ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ' ಚಳಕ..!?

Date:

raaaರಾಜಕಾರಣ ಅಂದ್ರೆ ಬಿಸಿನೆಸ್. ಬಿಸಿನೆಸ್ ನಲ್ಲಿ ಯಶಸ್ಸು ಸಾಧಿಸಲು ಪಕ್ಕಾ ವ್ಯವಹಾರಸ್ತನಿಂದ ಮಾತ್ರ ಸಾಧ್ಯ. ಹಳೆಯ ರಾಜಕಾರಣಿಗಳಿಗೆ ದೂರದೃಷ್ಟಿಕೋನಗಳಿದ್ದವು. ರಾಜಕಾರಣದ ತಂತ್ರಗಾರಿಕೆಗಳಲ್ಲಿ ಪಳಗಿದ್ದರು. ಇವತ್ತಿಗೆ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ ಎಂದರೇ, ಗೆಲುವಿಗೆ ಮೂರನೆಯವರಿಗೆ ಸುಪಾರಿ ಕೊಡುವಷ್ಟರ ಮಟ್ಟಿಗೆಹೋಗಿದೆ. ದೇಶದ, ರಾಜ್ಯದ ಭವಿಷ್ಯವನ್ನು ಮೂರನೇ ವ್ಯಕ್ತಿ ಲೆಕ್ಕಾಚಾರಗಳನ್ನು ಹಾಕಿ ನಿರ್ಧರಿಸುತ್ತಾನೆ. ಮಹಾಚಾಣಾಕ್ಷ, ರಾಜಕೀಯ ಪಂಡಿತನಿಂದ ಮಾತ್ರ ಇದು ಸಾಧ್ಯ. ಸಧ್ಯಕ್ಕೆ ಆ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರುವ ಹೆಸರು ಪ್ರಶಾಂತ್ ಕಿಶೋರ್ ಅವರದ್ದು.

ನರೇಂದ್ರ ಮೋದಿ ಇವತ್ತು ಪ್ರಧಾನಿಯಾಗಿದ್ದಾರೆ ಅಂದ್ರೆ ಅದರಲ್ಲಿ ಪ್ರಶಾಂತ್ ಕಿಶೋರ್ ಪಾಲು ಬಹಳ ದೊಡ್ಡದು. ಅವರ ರಾಜಕೀಯ ಲೆಕ್ಕಾಚಾರ, ಜನರನ್ನು ತಲುಪಿದ ರಿವಾಜುಗಳಿಂದ ಮೋದಿ ಪ್ರಧಾನಿಯಾಗಲು ಸಹಾಯಕವಾಗಿದ್ದವು. ಕಡೆಗೆ ಅಮಿತ್ ಮಿಶ್ರಾ ಕಾರಣಕ್ಕೆ ಅವರ ಟೀಂನಿಂದ ಹೊರಬಂದ ಇವರನ್ನು ಸೆಳೆದುಕೊಳ್ಳುವಲ್ಲಿ ಜನತಾಪರಿವಾರ ಹಾಗೂ ಕಾಂಗ್ರೆಸ್ ಯಶಸ್ವಿಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಇನ್ನಿಲ್ಲದ ಪ್ರಚಾರ ಕೊಟ್ಟು ಪ್ರತಿಯೊಬ್ಬರ ಮನೆ ಮನಸಿನಲ್ಲಿ ಅವರ ಛಾಪನ್ನು ಮೂಡಿಸಿದ್ದ ಪ್ರಶಾಂತ್ ಕಿಶೋರ್ ನಿತೀಶ್ ಪರಿವಾರದಲ್ಲಿ ಕಾಣಿಸಿಕೊಂಡಿದ್ದರು. ಮೋದಿ ಗೆದ್ದು ಗದ್ದುಗೆ ಹಿಡಿದ ನಂತರ ಪ್ರಶಾಂತ್ ಕಿಶೋರ್ ಜಾಗದಲ್ಲಿ ಅಮಿತ್ ಶಾ ಪ್ರತಿಷ್ಟಾಪನೆಯಾಗಿದ್ದರು. ಕಿಶೋರ್ಗೆ ಮೋದಿ ಪ್ರಾಶಸ್ತ್ಯ ಕೊಡುವುದನ್ನು ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಸಹಿಸುತ್ತಿರಲಿಲ್ಲ. ರಾಜಕೀಯೇತರ ವ್ಯಕ್ತಿಯನ್ನು ಪ್ರಧಾನಿ ಕಾಯರ್ಾಲಯದಲ್ಲಿ ಅವರು ಸುತಾರಂ ಬಿಟ್ಟುಕೊಳ್ಳಲಿಲ್ಲ. ಆ ಕಾರಣಕ್ಕೆ ಪ್ರಶಾಂತ್ ಮೋದಿ ಟೀಂ ತೊರೆದು ನಿತೀಶ್ ಪರಿವಾರ ಸೇರಿಕೊಂಡರು. ಪ್ರಶಾಂತ್ ನಿತೀಶ್ ಪರಿವಾರದ ಗೆಲುವಿಗಾಗಿ ನೂರಾರು ಟೆಕ್ ಸೇವಿ ಯುವಕರ `ಐ ಪ್ಯಾಕ್’ ತಂಡ, `ಬಡ್ ಚಲಾ ಬಿಹಾರ್’ ಪ್ರಚಾರ ಕಾರ್ಯ, ಟೆಲಿವಿಷನ್ ಸೆಟ್, ಮ್ಯೂಸಿಕ್ ಸಿಸ್ಟಮ್ಸ್ ಒಳಗೊಂಡ ನಾನೂರು ಟ್ರಕ್ಗಳನ್ನು ಬಳಸಿಕೊಂಡು ಬಿಹಾರದ ಜನರ ಮನೆ, ಮನಕ್ಕೆ ನಿತೀಶ್ ಕುಮಾರ್ ಅವರನ್ನು ತಲುಪಿಸುವ ಕೆಲಸ ಮಾಡಿದ್ದರು. ಜೊತೆಗೆ ಆಮ್ಆದ್ಮಿ ಮಾದರಿಯಲ್ಲೇ ಪ್ರಚಾರಕ್ಕೆ ಆಟೋಗಳನ್ನು ಬಳಸಿಕೊಂಡಿದ್ದರು. ಇವೆಲ್ಲದರ ಪರಿಣಾಮವಾಗಿ ಬಿಹಾರದಲ್ಲಿ ಬಿಜೆಪಿ ಧೂಳೀಪಟವಾಗಿತ್ತು.

