ಧ್ವನಿ ಮೂಲಕ ಕೊರೊನಾ ಪರೀಕ್ಷೆ..!

Date:

ಕೊರೊನಯ ವೈರಸ್ ವಿಶ್ವವ್ಯಾಪಿ ಹರಡಿದೆ. ಭಾರತದಲ್ಲಿ ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿವೆ.

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆ ಅಲ್ಲಿನ ಸರ್ಕಾರ ಪರೀಕ್ಷೆಗಳನ್ನು ತೀವ್ರಗೊಳಿಸಿದೆ. ಇದೀಗ ಕೊರೊನಾ ಟೆಸ್ಟಿಂಗ್ ಹೆಚ್ಚಿಸಲು‌ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೊಸ ತಂತ್ರಜ್ಞಾನದೊಂದಿಗೆ ಕೊರೊನಾ ಪರೀಕ್ಷೆ ಪ್ರಾರಂಭಿಸಿದೆ. ಕೊರೊನಾ ಸೋಂಕನ್ನು ಪತ್ತೆಹಚ್ಚಲು ಬಿಎಂಸಿ ಮುಂಬೈನ ದೊಡ್ಡ ಆಸ್ಪತ್ರೆಯಲ್ಲಿ ಧ್ವನಿ ಮಾದರಿ ಪರೀಕ್ಷೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ.

ಈ ತಂತ್ರಜ್ಞಾನದಲ್ಲಿ ವ್ಯಕ್ತಿಯ ಗಂಟಲು ದ್ರವ ಮತ್ತು ನಾಸಿಕದ ದ್ರವ ತೆಗೆದುಕೊಳ್ಳುವ ಅಗತ್ಯವಿಲ್ಲ. ಹೊಸ ತಂತ್ರಜ್ಞಾನದಲ್ಲಿ‌ ಕೇವಲ‌ ವ್ಯಕ್ತಿಯ ಧ್ವನಿಯ ಮೂಲಕ ಕೊರೊನಾವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮೊಬೈಲ್ ಅಪ್ಲಿಕೇಶನ್ ಆಧಾರಿತ ಪರೀಕ್ಷಾ ಸೇವೆಯಾಗಿದೆ.

ಕೋವಿಡ್ -19 ರೋಗಿಗಳನ್ನು ಪತ್ತೆ ಹಚ್ಚಲು ಮುಂಬೈನ ಗೋರೆಗಾಂವ್‌ನ ನೆಸ್ಕೊ ಮೈದಾನದಲ್ಲಿರುವ ಜಂಬೊ ಕೋವಿಡ್ ಕೇರ್ ಕೇರ್ ಸೆಂಟರ್ (nesco covid jumbo facility) ನಲ್ಲಿ ಧ್ವನಿ ಮಾದರಿ ಪರೀಕ್ಷೆಯ ಆಧಾರದ ಮೇಲೆ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಬೃಹನ್ ಮುಂಬೈ ಮುನ್ಸಿಪಲ್
ಕಾರ್ಪೋರೇಷನ್ ತಿಳಿಸಿದೆ. ಇಂತಹ ಧ್ವನಿ ಆಧಾರಿತ ಅಪ್ಲಿಕೇಶನ್‌ಗಳು ಅಥವಾ ಪರಿಕರಗಳನ್ನು ಅನೇಕ ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಬಿಎಂಸಿ ಹೇಳಿದೆ.

ಈ ತಂತ್ರಜ್ಞಾನದಲ್ಲಿ ರೋಗಿಗೆ ಆತನ ಧ್ವನಿಯನ್ನು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ರೆಕಾರ್ಡ್ ಮಾಡಲು ಹೇಳಲಾಗುತ್ತದೆ. ಇದರಲ್ಲಿ ಧ್ವನಿ ವಿಶ್ಲೇಷಣೆ ಅಪ್ಲಿಕೇಶನ್ ಅನ್ನು ಅಪ್‌ಲೋಡ್ ಮಾಡಲಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ, ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ನೀಡಲಾಗುವುದು.

ಈ ಅಪ್ಲಿಕೇಶನ್‌ನಲ್ಲಿ, ರೋಗಿಯ ಧ್ವನಿಯನ್ನು ಆರೋಗ್ಯವಂತ ಮನುಷ್ಯನ ಧ್ವನಿಗೆ ಹೋಲಿಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿ ಈಗಾಗಲೇ ಸಾವಿರಾರು ಧ್ವನಿ ಮಾದರಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಪರೀಕ್ಷೆಯ ಫಲಿತಾಂಶ ಕೇವಲ 30 ಸೆಕೆಂಡುಗಳಲ್ಲಿ ಬರಲಿದೆ ಎಂದು ಬಿಎಂಸಿ ಹೇಳಿಕೊಂಡಿದೆ.

ಈ ವೈಸ್ ಟೆಸ್ಟಿಂಗ್ ಆ್ಯಪ್, ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮನುಷ್ಯನ ಧ್ವನಿಯ ಸುಮಾರು 6300 ಸ್ಯಾಂಪಲ್ ಗಳನ್ನು ಒದಗಿಸಲಾಗಿದೆ.

ಕೊರೊನಾ ಸೋಂಕಿನ ಮೊದಲ ಮತ್ತು ಹೆಚ್ಚಿನ ಪರಿಣಾಮ ಮನುಷ್ಯನ ಶ್ವಾಸಕೋಶದ ಮೇಲೆ ಇರುತ್ತದೆ ಮತ್ತು ಶ್ವಾಸಕೋಶದ ಮೇಲೆ ಯಾವುದೇ ಸಮಸ್ಯೆ ಇದ್ದಾಗಲೆಲ್ಲಾ, ಧ್ವನಿಯು ಮೊದಲು ಪ್ರಭಾವಕ್ಕೆ ಒಳಗಾಗುತ್ತದೆ ಎಂಬುದು ಈ ವೈಸ್ ಟೆಸ್ಟ್ ಹಿಂದಿನ ತರ್ಕವಾಗಿದೆ.

ರೋಗಿಯ ಧ್ವನಿ ಪರೀಕ್ಷೆಯ ಜೊತೆಗೆ ಆರ್‌ಟಿ-ಪಿಸಿಆರ್ (RT-PCR Test) ಪರೀಕ್ಷೆಯನ್ನೂ ಸಹ ಮಾಡಲಾಗುವುದು ಎಂದು ಬಿಎಂಸಿ ಹೇಳಿದೆ. ಇದರಿಂದ ಫಲಿತಾಂಶವು ಶೇ.100 ಸರಿಯಾಗಿ ಬರಲಿದೆ. ಈ ಯೋಜನೆ ಒಂದು ವೇಳೆ ಯಶಸ್ವಿಯಾದರೆ, ಈ ವ್ಯವಸ್ಥೆಯನ್ನು ಮಹಾರಾಷ್ಟ್ರದ  ಇತರ ಪುರಸಭೆಯ ಆಸ್ಪತ್ರೆಗಳಲ್ಲಿಯೂ ಕೂಡ ಬಳಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...