ಬಿಯರ್ ಕುಡಿಯಿರಿ ದುಡ್ಡು ಪಡೀರಿ..! ಇಂಥಾ ಎಂಥೆಂಥಾ ಕೆಲಸಗಳಿವೆ ಗೊತ್ತಾ?

Date:

ಬಿಯರ್ ಕುಡಿಯಿರಿ ದುಡ್ಡು ಪಡೀರಿ..! ಇಂಥಾ ಎಂಥೆಂಥಾ ಕೆಲಸಗಳಿವೆ ಗೊತ್ತಾ?

ಕೆಲಸ.. ಕೆಲಸ.. ಕೆಲಸ.. ಎಲ್ಲಿ ನೋಡಿದರೂ ಕೆಲಸದ್ದೇ ಮಾತು. ನಮ್ಮ ಕಡೆ ಗವರ್ನಮೆಂಟ್ ಕೆಲಸ ಸಿಕ್ಕರೆ ಸಾಕು ಮನೆ ಮುಂದೆ ಹೆಣ್ಣಿನ ತಂದೆಯರು ಕ್ಯೂ ನಿಲ್ಲುತ್ತಾರೆ. ಇನ್ನೂ ಕೆಲ ಪ್ರೈವೇಟ್ ಕೆಲಸಗಳನ್ನು ಹೊಂದಿದವರಿಗೂ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ನೀಡುತ್ತಾರೆ. ಆದರೆ ಜಗತ್ತಿನಲ್ಲಿ ಅತಿ ವಿಚಿತ್ರ ಕೆಲವು ಕೆಲಸಗಳಿವೆ. ಇಷ್ಟಕ್ಕೂ ಅವು ಯಾವು ಅಂತೀರಾ ನೀವೇ ನೋಡಿ..

1. ಸತ್ತಾಗ ಅಳುವ ಕೆಲಸ..!

ಭಾರತದಲ್ಲಿ ಸಂಬಧಿಕರು ಸತ್ತಾಗ ಅಳದಿರುವ ಮಂದಿಯೂ ಇದ್ದಾರೆ. ಅದನ್ನು ಮರೆಮಾಚಲಿಕ್ಕಾಗಿಯೇ ಅಳುವವರನ್ನು ದುಡ್ಡುಕೊಟ್ಟು ಕರೆಸುವವರೂ ಇದ್ದಾರೆ. ಇಷ್ಟಕ್ಕೂ ಕೆಲವೇ ಕೆಲವು ಹನಿ ಕಣ್ಣೀರು ಸುರಿಸಿದರೆ ಸಾಕು ಕೈತುಂಬ ದುಡ್ಡು, ಹೊಟ್ತುಂಬಾ ಊಟ ಸಿಗುತ್ತೆ..!

2. ಮದುವೆಯಲ್ಲಿ ಸ್ಟೆಪ್ ಹಾಕಿ ಹಣ ಪಡೆಯಿರಿ

ಮದುವೆಯೆಂದರೆ ಸಂಭ್ರಮ ಮನೆ ಮಾಡಿರುತ್ತದೆ. ಅಲ್ಲಿ ವಿಚಿತ್ರವಾಗಿ, ವಿಭಿನ್ನವಾಗಿ ಸ್ಟೆಪ್ ಹಾಕಿ ಮನರಂಜನೆ ಒದಗಿಸುವವರಿಗೆ ಭರ್ಜರಿ ಕಮಾಯಿ ಆಗುತ್ತದೆ. ಹೇಗೆ ಡ್ಯಾನ್ಸ್ ಮಾಡುತ್ತಾರೋ ಹಾಗೆ ಹಣ ಬೀಳುತ್ತಲೇ ಇರುತ್ತದೆ. ಅದು ರೇಂಜಿಗೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಅದರಲ್ಲೂ ಮೆರವಣಿಗೆಯಲ್ಲಿ ಡ್ಯಾನ್ಸ್ ಮೂಲಕ ಮೋಡಿ ಮಾಡಿದರಂತೂ ಕಮಾಯಿ ಹೆಚ್ಚುತ್ತಾ ಹೋಗುತ್ತದೆ.

3. ಪ್ರತಿಭಟನೆಯಲ್ಲಿ ಭಾಗಿಯಾಗುವ ಕೆಲಸ

ನಮ್ಮ ರಾಜಕಾರಣಿಗಳು ಬಂದಾಗ ಹೆಚ್ಚಿನ ಜನರು ಬಂದಿದ್ದಾರೆ ಎಂದು ತೋರಿಸಿಕೊಳ್ಳಲು ಹಣ ಕೊಟ್ಟು ಜನರನ್ನು ಕರೆಸುವ ಪದ್ದತಿ ಬಹು ಕಾಲದಿಂದಲೂ ಜೀವಂತವಾಗಿದೆ. ಇಷ್ಟಕ್ಕೂ ಒಮ್ಮೆ ಜೈ ಅಂದರೆ ಸಾಕು ಬೆಳಿಗ್ಗೆ ಬಿರಿಯಾನಿ, ರಾತ್ರಿ ಎಣ್ಣೆ ಎರಡೂ ಉದ್ರಿಯಾಗಿ ಸಿಗುತ್ತದೆ. ಮೇಲೆ ಹಣವೂ ಸಿಗುತ್ತೆ..! ಇಂಥ ಶ್ರಮವಿಲ್ಲದ ಕೆಲಸವನ್ನು ಯಾರಾದರೂ ಬಿಡುತ್ತಾರೆಯೇ..?