ಈಗ ಉತ್ತರಪ್ರದೇಶದಲ್ಲಿ ತಮ್ಮ ಕರ್ಮಭೂಮಿಯನ್ನು ಉಳಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ಗೆ ಪ್ರಶಾಂತ್ ಕಿಶೋರ್ ಸಾಥ್ ಆಗಿದ್ದಾರೆ. ಬಹುದೊಡ್ಡ ಪಕ್ಷವೊಂದು ಮೂರನೆಯ ವ್ಯಕ್ತಿಯನ್ನು ನಂಬಿಕೊಂಡಿರುವುದು ನಿಜಕ್ಕೂ ಬೇಸರದ ವಿಚಾರ. ಆದರೆ ಸಧ್ಯಕ್ಕೆ ಕಾಂಗ್ರೆಸ್ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಜಗತ್ತಿಗೆ ಗೊತ್ತಿದೆ. ಸಂಪೂರ್ಣ ನೆಲಕಚ್ಚುವ ಮುನ್ನ ಮೈಕೊಡವಿ ನಿಲ್ಲಿಸಲು ಯಾರಾದರೂ ಮುಂದೆ ಬರಲೇಬೇಕಾದ ಪರಿಸ್ಥಿತಿಯಿದೆ. ಮೊದಲಿನಿಂದಲೂ ಪ್ರಿಯಾಂಕ ಗಾಂಧಿಯ ಬಗ್ಗೆ ಕುತೂಹಲವಿದ್ದರೂ ಅವರೇಕೋ ರಾಜಕಾರಣದಿಂದ ಗಾವುದವಿದ್ದಾರೆ. ರಾಹುಲ್ ಗಾಂಧಿಯಿಂದ ಮ್ಯಾಜಿಕ್ ನಿರೀಕ್ಷಿಸಲಾಗಿತ್ತಾದರೂ, ಅವರು ಬಂದಮೇಲೆ ಕಾಂಗ್ರೆಸ್ ಪರಿಪೂರ್ಣ ಅದ್ವಾನವೆದ್ದುಹೋಗಿದೆ. ಹೀಗಿರುವಾಗ ಪ್ರಶಾಂತ್ ಕಿಶೋರ್ ಅವಶ್ಯಕತೆ ಕಾಂಗೆಸ್ಗೆ ಹೆಚ್ಚಿದೆ. ಚುನಾವಣೆ ತಂತ್ರಗಾರಿಕೆಯ ಚಾಣಾಕ್ಷ್ಯ ಎಂಬ ಹೊಗಳಿಕೆಗೆ ಪಾತ್ರರಾಗಿರುವ ಇವರಿಗೆ ಉತ್ತರಪ್ರದೇಶದಲ್ಲಿ ನಿಜವಾದ ಪರೀಕ್ಷೆ ಎದುರಾಗಿದೆ. ಅಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದರೇ ಇರುವುದು ಒಂದೇ ದಾರಿ. ಅದು ಬಲಿಷ್ಠ ನಾಯಕತ್ವ. ನಾಯಕತ್ವವನ್ನು ಮುಂದಿಟ್ಟುಕೊಂಡು ಅಖಾಢಕ್ಕಿಳಿಯದ ಹೊರತು ಕಾಂಗ್ರೆಸ್ ಗೆಲುವು ಸುಲಭವಲ್ಲ. ಹಾಗಾಗಿ ಪ್ರಶಾಂತ್, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇಬ್ಬರಲ್ಲೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೇ ಮ್ಯಾಜಿಕ್ ನಿರೀಕ್ಷಿಸಬಹುದು ಎಂದಿದ್ದಾರೆ. ಒಂದುವೇಳೆ ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪದಿದ್ದರೇ ಬ್ರಾಹ್ಮಣರ ಮತ ಹೆಚ್ಚಿರುವ ಯುಪಿಯಲ್ಲಿ ಶೀಲಾ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದರೇ ವರ್ಕೌಟ್ ಆಗಬಹುದು ಎಂಬ ಕ್ಯಾಲ್ಕುಲೇಶನ್ ಪ್ರಶಾಂತ್ ಗಿದೆ. ಅವರ ಪ್ರಕಾರ ಉತ್ತರಪ್ರದೇಶದಲ್ಲಿ ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ದಯನೀಯ ಸ್ಥಿತಿಗೆ ತಳ್ಳಲ್ಪಟ್ಟಿರುವ ಕಾಂಗ್ರೆಸ್ ಚೇತರಿಸಿಕೊಳ್ಳಬೇಕೆಂದರೇ ರಾಹುಲ್ ಗಾಂಧಿ ಇಲ್ಲವೇ ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿ ನಿಂತು ಚುನಾವಣೆ ಸೆಣೆಸಬೇಕು. ಹೀಗಾದಾಗ ಮಾತ್ರ ಕಾಂಗ್ರೆಸ್ ಶಕೆ ಮತ್ತೆ ಆರಂಭವಾಗುತ್ತದೆ.

