ಬ್ರಹ್ಮಾನಂದಂ.. ಇವರ ಹೆಸರು ಕೇಳುತ್ತಿದ್ದಂತೆಯೇ ಮುಖದಲ್ಲಿ ನಗು ಮೂಡುತ್ತದೆ. ತೆಲುಗು ಚಿತ್ರಗಳನ್ನು ವೀಕ್ಷಿಸುವವರಿಗೆ ಈ ಕಲಾವಿದ ಅಚ್ಚುಮೆಚ್ಚು. ಬ್ರಹ್ಮಾನಂದಂ ಅವರು ತೆರೆಮೇಲೆ ಬಂದರೆ ಸಾಕು ಪ್ರೇಕ್ಷಕರು ನಗದೇ ಇರಲಾರರು.. ಬ್ರಹ್ಮಾನಂದಂ ಅವರು ನೋಡಲು ಸಹ ಕಾಮಿಡಿಯನ್ ತರಹ ಇದ್ದಾರೆ. ಅವರು ನಕ್ಕುನಲಿಸುವ ವಿಧಾನ ನೋಡಿದರೆ ಇವರು ನಗಿಸಲು ಎಂದೇ ಹುಟ್ಟಿದ್ದಾರೆ ಎನಿಸದೆ ಇರಲಾರದು..
ಇಷ್ಟು ಹಾಸ್ಯಪ್ರಜ್ಞೆ ಇರುವ ನಟನಲ್ಲಿ ಒಬ್ಬ ಚಿತ್ರಕಾರ ಇದ್ದಾನೆ ಎಂದರೆ ನೀವೆಲ್ಲ ನಂಬಲೇಬೇಕು. ಹೌದು ಬ್ರಹ್ಮಾನಂದಂ ಅವರು ಕೇವಲ ಕಾಮಿಡಿಯನ್ ಮಾತ್ರವಲ್ಲ, ಅವರಲ್ಲಿ ಕಲೆಗಳ ಭಂಡಾರವೇ ಇದೆ. ಈ ಹಿಂದೆ ಮಣ್ಣಿನ ಗಣಪತಿಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದ ಬ್ರಹ್ಮಾನಂದಂ ಅವರು ಇದೀಗ ತಿರುಪತಿ ತಿಮ್ಮಪ್ಪನ ಚಿತ್ರವನ್ನು ಬಿಡಿಸಿ ಮತ್ತೊಮ್ಮೆ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಹೌದು ಪೂಜಾರಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುತ್ತಿರುವ ಚಿತ್ರವನ್ನು ಯಾವ ಚಿತ್ರಕಾರನಿಗೆ ಕಡಿಮೆ ಇಲ್ಲದಂತೆ ಬಿಡಿಸಿ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಇದೀಗ ಬ್ರಹ್ಮಾನಂದಂ ಅವರ ಒಂದು ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬ್ರಹ್ಮಾನಂದಂ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕೇವಲ ಒಬ್ಬ ಕಾಮಿಡಿಯನ್ನಾಗಿ ಮಾತ್ರವಲ್ಲದೇ ಬ್ರಹ್ಮಾನಂದಂ ಅವರು ಹಲವಾರು ಕಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಅದ್ಭುತ ಸಂಗತಿಯೇ ಸರಿ..