ಹೊಸ ವರ್ಷ ಅಂದ್ರೆ ಪಾರ್ಟಿ ಮೋಜು ಮಾಡ್ಬೇಕಂತ ಜನರು ಕಾಯ್ತಾ ಇರ್ತಾರೆ ಆದರೆ ಅದಕ್ಕಿಂತ ಮುಂಚೆ ಈ ಸುದ್ದಿ ನೋಡಿ.. ಹೊಸವರ್ಷದ ಸಂಭ್ರಮಾಚರಣೆಯ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ 31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆಯವರೆಗೆ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 5ಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವಂತಿಲ್ಲ, ಅಪಾರ್ಟ್‍ಮೆಂಟ್‍ಗಳು, ಕ್ಲಬ್‍ಹೌಸ್‍ನಲ್ಲಿ ಹೊರಗಿನವರಿಗೆ ಯಾವುದೇ ತೊಂದರೆಯಾಗದಂತೆ ಹೊಸ ವರ್ಷಾಚರಣೆ ಮಾಡಬಹುದು. ಅದೇರೀತಿ ಪಬ್, ರೆಸ್ಟೋರೆಂಟ್‍ಗಳು ಎಂದಿನಂತೆ ತೆರೆಯಬಹುದು. ಸರ್ಕಾರ ನೀಡಿದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಅನಿವಾರ್ಯತೆ ಇದ್ದರೆ ಮಾತ್ರ ಹೊರಗೆ ಬರಬೇಕೆಂದು ಪೊಲೀಸರ ಸೂಚನೆ ನೀಡಿದ್ದಾರೆ. ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಇರುತ್ತದೆ ಕುಡಿದ ಅಮಲಿನಲ್ಲಿ ವಾಹನ ಸಂಚಾರ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಹೇಳಿದ್ದಾರೆ.