ಆದರೆ ನೆಹರು- ಗಾಂಧಿ ಮನೆತನದಲ್ಲಿ ಹೀಗೆ ಹಂತ-ಹಂತವಾಗಿ ಮೇಲೇರುವ ಕಲ್ಪನೆಗಳಿಲ್ಲ. ಇಂದಿರಾ ಆಗಲಿ, ರಾಜೀವ್ ಆಗಲಿ ಏಕಾಏಕಿ ಪ್ರಧಾನಿ ಪಟ್ಟಕ್ಕೆ ಹೋದವರೇ ಹೊರತು ಮತ್ಯಾವುದರ ನಿರ್ವಹಣೆ ಅನುಭವವನ್ನೂ ಪಡೆದವರಲ್ಲ. ರಾಹುಲ್ ಗಾಂಧಿಯವರನ್ನೂ ಇದೇ ಮಾದರಿಯಲ್ಲಿ ಉನ್ನತ ಪದವಿಯಲ್ಲಿ ಕೂರಿಸಬೇಕೆಂಬುದೇ ಕಾಂಗ್ರೆಸ್ ಆಶಯವಾಗಿದೆ. ರಾಹುಲ್ ಸಿದ್ಧರಾಗುತ್ತಿದ್ದಂತೆ ಈ ಪಟ್ಟ ಬಿಟ್ಟುಕೊಡುತ್ತೇನೆ ಎಂಬರ್ಥದ ಮಾತುಗಳನ್ನು ಪ್ರಧಾನಿ ಪಟ್ಟದಲ್ಲಿರುವಾಗಲೇ ಮನಮೋಹನ್ ಸಿಂಗ್ ಕೂಡ ಹೇಳಿದ್ದರು. ಆದರೆ ಲೋಕಸಭೆ ಚುನಾವಣೆಯ ದಯನೀಯ ಸೋಲು ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಆನಂತರ ಮೋದಿ ಸರ್ಕಾರದ ವಿರುದ್ಧ ನಾನಾ ಪ್ರತಿಭಟನೆಗಳಲ್ಲಿ ರಾಹುಲ್ ಗಾಂಧಿಯವರನ್ನು ಮುಂದಿರಿಸಿ ರೀಪ್ಯಾಕೇಜಿಂಗ್ ಪ್ರಯತ್ನವಾಗಿದ್ದರೂ ಅದು ಅಂಥ ಯಶಸ್ಸನ್ನು ಕೊಟ್ಟಿಲ್ಲ. ರಾಹುಲ್ಗಿರುವ ಅಸಮರ್ಥತೆ ಬಹಳ. ಒಂದು ದೇಶವನ್ನು ಗೆಲ್ಲುವ ಶಕ್ತಿಯಿಲ್ಲದ ರಾಹುಲ್ಗೆ ಒಂದು ರಾಜ್ಯವನ್ನು ಕಬ್ಜಾ ಮಾಡಿಕೊಳ್ಳುವ ಛಾತಿಯಿದೆ ಎಂಬುದನ್ನಾದರೂ ಒಪ್ಪಿಕೊಳ್ಳಲೇಬೇಕು.

