ಕೆಲವು ದಿನಗಳ ಹಿಂದೆ ಅಡ್ರೆಸ್ಸ್ ಪ್ರಕರಣ ಎಂದರೆ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಮಾಡಿತ್ತು ಸಿಸಿಬಿ ಪೊಲೀಸರು ದಿನಕ್ಕೊಬ್ಬರಂತೆ ವಿಚಾರಣೆಗೆ ಕರೆದು ಡ್ರಗ್ಸ್ ಮಾರಾಟ ಹಾಗೂ ಸೇವನೆಯ ಆಧಾರದ ಮೇಲೆ ಬಂಧಿಸಿದ್ದರು. ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಲ್ಲಿ ಇದೀಗ ಮತ್ತೊಂದು ನಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಜೈಲಿನಲ್ಲಿ ಇರುವ ರಾಗಿಣಿ ಹಾಗೂ ಸಂಜನಾ ಹಾಗೂ ಮತ್ತಿತರ ಆರೋಪಿಗಳು ಇದೀಗ ಮುಂಬೈ ಡ್ರಗ್ ಪೆಡ್ಲರ್ ಕರೀಂನ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಬಂಧಿಸಿದ್ದರು. ಇದೀಗ ಎನ್.ಸಿ.ಬಿ ಅಧಿಕಾರಿಗಳು ಆತ ನೀಡಿದ ಮಾಹಿತಿಯನ್ನು ಪಡೆದು ಆದರ ಆಧಾರದ ಮೇಲೆ ಹೈದರಾಬಾದ್‌ನಲ್ಲಿ ನಟಿ ಶ್ವೇತಾ ಕುಮಾರಿ ಅನ್ನು ಬಂಧಿಸಿದ್ದಾರೆ.
ಶ್ವೇತ ಕುಮಾರಿ ಅವರು ಕನ್ನಡದ ರಿಂಗ್ ಮಾಸ್ಟರ್ ಎಂಬ ಚಿತ್ರದಲ್ಲಿ ನಟಿಸಿದ್ದರು ಹಾಗೂ ಕನ್ನಡ ಮಾತ್ರವಲ್ಲದೇ ಇತರ ತೆಲುಗು ಸಿನಿಮಾ ಉದ್ಯಮದಲ್ಲಿ ಹೆಚ್ಚು ಸಂಪರ್ಕ ಹೊಂದಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿರುವ ಶ್ವೇತಾ, ಒಂದು ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ನಟಿ ಶ್ವೇತಾ, ಡ್ರಗ್ಸ್ ಪಡೆಯುತ್ತಿದ್ದರಲ್ಲದೆ, ಡ್ರಗ್ಸ್ ಮಾರಾಟದಲ್ಲಿಯೂ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.