ಯುವರಾಜ್ ಸಿಂಗ್ ಕ್ರಿಕೆಟ್ ನ ಗ್ರೇಟ್ ಫೈಟರ್. ಜೊತೆಗೆ ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಸವಾಲೆಸೆದ ಛಲಗಾರ. ಇದೀಗ ಯುವಿ ಮತ್ತೆ ತಮ್ಮ ಹಳೆಯ ದಿನಗಳನ್ನ ಮೆಲಕು ಹಾಕಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರೋ ಮಕ್ಕಳಿಗೆ ಸ್ಫೂರ್ತಿ ತುಂಬೋ ಮಾತುಗಳನ್ನಾಡಿದ್ದಾರೆ. ಜೊತೆಗೆ ಮತ್ತೆ ನಾನು ಸಿಕ್ಸ್ ಸಿಕ್ಸರ್ ಗಳನ್ನ ಬಾರಿಸ್ತೇನೆ ಅಂತಾ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಅದ್ಭುತ ಆಟಗಾರ. ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ ಮನ್. ಕ್ಯಾನ್ಸರ್ ರೋಗವನ್ನೇ ಜಯಿಸಿ ಬಂದ ವಾರಿಯರ್. ಈ ಛಲಗಾರನ ಕಥೆಯನ್ನ ಕೇಳುವಾಗಲೇ ಮೈ ಮನ ರೋಮಾಂಚನಗೊಳ್ಳುತ್ತೆ. ಯಾಕೆಂದ್ರೆ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್ ಸಿಂಗ್ ಕ್ಯಾನ್ಸರ್ ಮಧ್ಯೆಯೂ ದೇಶದ ಕೀರ್ತಿಯನ್ನ ಹೆಚ್ಚಿಸಲು ಹೋರಾಡಿದ್ದ ಅಪ್ರತಿಮ.
ಇದೇ ಯುವರಾಜ್ ಸಿಂಗ್ 2007ರ ಟಿ-20 ವಿಶ್ವಕಪ್ ನಲ್ಲಿ ಒಂದು ಇತಿಹಾಸವನ್ನ ನಿರ್ಮಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಎಸೆದ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿ ಕ್ರಿಕೆಟ್ ನ ಹಿಸ್ಟರಿ ಬುಕ್ ನಲ್ಲಿ ತನ್ನ ಹೆಸರನ್ನ ಶಾಶ್ವತವಾಗಿ ಬರೆಸಿಕೊಂಡಿದ್ದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನ ಬಾರಿಸಿ ಮೆರೆದಾಡಿದ್ದರು. ಆ ಕ್ಷಣವನ್ನ ಕ್ರಿಕೆಟ್ ಅಭಿಮಾನಿಗಳು ಮರೆಯೋದಕ್ಕೆ ಸಾಧ್ಯವೇ ಇಲ್ಲ.
ಮೊಹಾಲಿಯಲ್ಲಿ ನಡೆದಿದ್ದ ಖಾಸಗೀ ಸಮಾರಂಭವೊಂದರಲ್ಲಿ ಯುವಿ ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ. ಹಳೆಯ ದಿನಗಳನ್ನ ಮೆಲುಕು ಹಾಕುತ್ತಾ “ನಾನು ಮತ್ತೆ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸುತ್ತೇನೆ ಅದನ್ನ ನೀವು ನೋಡಲಿದ್ದೀರಿ. ಅಷ್ಟೆ ಅಲ್ಲ ನೀವು ನಾನು 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಲಿ ಅಂತಾ ದೇವರಲ್ಲಿ ಪ್ರಾರ್ಥಿಸಿ ಅಂತಾ ಹೇಳೋ ಮೂಲಕ ಮತ್ತೆ ಹಳೆ ಫಾರ್ಮ್ ಗೆ ಮರಳೋ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಯುವರಾಜ್ ಸಿಂಗ್ ಕ್ಯಾನ್ಸರ್ ರೋಗವನ್ನ ಜಯಿಸಿ ಬಂದಿದ್ದಾರೆ. ಜೊತೆಗೆ ಯು ವಿ ಕ್ಯಾನ್ ಅನ್ನೋ ಸಂಸ್ಥೆಯನ್ನ ನಡೆಸುತ್ತಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರೋ ಚಿಕ್ಕ ಚಿಕ್ಕ ಮಕ್ಕಳಿಗೆ ಈ ಸಂಸ್ಥೆ ಎಲ್ಲಾ ರೀತಿಯ ಸಹಾಯವನ್ನ ಮಾಡಲಿದೆ.ಯುವರಾಜ್ ಸಿಂಗ್ ತಮ್ಮ ಕಥೆಯನ್ನ ಹೇಳುತ್ತಾ, ಕ್ರಿಕೆಟ್ ನಲ್ಲಿ ಮತ್ತೆ ನಾನು 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಇತಿಹಾಸವನ್ನ ಬರೆಯೋ ಆಶಯ ವ್ಯಕ್ತ ಪಡಿಸಿದ್ದಾರೆ.
- ಶ್ರೀ
POPULAR STORIES :
ಅರಬ್ ರಾಷ್ಟ್ರಗಳಲ್ಲಿ ಅಮಾನವೀಯತೆ..! ನರಳುತ್ತಿದ್ದಾಳೆ ಚಿಕ್ಕಮಗಳೂರಿನ ನಾಜಿಯಾ..!
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?