ಮೋದಿಯವರನ್ನು ಚಹಾ ಮಾರುತ್ತಿದವರು ಎಂದು ಮಣಿಶಂಕರ್ ಅಯ್ಯರ್ ನಿಂದಿಸಿದಾಗ ಅದನ್ನೇ ಚಾಯ್ ಪೇ ಚರ್ಚಾ ಆಗಿಸಿ, ಚಾಯ್ ವಾಲಾ ಮೋದಿಯ ಇಮೇಜು ರೂಪಿಸುವಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ದೊಡ್ಡದು. ಬಿಹಾರ ವಿಧಾನಸಭೆ ಚುನಾವಣೆ ವಿಷಯಕ್ಕೆ ಬಂದರೆ, ಅದೇ ನರೇಂದ್ರ ಮೋದಿ ದೆಹಲಿಗೆ ಸರಿಯಿರಬಹುದಾದರೂ ಬಿಹಾರ ಈ ಮಣ್ಣಿನ ಮಗನನ್ನೇ ಚುನಾಯಿಸಬೇಕು ಎಂಬ ಸಂದೇಶ ಬಿತ್ತುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾದರು. ಅವರ ತಂತ್ರಗಾರಿಕೆಗಳೆಲ್ಲಾ ಯಶಸ್ವಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಬಿಗುಮಾನ ಬಿಟ್ಟು ಕಿಶೋರ್ ಮಾತಿಗೆ ಜೈ ಎನ್ನದಿದ್ದರೇ ಚೇತರಿಕೆ ಕಷ್ಟ. ಹಾಗಂತ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಕಾಂಗ್ರೆಸ್ ವಿಚಾರದಲ್ಲಿ ವರ್ಕೌಟ್ ಆಗಬಹುದು ಎಂದು ನಿರೀಕ್ಷಿಸುವುದು ಕಷ್ಟ. ಎರಡರಲ್ಲಿ ಗೆದ್ದವಾ ಮೂರನೆಯದರಲ್ಲಿ ಸೋಲುತ್ತಾನೆ ಎಂಬ ಕವಡೆ ಲೆಕ್ಕಾಚಾರವಿದಲ್ಲ. ಮೊದಲೆರಡು ಪ್ರಯತ್ನದಲ್ಲಿ ಅವರು ಗೆಲುವಿಗೆ ಬೇಕಾದ ರೂಪುರೇಶೆಯನ್ನಷ್ಟೇ ಸಿದ್ದಪಡಿಸಿದ್ದರು. ವ್ಯಕ್ತಿಗತವಾಗಿ ಮೋದಿ, ನಿತೀಶ್ ಜನಪ್ರಿಯ ನಾಯಕರಾಗಿದ್ದರು. ಆದರೆ ಕಾಂಗ್ರೆಸ್ ಸ್ಥಿತಿ ಇವರಷ್ಟು ಉತ್ತಮವಾಗಿಲ್ಲ. ಮೋದಿ, ನಿತೀಶ್ಗೆ ಎಪ್ಪತ್ತು ಪರ್ಸೆಂಟ್ ಗೆಲ್ಲುವಷ್ಟು ಸ್ವಸಾಮಥ್ರ್ಯವಿತ್ತು. ಉಳಿದ ಮೂವತ್ತನ್ನು ಫುಲ್ ಫಿಲ್ ಮಾಡಿದ್ದು ಪ್ರಶಾಂತ್ ಕಿಶೋರ್. ಆದರೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜವಬ್ಧಾರಿ ಹೊತ್ತಿರುವ ಪ್ರಶಾಂತ್ ಕಾಂಗ್ರೆಸ್ ಅನ್ನು ಗೆಲ್ಲಿಸಲು ಎಪ್ಪತ್ತು ಪರ್ಸೆಂಟ್ ಕೆಲಸ ಮಾಡಬೇಕು. ಏಕೆಂದರೇ ಕಾಂಗ್ರೆಸ್ಗೆ ಅಲ್ಲಿ ಮೂವತ್ತು ಪರ್ಸೆಂಟಷ್ಟೇ ಗೆಲ್ಲುವ ಸಾಮರ್ಥ್ಯವಿದೆ. ನಿಜಕ್ಕೂ ಇದು ಸವಾಲಿನ ಕೆಲಸ. ಹಾಗಾಗಿಯೇ ಪ್ರಶಾಂತ್ ಸಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ ಅಂತ ಪ್ರಿಯಾಂಕ, ರಾಹುಲ್ಗೆ ಮನವಿ ಮಾಡಿದ್ದಾರೆ. ಅವರು ಒಪ್ಪದಿದ್ದರೇ ಶೀಲಾ ದೀಕ್ಷಿತ್ಗೆ ಮಣೆ ಹಾಕುವಂತೆ ಹೇಳಿದ್ದಾರೆ. ಶೀಲಾ ದೀಕ್ಷಿತ್ ಫೈನಲ್ ಆದ್ರೇ ಪ್ರಶಾಂತ್ಗಿದ್ದ ಶೇಕಡಾ ಐವತ್ತರಷ್ಟು ಭರವಸೆ ಮೂವತ್ತಕ್ಕೆ ಕುಸಿಯಲಿದೆ. ಏಕೆಂದರೇ ಪ್ರಿಯಾಂಕ ಬಂದರೇ ಲಡ್ಡು, ರಾಹುಲ್ ಬಂದರೇ ಸಾಧಾರಣ ಫುಡ್ಡು, ಶೀಲಾ ಉಪ್ಪಿನಕಾಯಿ ಎಂಬ ಸತ್ಯ ಅವರಿಗೆ ಗೊತ್ತಿದೆ. ಇವರನ್ನು ಹೊರತುಪಡಿಸಿ ಮಿಕ್ಕ ಕಾಂಗ್ರೆಸ್ ನಾಯಕರಿಗೆ ಮಣೆ ಹಾಕೋಣವೆಂದರೇ ಅದು ಖಾಲಿ ತಟ್ಟೆ ಎಂಬುದು ಪ್ರಶಾಂತ್ಗೆ ಗೊತ್ತಿರುವ ಹಕೀಕತ್ತು.