ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಮತ್ತು ಡಿವೈ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಸ್‌ಬಿಐ ಎಸ್‌ಒ ಹುದ್ದೆಗಳ ವಿವರ
ಮ್ಯಾನೇಜರ್ (ಮಾರ್ಕೆಟಿಂಗ್)12ಡೆಪ್ಯೂಟಿ ಮ್ಯಾನೇಜರ್ (ಮಾರ್ಕೆಟಿಂಗ್)26ಮ್ಯಾನೇಜರ್ (ಕ್ರೆಡಿಟ್ ಪ್ರೋಸೀಜರ್)2ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಮ್ )183ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್)17ಐಟಿ ಸೆಕ್ಯೂರಿಟಿ ಎಕ್ಸ್‌ಪರ್ಟ್15ಪ್ರಾಜೆಕ್ಟ್ ಮ್ಯಾನೇಜರ್14ಅಪ್ಲಿಕೇಶನ್ ಆರ್ಕಿಟೆಕ್ಟ್5ಟೆಕ್ನಿಕಲ್ ಲೀಡ್2ಅಸಿಸ್ಟಂಟ್ ಮ್ಯಾನೇಜರ್ (ಸೆಕ್ಯೂರಿಟಿ ಮ್ಯಾನೇಜರ್)40ಡೆಪ್ಯೂಟಿ ಮ್ಯಾನೇಜರ್ (ಸೆಕ್ಯೂರಿಟಿ ಅನಾಲಿಸ್ಟ್)60ಮ್ಯಾನೇಜರ್ (ನೆಟ್‌ವರ್ಕ್ ಸೆಕ್ಯೂರಿಟಿ ಸ್ಪೆಷಲಿಸ್ಟ್)12ಮ್ಯಾನೇಜರ್ (ನೆಟ್‌ವರ್ಕ್ ರೌಟಿಂಗ್ ಮತ್ತು ಸ್ವಿಚ್ಚಿಂಗ್ ಸ್ಪೆಷಲಿಸ್ಟ್)20ಡೆಪ್ಯೂಟಿ ಮ್ಯಾನೇಜರ್ (ಇಂಟರ್‌ನಲ್ ಆಡಿಟ್ )28ಇಂಜಿನಿಯರ್16
ಮೇಲಿನ ಹುದ್ದೆಗಳಿಗೆ ಅನುಗುಣವಾಗಿ ಎಂಬಿಎ / ಪಿಜಿಡಿಎಂ / ಪದವಿ / ಸ್ನಾತಕೋತ್ತರ ಪದವಿ / ಬಿಇ, ಬಿ.ಟೆಕ್ / ಸಿಎ / ಬಿಎಸ್ಸಿ ಪಾಸ್ ಮಾಡಿರಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ – 22-12-2020
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ – 11-01-2021
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – 11-01-2021
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – 11-01-2021
ಅಪ್ಲಿಕೇಶನ್ ಮಾಹಿತಿಗಳನ್ನು ಎಡಿಟ್ ಮಾಡಲು ಕೊನೆ ದಿನಾಂಕ – 11-01-2021
ಅಪ್ಲಿಕೇಶನ್ ಮಾಹಿತಿಗಳನ್ನು ಎಡಿಟ್ ಮಾಡಲು ಕೊನೆ ದಿನಾಂಕ – 11-01-2021
ಫೇಸ್-1 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ – 2021 ಜನವರಿ ಕೊನೆ ವಾರ
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತರು ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ https://www.sbi.co.in/ ಗೆ ಭೇಟಿ ನೀಡಿರಿ.
ದೇಶದ ಮೊದಲ ಕೊರೋನಾ ಲಸಿಕೆಗೆ ಡಿಸಿಜಿಐ ಒಪ್ಪಿಗೆ
ಹೊಸದಿಲ್ಲಿ: ಆಶಾದಾಯಕ ಬೆಳವಣಿಗೆಯೊಂದರಲ್ಲಿ ದೇಶದ ಮೊಟ್ಟ ಮೊದಲ ಕೊರೊನಾ ವೈರಸ್ ಲಸಿಕೆಗೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.
ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗಳ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ, ಶೀಘ್ರದಲ್ಲೇ ಈ ಲಸಿಕೆ ಹಂಚಿಕೆ ಹಾಗೂ ವಿತರಣೆಗೆ ಮುಂದಡಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಎರಡೂ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದೂ ಡಿಸಿಜಿಐ ತಿಳಿಸಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿಸಿಜಿಐ, ಕೇಂದ್ರ ತಜ್ಞ ಸಮಿತಿ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ ಎಂದಿದೆ.
ಕೇಂದ್ರ ತಜ್ಞ ಸಮಿತಿ ಶಿಫಾರಸಿನ ಅನ್ವಯ ನಾವು ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಅನುಮತಿ ನೀಡಿದ್ದು, ಸರ್ಕಾರ ಈಗಾಗಲೇ ಇವುಗಳ ಹಂಚಿಕೆ ಹಾಗೂ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಡಿಸಿಜಿಐ ಮುಖ್ಯಸ್ಥರು ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಭಾರತದ ಸುದೀರ್ಘ ಹೋರಾಟ ಮಹತ್ವದ ಘಟ್ಟ ತಲುಪಿದ್ದು, ಕೊರೊನಾ ಲಸಿಕೆ ಸಾರ್ವತ್ರಿಕ ಬಳಕೆ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಡಿಸಿಜಿಐ ಬಣ್ಣಿಸಿದೆ.
ಹಲವು ಹಂತಗಳಲ್ಲಿ ಕೊರೊನಾ ಲಸಿಕೆಯನ್ನು ಜನರಿಗೆ ನೀಡಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದ್ದು, ಈ ಹಂತಗಳ ಪರಿಣಾಮಕಾರಿ ಜಾರಿ ಸರ್ಕಾರದ ಜವಾಬ್ದಾರಿ ಎಂದು ಡಿಸಿಜಿಐ ಹೇಳಿದೆ.
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಆರಂಭವಾದ ಮೇಲೆ, ಇದೇ ಮೊದಲ ಬಾರಿಗೆ ಲಸಿಕೆಯೊಂದಕ್ಕೆ ಸಾರ್ವತ್ರಿಕ ಬಳಕೆಯ ಅನುಮತಿ ನೀಡಲಾಗಿದೆ. ಹಲವು ಸುತ್ತಿನ ಕಠಿಣ ಪರೀಕ್ಷೆ ಬಳಿಕ ಈ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಡಿಸಿಜಿಐ ಸ್ಪಷ್ಟಪಡಿಸಿದೆ.
ಸೌರವ್ ಗಂಗೂಲಿಗೆ ಹೃದಯಾಘಾತ! ಈಗ ಹೇಗಿದ್ದಾರೆ? ಅಭಿಮಾನಿಗಳಲ್ಲಿ ಆತಂಕ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ, ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಇನ್ನೂ 24 ಗಂಟೆಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿರಲಿದ್ದಾರೆ. ಗಂಗೂಲಿ ಅವರರನ್ನು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಕ್ರಿಕೆಟ್ ಜಗತ್ತು ಗೊಂದಲದಲ್ಲಿದೆ.
ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಲವು ಪ್ರಮುಖ ವ್ಯಕ್ತಿಗಳು, ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಶಿಸುತ್ತಿದ್ದಾರೆ.ಸೌರವ್ ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನ ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಅವರಿಗೆ ಪ್ರಸ್ತುತ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್ ಖಾನ್ ಅವರು, ‘ಸದ್ಯ ಗಂಗೂಲಿ ಅವರ ಆರೋಗ್ಯದ ಕುರಿತು 24 ಗಂಟೆಗಳ ಕಾಲ ನಿಗಾವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.