ಸುಶಾಂತ್ ಸಿಂಗ್ ಸೂಸೈಡ್ ಕೇಸ್.. ಬಾಲಿವುಡ್ ಕ್ವೀನ್‍ಗೆ ಸಮನ್ಸ್.. ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡ್ತೇನೆ-ಕಂಗನಾ

Date:

ನಟ ಸುಶಾಂತ್ ಸಿಂಗ್ ರಜಪೂತ್ ವಿಚಾರದಲ್ಲಿ ನಾನು ಮಾಡಿದ ಆರೋಪ ಸುಳ್ಳು ಎಂದರೆ ನನ್ನ ಪದ್ಮಶ್ರೀ ಪ್ರಶಸ್ತಿಯನ್ನುವಾಪಸ್ ನೀಡುತ್ತೇನೆ ಎಂದು ನಟಿ ಕಂಗನಾ ರಣಾವತ್ ಹೇಳಿಕೆ‌ ನೀಡಿದ್ದಾರೆ.ಕಳೆದ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮುಂಬೈ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಆತ್ಮಹತ್ಯೆ ನಂತರ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಡುವೆ ನಟಿ ಕಂಗನಾ ರಣಾವತ್ ಅವರು ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು.ಸುಶಾಂತ್ ಸಾವಿನ ನಂತರ ವಿಡಿಯೋ ಮಾಡುವ ಮೂಲಕ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಕಂಗನಾ, ಬಾಲಿವುಡ್ ಮೂವಿ ಮಾಫಿಯಾ ಸುಶಾಂತ್ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ. ಬಾಲಿವುಡ್‍ನಲ್ಲಿ ಇರುವ ಸ್ವಜನಪಕ್ಷಪಾತಕ್ಕೆ ಸುಶಾಂತ್ ಬಲಿಯಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಜೊತೆಗೆ ಗಲ್ಲಿ ಬಾಯ್ ಸಿನಿಮಾ ಮತ್ತು ನಟ ಸಂಜಯ್ ದತ್ ಅವರ ಹೆಸರನ್ನು ನೇರವಾಗಿ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಕಾರಣದಿಂದ ಮುಂಬೈ ಪೊಲೀಸರು, ಕಂಗನಾ ವಿರುದ್ಧ ಸಮನ್ಸ್ ಜಾರಿಮಾಡಿದ್ದು, ಅವರ ಆರೋಪವನ್ನು ಸಾಬೀತು ಪಡಿಸುವಂತೆ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಂಗನಾ, ನಾನು ಹೇಳಿರುವುದನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ. ಆದರೆ ನಾನು ಹೇಳಿರುವುದು ಸಾರ್ವಜನಿಕ ವಲಯದಲ್ಲಿದೆ. ಅದನ್ನು ಜನರು ಒಪ್ಪಿಕೊಳ್ಳುತ್ತಾರೆ. ನನ್ನ ಮಾತುಗಳನ್ನು ಜನರು ಒಪ್ಪಿಕೊಳ್ಳದಿದ್ದರೆ, ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದಾರೆ.ಈ ಹಿಂದೆ ವಿಡಿಯೋ ಮಾಡಿದ್ದ ಕಂಗನಾ, ಸುಶಾಂತ್ ಸಿನಿಮಾ ರಂಗಕ್ಕೆ ಬಂದು ಕಾಯ್ ಪೋಚೆನಂತಹ ಸಿನಿಮಾ ಮಾಡಿದ್ದಾರೆ. ಸ್ಟಾರ್ ಕಿಡ್‍ಗಳ ಡೆಬ್ಯು ಅವಾರ್ಡ್ ನೀಡುವವರು, ಸುಶಾಂತ್‍ಗೆ ಅವಾರ್ಡ್ ಯಾಕೆ ನೀಡಿಲಿಲ್ಲ. ಕೇದರ್ ನಾಥ್, ಧೋನಿ, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಗಲ್ಲಿಬಾಯ್ ರೀತಿಯ ಕೆಟ್ಟ ಸಿನಿಮಾಗಳಿಗೆ ಅವಾರ್ಡ್ ನೀಡುವ ನೀವು, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಗುಡ್ ಡೈರೆಕ್ಟರ್ ಗೆ ಯಾಕೆ ಪ್ರಶಸ್ತಿ ನೀಡುವುದಿಲ್ಲ ಎಂದು ನೇರವಾಗಿಯೇ ನೆಪ್ಟೋಯಿಸಂ ಬಗ್ಗೆ ಮಾತನಾಡಿದ್ದರು.ನಾವು ಏನೇ ಮಾಡಿದರೂ ನೀವು ಒಪ್ಪುವುದಿಲ್ಲ. ನಾನು ಕೂಡ ಒಳ್ಳೆಯ ಸಿನಿಮಾ ಮಾಡಿದ್ದೇನೆ. ನಿರ್ಮಾಣ, ನಿರ್ದೇಶನ ಮಾಡಿದ್ದೇನೆ. ನಮ್ಮ ಸಿನಿಮಾವನ್ನು ನೀವು ಯಾಕೆ ಒಪ್ಪುವುದಿಲ್ಲ. ನನ್ನ ಮೇಲೆ ಯಾಕೆ 6 ದೂರುಗಳನ್ನು ದಾಖಲಿಸಿದ್ದೀರಾ? ಒಬ್ಬ ಪತ್ರಕರ್ತ ಸುಶಾಂತ್ ಬಗ್ಗೆ ಬಹಳ ಕೆಟ್ಟದಾಗಿ ಬರೆಯುತ್ತಾನೆ. ಆತ ಖಿನ್ನತೆಗೆ ಒಳಗಾಗಿದ್ದ, ಡ್ರಗ್ಸ್ ಅಡಿಕ್ಟ್ ಎಂದೆಲ್ಲ ಬರೆಯುತ್ತಾರೆ. ಯಾಕೆ ನಿಮಗೆ ಸಂಜಯ್ ದತ್ ಅವರ ಅಡಿಕ್ಷನ್ ಕ್ಯೂಟ್ ಆಗಿ ಇತ್ತಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...