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮಾರಾಟ ಮಾಡುವುದು ಬಹಳ ಕಷ್ಟ. ಆದರೂ ಬಿಸಿನೆಸ್ ಟೆಕ್ನಿಕ್ಗಳನ್ನು ರೂಪಿಸುವಲ್ಲಿ ಸಕ್ರಿಯರಾಗಿದ್ದಾರೆ. ನೆಹರೂ ಕುಟುಂಬ ಪ್ರತಿನಿಧಿಸುತ್ತಿದ್ದ ಅಮೇಥಿಯಲ್ಲೇ ಗಾಂಧಿ ಕುಟುಂಬದ ಇತಿಹಾಸವನ್ನು ಹೇಳಬೇಕಾದ ಪರಿಸ್ಥಿತಿಯಿದೆ. ಸಂಪೂರ್ಣ ಶಿಥಿಲವಾಗಿರುವ ಕಾಂಗ್ರೆಸ್ಗೆ ಟಾನಿಕ್ ಕೊಟ್ಟು ಚೇತರಿಸಿಕೊಳ್ಳುವಂತೆ ಮಾಡಲು, ಹೈಕಮಾಂಡ್ ಬಿಗುಮಾನವನ್ನು ಬಿಟ್ಟು ಪ್ರಶಾಂತ್ ಹೇಳಿದಕ್ಕೆಲ್ಲಾ ಗೋಣಾಡಿಸಬೇಕು. ತೀರಾ ತಲೆಯಲ್ಲಾಡಿಸುವಂತೆಯೂ ಇಲ್ಲ, ಐತಿಹ್ಯದ ತಲೆ ಉರುಳಿಹೋದರೇ ಕಷ್ಟ. ಒಂದು ಕಡೆ ಕಾಂಗ್ರೆಸ್ ಹೀನಾಯ ಸ್ಥಿತಿ, ಮತ್ತೊಂದು ಕಡೆ ಪ್ರಶಾಂತ್ ಪಟ್ಟುಗಳನ್ನೆಲ್ಲಾ ಅರ್ಥಮಾಡಿಕೊಂಡಿರುವ ಅಮಿತ್ ಶಾ ರೂಪಿಸಿರುವ ಮರುತಂತ್ರ- ಇವೆಲ್ಲದರ ಆಚೆಗೆ ಹೋಯ್ದಾಡುತ್ತಿರುವ ಮಾಯವತಿಯ ಅಲೆ- ಇಂಥ ಸ್ಥಿತಿಯಲ್ಲಿ ಪ್ರಶಾಂತ್ ಕೈ ಮೇಲಾದರೇ ನಿಜಕ್ಕೂ ಅದು ಪವಾಡವಾಗಿಬಿಡುತ್ತದೆ. ಈ ಸತ್ಯ ಅವರಿಗೂ ಗೊತ್ತಿದೆ. ಕಾಂಗ್ರೆಸ್ಗೂ ಗೊತ್ತಿದೆ. ಕುಸಿದ ಕಟ್ಟಡ ಮರು ನಿರ್ಮಾಣ ಮಾಡದೇ ವಿಧಿಯಿಲ್ಲದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಯುಪಿಯಲ್ಲಿ ಯಾವ ನಿರ್ಧಾರಕ್ಕೆ ಬರಬಹುದೆನ್ನುವ ಕುತೂಹಲವಿದೆ. ಹಾಗಂತ ಕೇವಲ ನಾಯಕತ್ವದ ಕಡೆ ಪ್ರಶಾಂತ್ ಗಮನ ಕೊಟ್ಟು ಸುಮ್ಮನಾಗಿಲ್ಲ. ಇಷ್ಟು ದಿನ ಚುನಾವಣೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮನ ಓಲೈಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ಕಾಂಗ್ರೆಸ್ ಕಾರ್ಯತಂತ್ರ ಬದಲಿಸಿದೆ. ಇಲ್ಲಿ ಶೇಕಡಾ 13ರಷ್ಟಿರುವ ಬ್ರಾಹ್ಮಣರ ಮತಗಳಿಕೆಗೆ ಆದ್ಯತೆ ನೀಡಿದೆ. ಹಾಗಾಗಿಯೇ ಕಾಂಗ್ರೆಸ್ ಬ್ರಾಹ್ಮಣರ ಮತಗಳಿಸಬೇಕಾದರೆ, ಮೇಲ್ವರ್ಗದ ಮುಖಗಳಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಬೇಕು ಎಂದು ಸಲಹೆ ನೀಡಿದ್ದಾರೆ. ಬಿಎಸ್ಪಿ ಕೂಡ ಆರಂಭದಲ್ಲಿ ಬ್ರಾಹ್ಮಣ ವಿರೋಧಿ ನಿಲುವು ತಾಳಿತ್ತು. ಆನಂತರ ಅದನ್ನು ಬದಲಿಸಿಕೊಂಡು ಗೆದ್ದಿತ್ತು.

