ಅಂದು ಮನೆಮನೆಗೆ ಹಾಲು ಹಾಕ್ತಿದ್ದವರು ಇಂದು ಅದೆಂಥಾ ಎತ್ತರಕ್ಕೇರಿದ್ದಾರೆ..!

Date:

ಅಂದು ಮನೆಮನೆಗೆ ಹಾಲು ಹಾಕ್ತಿದ್ದವರು ಇಂದು ಅದೆಂಥಾ ಎತ್ತರಕ್ಕೇರಿದ್ದಾರೆ..!

ನಾರಾಯಣ್ ಮಜುಂದಾರ್ . ಇವರು ಸುಮಾರು ವರ್ಷಗಳ ಹಿಂದೆ ಒಂದು ಚಿಕ್ಕ ಕಾಯಕವನ್ನು ಪ್ರಾಂಭಿಸಿದರು. ಒಂದು ಎರಡು ಹಸುಗಳನ್ನು ತೆಗೆದುಕೊಂಡು ಅವುಗಳಿಂದ ಹಾಲು ಸಂಗ್ರಹಿಸಿ ಪ್ರತಿದಿನ ಅವರ ಗ್ರಾಮದಲ್ಲಿ ಮತ್ತು ಪಕ್ಕದ ಗ್ರಾಮಗಳಿಗೆ ಸೈಕಲ್ ನಲ್ಲಿ ಹಾಲು ಹಾಕುವ ಕಾಯಕವನ್ನು ಶುರುಮಾಡಿದರು.
ಹೀಗೆ ತನ್ನ ಕಾಯಕವನ್ನು ಮುಂದವರಿಸಿದ ನಾರಾಯಣ್ ಮಜುಂದಾರ್ ಅವರು ಒಂದು ದಿನ ಯೋಚನೆ ಮಾಡಿದರು. ತಾನು ಜೀವನದಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯಾಗಬೇಕು. ಹತ್ತು ಮಂದಿಗೆ ನನ್ನ ಕೈಲಾದ ಸಹಾಯವನ್ನು ಮಾಡಬೇಕು ಅನ್ನೋದನ್ನ ಯೋಚನೆ ಮಾಡುತಿದ್ದರು.


ಅದೇನೋ ನಾರಾಯಣ್ ಮಜುಂದಾರ್ ಅವರ ಯೋಚನೆ ಒಂದು ದಿನ ಒಂದು ದೊಡ್ಡ ಕೆಲಸವನ್ನು ಮಾಡಲು ಪ್ರೇರೇಪಿಸಿತು. ತನ್ನ ಗ್ರಾಮದಲ್ಲಿ ಇವರಂತೆ ಹಾಲು ಸಂಗ್ರಹಿಸಿ ಮಾರುವ ಅನೇಕರ ಬಳಿ ಹೋಗಿ ಅವರ ಹಾಲನ್ನು ಮಜುಂದಾರ್ ತೆಗೆದುಕೊಂಡ್ರು. ಅವರು ಸಂಗ್ರಹಿಸಿದ ಹಾಲನ್ನು ಮಜುಂದಾರ್ ತಮ್ಮ ಹಾಲಿನೊಂದಿಗೆ ಸೇರಿಸಿಕೊಂಡು ಒಂದು ಚಿಕ್ಕ ಹಾಲಿನ ಡೈರಿಯನ್ನು ಆರಂಭಿಸಿದ್ರು.
ಆದರೆ, ಆ ದಿನಗಳು ನಾರಾಯಣ್ ಮಜುಂದಾರ್ ಅವರಿಗೆ ಸುಲಭವಾಗಿರಲಿಲ್ಲ . ಏಕೆಂದರೆ ನಾರಾಯಣ್ ಮಜುಂದಾರ್ ಅವರು ತುಂಬ ಬಡತನದಲ್ಲಿದ್ದವರು. ಆರ್ಥಿಕವಾಗಿ ಚೆನ್ನಾಗಿದಿದ್ದರೆ ಹಾಲು ಸಂಗ್ರಹಿಸಲು ಒಂದು ಚಿಕ್ಕ ವಾಹನವನ್ನ ಖರೀದಿ ಮಾಡುತ್ತಿದ್ದರು. ಆದರೆ, ಅದಕ್ಕೆ ಅವರ ಬಳಿ ಸ್ವಲ್ಪವೂ ಹಣವಿರಲಿಲ್ಲ. ಹಾಗಾಗಿ ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸುತ್ತ ಮುಂದೆ ಸಾಗಿದರು.
ನೋಡಿ, ನಾರಾಯಣ್ ಮಜುಂದಾರ್ ಅವರು ಹೇಗೋ ಏನೋ, ಬೈಸಿಕಲ್ ನಲ್ಲಿ ತನ್ನ ಗ್ರಾಮ ಮತ್ತು ಸುತ್ತಮುತ್ತಲ ಹಳ್ಳಿಗಳ ರೈತರಿಂದ ಹಾಲು ಸಂಗ್ರಹಿಸಿ ತನ್ನ ಡೈರಿ ವ್ಯವಹಾರ ನಡೆಸಿದರು. ಹೀಗೆ ಕಾಲಕಳೆದಂತೆ ಇವರ ಡೈರಿ ತುಂಬಾ ಉತ್ತಮ ರೀತಿಯಲ್ಲಿ ಆದಾಯವನ್ನು ತರುವಂತಹ ಕೆಲಸ ಮಾಡಿತು. ಮಜುಂದಾರ್ ಅವರು ತಮ್ಮ ಡೈರಿಯನ್ನು ಒಂದರಿಂದ ಎರಡಕ್ಕೆ ಹೆಚ್ಚಿಸಿ, ತಮ್ಮ ಕೆಲಸವನ್ನು ಮುಂದುವರಿಸಿದರು.


ಎರಡು ದಶಕಗಳ ನಂತರ ಮತ್ತು ಅನೇಕ ವರ್ಷಗಳ ಹೋರಾಟದ ಪ್ರತಿಫಲವಾಗಿ ಮಜುಂದಾರ್ ಅವರು ಪಶ್ಚಿಮ ಬಂಗಾಳದ ಎಂಟು ಜಿಲ್ಲೆಗಳಲ್ಲಿ ತಮ್ಮ ರೆಡ್ ಕವ್ ಹಾಲಿನ ಡೈರಿಗಳನ್ನು ನಡೆಸುತ್ತಿದ್ದಾರೆ. ಇವರ ಡೈರಿಯಲ್ಲಿ ಅನೇಕರು ದುಡಿಯುತ್ತಿದ್ದಾರೆ. ಈ ಮೂಲಕ ಅವರು ಹಲವು ಕುಟುಂಬಗಳಿಗೆ ನೆರವಾಗಿದ್ದಾರೆ. ತಾವೊಬ್ಬರೇ ಅಲ್ಲ, ತಮ್ಮೊಂದಿಗೆ ಎಲ್ಲರಿಗೂ ಬದುಕು ಕಟ್ಟಿಕೊಟ್ಟಿದ್ದಾರೆ.
ಮಜುಂದಾರ್ ಅವರ ಕಂಪನಿ ರೆಡ್ ಕವ್ ಮೂರು ಹಾಲು ಸಂಸ್ಕರಣ ಘಟಕಗಳು ಮತ್ತು 22 ಹಾಲಿನ ಚಿಲ್ಲಿಂಗ್ ಸಸ್ಯಗಳನ್ನು ಹೊಂದಿದ್ದು, ಇದೀಗ ಪೂರ್ವ ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ರೆಡ್ ಕವ್ ಡೈರಿಯ ವಾರ್ಷಿಕ ವಹಿವಾಟುಸುಮಾರು 255 ಕೋಟಿಗೂ ಹೆಚ್ಚು.


ಏನೇ ಹೇಳಿ, ಮನುಷ್ಯನಿಗೆ ಸಾಧಿಸುವ ಛಲಬೇಕು, ಆಗಲೇ ಏನಾದರು ಸಾಧಿಸಲು ಸಾಧ್ಯ ಎನ್ನುವುದನ್ನು ಹಾಲಿನ ಮನುಷ್ಯ ಮಜುಂದಾರ್ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಆದರ್ಶರಾಗಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...