲ್ಲೂ ಇದನ್ನು ಒಂದು ಕೆಜಿಯ ಪೊಟ್ಟಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಚಿನ್ನದ ಟಿನ್ ಗಳಿಂದ ಮಾಡಲಾದ ಪೊಟ್ಟಣದಲ್ಲಿ ತುಂಬಿಸಿಟ್ಟಿರಲಾಗಿರುತ್ತದೆ. ಆದ್ದರಿಂದ ಇದಕ್ಕೆ ಬರೋಬ್ಬರಿ 25,000 ಡಾಲರ್..! ಇನ್ನು ಇದನ್ನು ಒಂದು ಬಾರಿ ಟೇಸ್ಟ್ ಮಾಡಬೇಕೆಂದರೆ 1,250 ಡಾಲರ್ ನೀಡಬೇಕು..! ಇದನ್ನು ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಬರೋಬ್ಬರಿ 1,60,000ಕ್ಕೂ ಹೆಚ್ಚು..!

01. ವೈಟ್ ಅಲ್ಬಾ ಟಫಲ್ – 10713508.72 ರೂಪಾಯಿ

1

ಇವು ವಿಶ್ವದ ದುಬಾರಿ ತಿನಿಸುಗಳು

ಇದೇ ನೋಡಿ ವಿಶ್ವದ ಅತಿ ದುಬಾರಿ ತಿನಿಸು..! ಇದು ಅಣಬೆ ಜಾತಿಗೆ ಸೇರಿದ ತಿನಿಸು. ಇದು ಭೂಮಿಯೊಳಗೆ ಗೆಡ್ಡೆ ಗೆಣಸುಗಳ ಮಾದರಿಯಲ್ಲಿ ಇರುತ್ತದೆ. ಆದ್ದರಿಂದ ಇದನ್ನು ಕಂಡುಹಿಡಿಯಲು ನಾಯಿ ಹಾಗೂ ಹಂದಿಗಳನ್ನು ಬಳಸುತ್ತಾರೆ. ಅವುಗಳು ಟಫಲ್ ಇರುವ ಜಾಗವನ್ನು ಅಗೆಯಲು ಆರಂಭಿಸುತ್ತವೆ. ಬಳಿಕ ಆ ಜಾಗದಲ್ಲಿ ಅಗೆದಾಗ ಮಾತ್ರ ಟಫಲ್ ಸಿಗುತ್ತದೆ. ಇದನ್ನು ಬೆಳೆಯಲು ತೀರಾ ಕಷ್ಟ. ಆದ್ದರಿಂದ ಇದನ್ನು ಬೆಳೆಯುವುದು ಕಡಿಮೆಯಾಗಿದೆ. ಇದೇ ಕಾರಣಕ್ಕೆ ಟಫಲ್ ನ ಬೆಲೆ ಹೆಚ್ಚಾಗಿದೆ. ಒಂದು ಬಾರಿ 1.51 ಕೆಜಿಯ ಟಫಲ್ ನ್ನು ಹಾಂಕಾಂಗ್ ಮೂಲದ ದಂಪತಿ ಒಂದು ಕೋಟಿಗೂ ಹೆಚ್ಚು ಹಣ ತೆತ್ತು ಖರೀದಿಸಿದ್ದರು.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...