ಘಟಾನುಘಟಿ ನಾಯಕರುಗಳಿದ್ದ ಏಕೈಕ ಬಹುದೊಡ್ಡ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನ ಈಗಿನ ಪರಿಸ್ಥಿತಿಗೆ ಕಾರಣ ದುರ್ಬಲ ನಾಯಕತ್ವ. ಹತ್ತುವರ್ಷ ದೇಶದ ಚುಕ್ಕಾಣಿ ಹಿಡಿದ ಪಕ್ಷಕ್ಕೆ ಸಧ್ಯಕ್ಕೆ ಸಣ್ಣಪುಟ್ಟ ಚುನಾವಣೆಗಳಲ್ಲಿ ಗೆಲ್ಲುವುದೂ ಪ್ರಯಾಸವಾಗಿದೆ. ಅದಕ್ಕೆ ಕಾರಣ ರಾಹುಲ್ ಗಾಂಧಿ ಎಂದರೂ ತಪ್ಪಾಗುವುದಿಲ್ಲ. ಏಕೆಂದರೇ ನಿಧಿ ಶೋಧನೆಯ ಅಗತ್ಯವೇ ಇರಲಿಲ್ಲ. ಕೈಯ್ಯಲ್ಲೇ ಕಾಂಗ್ರೆಸ್ ಎಂಬ ಬೆಲೆ ಕಟ್ಟಲಾಗದ ನಿಧಿಯಿತ್ತು. ಆದರೂ ಯುವರಾಜ ಅದನ್ನ ಸಮರ್ಥವಾಗಿ ನಿಭಾಯಿಸುವುದರಲ್ಲಿ ಸೋತು ಹೋದರು. ಕಾಂಗ್ರೆಸ್ ಧೂಳೀಪಟವಾಗಿದೆ ಎನ್ನುವುದೇ ವಾಸ್ತವ. ಒಂದೇ ಕುಟುಂಬ, ಮೂವರೂ ಪ್ರೈಂ ಮಿನಿಸ್ಟರ್, ಒಬ್ಬ ಸಮರ್ಥ ನಾಯಕಿ- ಅವರ ಕುಟುಂಬದ ಕೂಸಿನ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳಿದ್ದವು. ಕಾಂಗ್ರೆಸ್ ಯಾವತ್ತು ಕುಟುಂಬ ರಾಜಕಾರಣದ ಆರೋಪಕ್ಕೆ ತುತ್ತಾಗಿರಲಿಲ್ಲ. ಏಕೆಂದರೇ ನೆಹರೂ ರಕ್ತ ಅವರ ಕುಟುಂಬದ ನರನಾಡಿಯಲ್ಲೂ ಮಿಳಿತವಾಗಿತ್ತು. ಕಾಂಗ್ರೆಸ್ನ ಮಿಕ್ಕ ನಾಯಕರು ಕೂಡ ನೆಹರು ಕುಟುಂಬದ ನಾಯಕತ್ವವನ್ನು ಒಪ್ಪಿಕೊಂಡಿತ್ತು, ಅಥವಾ ಒಗ್ಗಿಕೊಂಡಿತ್ತು.

ಯಾವುದನ್ನೂ ರಾಹುಲ್ ಬಯಸಲಿಲ್ಲ. ಎಲ್ಲವೂ ಅದಾಗೇ ಒದಗಿತ್ತು. ರಾಜಕಾರಣಕ್ಕೆ ತಪಸ್ಸು ಬೇಕೆನ್ನುತ್ತಾರೆ, ಹಾರ್ಡ್ ವರ್ಕ್ ಮಾಡುವವನಿಗೆ ಮಾತ್ರ ರಾಜಕಾರಣ ಒಲಿಯುತ್ತದೆ. ಪಥ್ಯವಾಗುತ್ತದೆ. ಅವರು ಜನನಾಯಕರೆನಿಸಿಕೊಳ್ಳುತ್ತಾರೆ. ಒಳ್ಳೆ ಆಡಳಿತ ಎನ್ನುವುದಕ್ಕಾಗದಿದ್ದರೂ ಯಕಃಶ್ಚಿತ್ ಆಡಳಿತ ನಡೆಸುವ ಚಾಕಾಚಕ್ಯತೆ ಅವರಲ್ಲಿ ಮೇಳೈಸಿರುತ್ತದೆ. ಆದರೆ ಇದ್ಯಾವ ಕ್ವಾಲಿಟಿಯೂ ರಾಹುಲ್ಗಿರಲಿಲ್ಲ. ಮುತ್ತಾತನ ಕೀರ್ತಿ, ಅಜ್ಜಿಯ ದಿಟ್ಟ ಆಡಳಿತ, ಅಪ್ಪನ ಖ್ಯಾತಿ, ಅಮ್ಮನ ಶ್ರೀರಕ್ಷೆ- ಇವಿಷ್ಟು ಮಾತ್ರ ಅವರ ಬೆನ್ನಿಗಿತ್ತು. ತೋಳು ಮಡಚಿ ಜನನಾಯಕರಾಗಲು ಹೊರಟರು. ಕಾಂಗ್ರೆಸ್ ಅನ್ನು ಇನ್ನಿಲ್ಲದ ಎತ್ತರಕ್ಕೆ ತೆಗೆದುಕೊಂಡು ಹೋಗುವಂತೆ ವಿಜೃಂಭಿಸಿದರು. ಮೈಕ್ ಸಿಕ್ಕಲೆಲ್ಲಾ ಯರ್ರಾಬಿರ್ರಿ ಬಾಲೀಶ ಭಾಷಣಗಳನ್ನು ಹರಿಬಿಟ್ಟರು. ಕಡೆಕಡೆಗೆ ಕಾಂಗ್ರೆಸ್ನ ಹಿರಿಯ ನಾಯಕರ ಬಗ್ಗೆಯೇ ಟೀಕೆ ಮಾಡತೊಡಗಿದರು. ಒಂದಿಷ್ಟು ಯುವ ಪೀಳಿಗೆಯನ್ನು ರಾಹುಲ್ ಸೆಳೆದಿದ್ದು ನಿಜ. ಆದರೆ ಅದಕ್ಕೆ ಕಾರಣ ಅವರ ಪ್ರಬುದ್ಧ ರಾಜಕಾರಣವೆಂದರೇ ತಮಾಷೆಯಾಗುತ್ತದೆ. ರಾಹುಲ್ನನ್ನು ಯುವಕರು ಅಥವಾ ಯುವತಿಯರು ಇಷ್ಟಪಡುವುದಕ್ಕೆ ಬಲವಾದ ಕಾರಣ, ಅವರು ಯಾವುದೇ ಬಾಲಿವುಡ್ ಹೀರೋಗಿಂತ ಕಡಿಮೆಯಿರಲಿಲ್ಲ. ಅವರಂತೆ ಅವರನ್ನು ಪ್ರೀತಿಸಿದವರ ನಿಮಿತ್ತವೂ ಬಾಲೀಶವಾಗಿತ್ತು. ಕಾಂಗ್ರೆಸ್ ರಾಹುಲ್ಗೆ ಏನು ಕೊಟ್ಟಿಲ್ಲ ಹೇಳಿ, ಆರಂಭದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ನ ನಾಯಕತ್ವ ವಹಿಸಿತು, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸೆಕ್ರೆಟರಿ ಮಾಡಿತು. ಅಮೇಥಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಪಾಲರ್ಿಮೆಂಟ್ ಸದಸ್ಯತ್ವ ನೀಡಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಸೆಕೆಂಡ್ ರ್ಯಾಂಕ್ ಕೊಟ್ಟು ಪ್ರೋತ್ಸಾಹಿಸಿತು. ಆದರೂ ರಾಹುಲ್ ರಾಜಕೀಯದಲ್ಲಿ ಪ್ರಬುದ್ಧರಾಗಿರಲಿಲ್ಲ. ಎಲ್ಲಾ ಗೊತ್ತಿದ್ದು ಅವರನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಪಿಎಂ ಕ್ಯಾಂಡಿಡೆಟ್ ಅಂತ ಘೋಷಿಸಿ ಅಖಾಡಕ್ಕಿಳಿಸಿತ್ತು. ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಮೋದಿ ಹಾಗೂ ರಾಹುಲ್ ಗಾಂಧಿಯ ಭಾಷಣಗಳು ಕೂಡ ಹೈಲೈಟ್ ಆಗುತ್ತಿತ್ತು. ಮೋದಿ ಅಭಿವೃದ್ಧಿ ಮಂತ್ರ ಘೋಷಿಸುತ್ತಿದ್ದರೇ, ರಾಹುಲ್, ಮೋದಿಯನ್ನು ಕೋಮುವಾದಿ ಎಂದು ಬೈಯುತ್ತಲೇ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಮೋದಿ, `ರಾಹುಲ್ ಬಚ್ಚಾ.. ಗಲತ್ ಬೋಲ್ತಾ ಹೈ, ಖೇಲ್ನೇ ಚೋಡ್ದೋನಾ..’ ಅಂತ ಟಾಂಗು ಕೊಟ್ಟು ಸುಮ್ಮನಾಗುತ್ತಿದ್ದರು. ಮುಂದೆ ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿ ಹೋಯ್ತು. ಯುವರಾಜ ಮುಖಭಂಗ ಅನುಭವಿಸಿದರು. ಹತ್ತಿರತ್ತಿರ ಅರವತ್ತು ವರ್ಷಗಳ ಕಾಲ ಇಡೀ ದೇಶವನ್ನು ಆಳಿದ್ದ ಬಲಿಷ್ಠ ಕಾಂಗ್ರೆಸ್ ಕೇವಲ ಒಂದೇ ಚುನಾವಣೆಯ ಸೋಲಿಗೆ `ಕೈ’ ಮುರಿದುಕೊಂಡಿತ್ತು. ಸಧ್ಯದ ಸ್ಥಿತಿಗತಿಗಳನ್ನು ನೋಡಿದರೇ ಮತ್ಯಾವತ್ತೂ ಚೇತರಿಸಿಕೊಳ್ಳುವುದಿಲ್ಲ ಎಂದು ಖುದ್ದಾಗಿ ಆ ಪಕ್ಷವೇ ನಿರ್ಧಾರಕ್ಕೆ ಬಂದುಬಿಟ್ಟಂತಿದೆ. ಕಾಂಗ್ರೆಸ್ ಸೋಲಿಗೆ, ಸೋತ ನಂತರದ ಬೆಳವಣಿಗೆಗೆ ಕಾರಣ ರಾಹುಲ್ ಗಾಂಧಿ. ಒಂದು ದೊಡ್ಡ ಪಕ್ಷದ ಸರ್ವನಾಶಕ್ಕೆ ಒಬ್ಬ ಅಸಮರ್ಥ, ಅನುಭವಿ ನಾಯಕ ಸಾಕು ಎನ್ನುವುದಕ್ಕೆ, ರಾಹುಲ್ ತಾಜಾ ನಿದರ್ಶನವಾಗಿದ್ದಾರೆ.