4. ಬಾಡಿಗೆಗೆ ಬಾಯ್ ಫ್ರೆಂಡ್

ಕಾಲ ತುಂಬಾ ಕೆಟ್ಹೋಯ್ತು ಕಣ್ರೀ.. ಅತ್ತ ಕಡೆ ಲವ್ ಮಾಡಲೂ ಆಗದ, ಮಾಡದೆಯೂ ಇರಲಾಗದ ಹುಡುಗಿಯರು ಬಾಡಿಗೆ ಬಾಯ್ ಫ್ರೆಂಡ್ಸ್ ಗಳಿಗೆ ಇಂತಿಷ್ಟು ದಿನಕ್ಕೆಂದು ಜೊತೆಗಿರಲು ಹಣ ಕೊಟ್ಟು ಕರೆದೊಯ್ಯುತ್ತಾರೆ. ಇದು ಜಪಾನ್ನಲ್ಲಿ ಹೆಚ್ಚು ಪಾಪುಲರ್ ಆಗಿದೆಯಂತೆ. ಇಷ್ಟಕ್ಕೂ ಈ ಕೆಲಸ ಒಂಥರಾ ಮಜವಾಗಿದೆ ಎನಿಸಿದರೂ, ಕೆಲವೊಂದು ಕಂಡೀಷನ್ಸ್ ಅಪ್ಲೇ ಆಗುತ್ತವೆ.

5. ದೇಹ ಮೂಸುವ ಜಾಬ್

ಯೆಸ್ ಜಗತ್ತಿನ ಮೇಲೆ ಇಂಥದ್ದೊಂದು ಕರ್ಮದ ಕೆಲಸವೂ ಇದೆ. ಇಷ್ಟಕ್ಕೂ ಇದರ ವಿಶೇಷತೆ ಏನೆಂದರೆ ಕೆಲ ಡಿಯೋಡ್ರಂಟ್ ಕಂಪನಿಗಳು ತಮ್ಮ ಪ್ರಾಡಕ್ಟ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೋಡಲು ಕೆಲವ ಮೂಸುವವರನ್ನು ನೇಮಿಸಿಕೊಳ್ಳುತ್ತಾರೆ. ಇಷ್ಟಕ್ಕೂ ಈ ಕೆಟ್ಟ ಜಾಬ್ಗೂ ಉತ್ತಮ ಸಂಬಳವೂ ಇದೆ. ಹಾಗೆಯೇ ರೋಗವೂ ಅಂಟುತ್ತದೆ.

6. ಕಿವಿ ಕ್ಲೀನ್ ಮಾಡುವವರು

ಮನುಷ್ಯನಿಗೆ ಕಿವಿ ಕೇಳದಿದ್ದರೆ ಎಂತೆಂಥಾ ಸಮಸ್ಯೆಗಳು ತಲೆದೋರುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಅಂಥದರಲ್ಲಿ ಕಿವಿ ಕ್ಲೀನ್ ಮಾಡುವುದೆಂದರೆ ಮಹಾನ್ ಕಾರ್ಯವಲ್ಲದೇ ಮತ್ತಿನ್ನೇನು. ಇಷ್ಟಕ್ಕೂ ಉತ್ತರ ಕರ್ನಾಟಕದ ಕೆಲ ಬಸ್ ಸ್ಟಾಂಡ್ ಗಳಲ್ಲಿ ಕಿವಿ ಕ್ಲೀನ್ ಮಾಡುವವರಿದ್ದಾರೆ. ಒಂದು ಕಿವಿಗೆ 10 ರೂಪಾಯಿ ಅಷ್ಟೇ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

7. ನಾಯಿ ಊಟ ಟೆಸ್ಟ್ ಮಾಡುವವ

ಯೆಸ್ ನಾಯಿಗಿಂತಲೂ ಕಡೆಯಾದ ಜಾಬ್ ಇದೇ..! ನಾಯಿಗಾಗಿ ತಯಾರಿಸಲಾಗುವ ಊಟವನ್ನು ಟೇಸ್ಟ್ ಮಾಡಬೇಕು. ಅದು ಹೇಗಿದೆ ಎಂದು ಹೇಳಿದರೆ ಸಾಕು ಕೆಲಸ ಮುಗಿದಂತೆ..! ಅಪ್ಪಿತಪ್ಪಿ ಟೇಸ್ಟ್ ಮಿಸ್ಟೇಕ್ ಆದರೆ ಹೊಗೆ ಹಾಕಿಸಿಕೊಳ್ಳಬೇಕಾಗುತ್ತದೆ.

8 ಬೀಯರ್ ಕುಡಿಯಿರಿ ದುಡ್ಡು ಪಡೆಯಿರಿ

ಯೆಸ್ ಇಂಥ ಅದೃಷ್ಟದ ಕೆಲಸವೂ ಇದೆ ಕಣ್ರೀ.. ಮೊದಲಿಗೆ ಬಿಯರ್ ತಯಾರು ಮಾಡಲಾಗುತ್ತದೆ. ನಂತರ ಅದನ್ನು ಕುಡಿಯಲೆಂದೇ ನೇಮಕವಾದವರಿಗೆ ನೀಡಲಾಗುತ್ತದೆ. ಬೀಯರ್ ಟೇಸ್ಟ್ ಸರಿಯಾಗಿದೆಯಾ ಅಂತ ಹೇಳಿದರೆ ಸಾಕು, ಹಣ ಜೇಬು ಸೇರುತ್ತದೆ. ಆದರೆ ಇಲ್ಲೂ ಒಂದು ಕಂಡೀಷನ್ ಇದೆ. ಅದೇನೆಂದರೆ ಒಂದು ಪೆಗ್ ಮಾತ್ರ ನೀಡುತ್ತಾರಂತೆ ಆ ಜಿಪುಣರು.

 

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...