ಹೆತ್ತವರಿಗೆ ಹೆಗ್ಗಣ ಮುದ್ದು. ಆದರೆ ದಶಕಗಳ ಇತಿಹಾಸವಿರುವ ಕಾಂಗ್ರೆಸ್ ಮಟ್ಟಿಗೆ ಈ ಲಾಲಿ ಸುವ್ವಾಲಿಗಳ ಅಗತ್ಯವಿರಲಿಲ್ಲ. ಸೋನಿಯಾ ಗಾಂಧಿ ಮಗನನ್ನು ಪ್ರಧಾನಿ ಮಾಡಲು ಹೋಗಿ `ಕೈ’ ಸುಟ್ಟುಕೊಂಡರು. ಪ್ರಣವ್ ಮುಖರ್ಜಿ, ಪಿ ಚಿದಂಬರಂ, ಆಂಟನಿ ಅವರಂಥ ಬಲಾಢ್ಯ ನಾಯಕರನ್ನು ಬದಿಗಿಟ್ಟು, ರಾಹುಲ್ನನ್ನು ಪಿ ಎಂ ಅಭ್ಯರ್ಥಿ ಅಂತ ಘೋಷಿಸಿ ಮುಂದೆ ಬಿಟ್ಟರೋ, ಅನನುಭವಿ ಯುವರಾಜ ತನ್ನ ಬಾಲೀಶತನಗಳಿಂದಲೇ ಕಾಂಗ್ರೆಸ್ ಅವನತಿಗೆ ಕಾರಣರಾದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿ, ಅಟ್ಲಿಸ್ಟ್ ವಿರೋಧ ಪಕ್ಷದ ಸ್ಥಾನಕ್ಕೂ ಹೆಣಗಾಡಿದಾಗ ರಾಹುಲ್ ಎಂಬ ಮಗು ಪೇಚಾಡಿದ್ದನ್ನು ನೋಡಬೇಕಿತ್ತು. ಚುನಾವಣಾ ಪೂರ್ವ, ಚುನಾವಣಾ ನಂತರವೂ ಅವರ ಬಾಲೀಶತನ ಸತ್ತಿರಲಿಲ್ಲ. ಏಕೆಂದರೇ ಕಾಂಗ್ರೆಸ್ ಸೋತಿರೋದು ಇದೇನು ಮೊದಲ ಸಲವಲ್ಲ. ಸಮರ್ಥ ಆಡಳಿತ ನಡೆಸಿದ ನಂತರವೂ ಜನತಾ ಪರಿವಾರದ ಹೊಡೆತಕ್ಕೆ ತರಗರಲೆಯಾಗಿ ಹೋಗಿತ್ತು. ಆದರೆ ಒಂದೇ ಟರ್ಮ್ ನಲ್ಲಿ ಆ ಸೋಲನ್ನು ನಿವಾಳಿಸಿ ದಿಗ್ವಿಜಯ ಗಳಿಸಿತ್ತು. ಅವತ್ತು ಅಲ್ಲಿದ್ದವರು `ಪವರ್ಫುಲ್’ ಇಂದಿರಾ ಗಾಂಧಿ. ಇವತ್ತು ಇಲ್ಲಿರೋದು `ಪವರ್ಲೆಸ್’ ರಾಹುಲ್ ಗಾಂಧಿ. ಹಾಗಾಗಿಯೇ ಅವರನ್ನು ದೇಶದಿಂದ ಸ್ಟೇಟ್ಗೆ ತಂದು ಬೆಳೆಸುವ ಪ್ರಯತ್ನವನ್ನು ಪ್ರಶಾಂತ್ ಮಾಡುತ್ತಿದ್ದಾರೆ. ಪ್ರಿಯಾಂಕ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದರೂ ಅವರಿಗ್ಯಾಕೋ ರಾಜಕಾರಣದ ಅಸಕ್ತಿಯೇ ಹೊರಟುಹೋಗಿದೆ. ಆದರೂ ಇಂದಿರೆಯ ತದ್ರೂಪು ಎಂಬ ಕಾರಣಕ್ಕೆ ಜನರು ಮೆಚ್ಚುವ ಸಾಧ್ಯತೆಯನ್ನು ಕಾಂಗ್ರೆಸ್ ಎನ್ಕ್ಯಾಶ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್ ಎಂಬ ಮಹಾ ಪರ್ವತವೊಂದು ಅನನುಭವಿಯ `ಕೈ’ಯಲ್ಲಿ ಸಿಕ್ಕಿ ಅಧಃಪತನಕ್ಕಿಳಿದಿದೆ. ಇನ್ನು ಮುಂದೆಯಾದರೂ ರಾಹುಲ್ ನಿಂದ ಅಧಿಕಾರದ ಚುಕ್ಕಾಣಿಯನ್ನು ಕಿತ್ತುಕೊಂಡು, ಸಮರ್ಥ ನಾಯಕರಿಗೆ ಪಟ್ಟ ಕೊಡದಿದ್ದರೇ.. ಕಾಂಗ್ರೆಸ್ ಅನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ಆ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿರುವ ಕಾಂಗ್ರೆಸ್ ಯಕಃಶ್ಚಿತ್ ಪ್ರಶಾಂತ್ ಮಾತು ಕೇಳಿದರೇ ಉತ್ತರಪ್ರದೇಶದಿಂದ ಅದರ ಯುಗ ಮತ್ತೆ ಆರಂಭವಾಗುತ್ತದೆ. ಇಲ್ಲವೆಂದರೇ- ಮೋದಿ ಹೇಳಿದಂತೆ ಕಾಂಗ್ರೆಸ್ 2024ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ.

POPULAR  STORIES :

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ಬಿಎಂಟಿಸಿ ಬೀಟ್ ಮಾಡಿದ ನಮ್ಮ ಮೆಟ್ರೋ

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!

ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...